AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rejection: ಆಸ್ಟ್ರೇಲಿಯಾ ಯೂನಿವರ್ಸಿಟಿಗಳಲ್ಲಿ ಭಾರತದ ಈ 5 ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲವಾ? ಏನು ಕಾರಣ?

Students Of 5 Indian States Not Allowed In Australia: ಇತ್ತೀಚಿನ ವರ್ಷಗಳಿಂದ ಆಸ್ಟ್ರೇಲಿಯನ್ ಯೂನಿವರ್ಸಿಟಿಗಳು ಭಾರತೀಯ ವಿದ್ಯಾರ್ಥಿಗಳ ಅರ್ಜಿಗಳನ್ನು ಅವಲೋಕಿಸಿ ಫಿಲ್ಟರ್ ಮಾಡುತ್ತಿವೆ. ಕೆಲ ನಿರ್ದಿಷ್ಟ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡದಿರಲು ನಿರ್ಧರಿಸುತ್ತಿವೆ ಎಂಬಂತಹ ಸುದ್ದಿ ದಟ್ಟವಾಗಿ ಕೇಳಿಬರುತ್ತಿದೆ.

Rejection: ಆಸ್ಟ್ರೇಲಿಯಾ ಯೂನಿವರ್ಸಿಟಿಗಳಲ್ಲಿ ಭಾರತದ ಈ 5 ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲವಾ? ಏನು ಕಾರಣ?
ಆಸ್ಟ್ರೇಲಿಯಾ ಯೂನಿವರ್ಸಿಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 06, 2023 | 5:37 PM

Share

ನವದೆಹಲಿ: ವಿದೇಶಗಳಲ್ಲಿ ಉನ್ನತ ವ್ಯಾಸಂಗ (Higher Education) ಮಾಡಬಯಸುವ ಭಾರತೀಯರ ಮನಸಿಗೆ ಬರುವ ಮೊದಲ ಹೆಸರುಗಳಲ್ಲಿ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಇರುತ್ತವೆ. ಇಲ್ಲಿ ಸುಲಭವಾಗಿ ಅಡ್ಮಿಶನ್ ಸಿಗುತ್ತದೆ ಎಂಬುದು ಹಾಗೂ ಭಾರತೀಯ ಸುಮುದಾಯದವರು ಬಹಳ ಮಂದಿ ಇಲ್ಲಿದ್ದಾರೆ ಎಂಬುದು ಭಾರತೀಯ ವಿದ್ಯಾರ್ಥಿಗಳ ಸಹಜ ಆಯ್ಕೆಗಳಲ್ಲಿ ಆಸ್ಟ್ರೇಲಿಯಾ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಿಂದ ಅಲ್ಲಿನ ಯೂನಿವರ್ಸಿಟಿಗಳು ಭಾರತೀಯ ವಿದ್ಯಾರ್ಥಿಗಳ ಅರ್ಜಿಗಳನ್ನು ಅವಲೋಕಿಸಿ ಫಿಲ್ಟರ್ ಮಾಡುತ್ತಿವೆ. ಕೆಲ ನಿರ್ದಿಷ್ಟ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡದಿರಲು ನಿರ್ಧರಿಸುತ್ತಿವೆ ಎಂಬಂತಹ ಸುದ್ದಿ ದಟ್ಟವಾಗಿ ಕೇಳಿಬರುತ್ತಿದೆ. ಎಲ್ಲ ಯೂನಿವರ್ಸಿಟಿಗಳು ಅಲ್ಲವಾದರೂ ಅನೇಕ ವಿವಿಗಳು ಇಂಥ ಕ್ರಮ ಅನುಸರಿಸುತ್ತಿರುವುದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಭಾರತದ ಐದು ರಾಜ್ಯಗಳ ವಿದ್ಯಾರ್ಥಿಗಳ ಅರ್ಜಿಗಳನ್ನು ಯಾವುದೇ ಪರಿಶೀಲನೆ ಇಲ್ಲದೇ ಕಣ್ಮುಚ್ಚಿ ತಿರಸ್ಕರಿಸಲಾಗುತ್ತಿದೆಯಂತೆ. ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಉತ್ತರಾಖಂಡ್ ಮತ್ತು ಗುಜರಾತ್, ಈ ಐದು ರಾಜ್ಯಗಳಾಗಿವೆ. ಇದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಕೆಲ ಪ್ರದೇಶಗಳೂ ಪಟ್ಟಿಯಲ್ಲಿವೆ. ಇಲ್ಲಿಂದ ಬರುವ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ಹೊಂದಿರುತ್ತಾರೆ ಎಂದು ಆಸ್ಟ್ರೇಲಿಯನ್ ಯೂನಿವರ್ಸಿಟಿಗಳು ಸಾಮಾನ್ಯೀಕರಿಸುತ್ತಿವೆ. ಇದಕ್ಕೆ ಇಂಬು ಕೊಡುವಂತೆ ಈ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಂದಲೇ ಹೆಚ್ಚಿನ ವಂಚನೆಗಳಾಗುತ್ತಿವೆ. ಓದು ಪೂರ್ಣಗೊಳ್ಳುವ ಮುನ್ನವೇ ಕೋರ್ಸ್​​ನಿಂದ ಡ್ರಾಪ್ ಔಟ್ ಆಗುವ ಸಂಖ್ಯೆ ಹೆಚ್ಚಿದೆಯಂತೆ. ಅದರಲ್ಲೂ ಪಂಜಾಬ್ ಮತ್ತು ಹರ್ಯಾಣ ರಾಜ್ಯದ ವಿದ್ಯಾರ್ಥಿಗಳನ್ನು ನೊಟೋರಿಯಸ್ ಎಂಬಂತೆ ಕಾಣಲಾಗುತ್ತಿದೆ.

ಇದನ್ನೂ ಓದಿ: NIRF Ranking 2023: ಭಾರತದಲ್ಲಿನ ಉನ್ನತ 50 ಎಂಜಿನಿಯರಿಂಗ್ ಸಂಸ್ಥೆಗಳು

ಆಸ್ಟ್ರೇಲಿಯಾದ ಗೃಹ ಇಲಾಖೆ ಪ್ರಕಾರ ಆಸ್ಟ್ರೇಲಿಯಾಗೆ ಬರುವ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು ನಕಲಿ ದಾಖಲೆ ಮತ್ತು ಕಾಲೇಜು ಅರ್ಜಿಗಳನ್ನು ಹೊಂದಿರುತ್ತಾರೆ. ಇದೇ ಕಾರಣಕ್ಕೆ ಶೇ. 24ರಷ್ಟು ಭಾರತೀಯರ ಅರ್ಜಿಗಳು ತಿರಸ್ಕೃತವಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಭಾರತೀಯ ವಿದ್ಯಾರ್ಥಿಗಳೇಕೆ ನಕಲಿ ದಾಖಲಾತಿ ಕೊಡುತ್ತಿದ್ದಾರೆ?

ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಬೇಕೆನ್ನುವ ಅಸಕ್ತಿ ಇರುವ ಭಾರತೀಯರು ತಮಗೆ ತಿಳಿದೋ, ತಿಳಿಯದೆಯೋ ಅಕ್ರಮ ಹಾದಿ ಮೂಲಕ ಅದನ್ನು ಸಾಧಿಸಲು ಯತ್ನಿಸುತ್ತಾರೆ. ವಿಶ್ವಸನೀಯವಲ್ಲದ ಏಜೆಂಟ್​ಗಳ ಸಲಹೆ ಪಡೆದು ಇಂಥ ನಕಲಿ ದಾಖಲೆಗಳೊಂದಿಗೆ ಯೂನಿವರ್ಸಿಟಿಗಳಲ್ಲಿ ಅರ್ಜಿ ಸಲ್ಲಿಸುವುದುಂಟು. ಇದು ಆಸ್ಟ್ರೇಲಿಯನ್ ಯೂನಿವರ್ಸಿಟಿಗಳು ನೀಡುವ ಕಾರಣ.

ಇದನ್ನೂ ಓದಿಜೂನ್‌ ತಿಂಗಳಿಂದ ಆಗಸ್ಟ್‌ವರೆಗೆ ಈ 3 ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್​ಗೆ ಅರ್ಜಿ ಸಲ್ಲಿಸಲು ಅವಕಾಶ

ಇಲ್ಲಿ ಭಾರತದ ಕೆಲ ರಾಜ್ಯಗಳ ವಿದ್ಯಾರ್ಥಿಗಳನ್ನು ಆಸ್ಟ್ರೇಲಿಯಾ ಸರ್ಕಾರ ನಿಷೇಧ ಮಾಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಅಲ್ಲಿಯ ಯೂನಿವರ್ಸಿಟಿಗಳಷ್ಟೇ ಈ ನೀತಿ ಅನುಸರಿಸುತ್ತಿರುವುದು. ಈ ವಿಚಾರದಲ್ಲಿ ಯೂನಿವರ್ಸಿಟಿಗಳಿಗೆ ಆ ಸ್ವಾತಂತ್ರ್ಯವಂತೂ ಇದ್ದೇ ಇದೆ ಎನ್ನುವ ಅಭಿಪ್ರಾಯ ಇದೆ.

ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್