ರಾಹುಲ್ ಗಾಂಧಿ, ಲಾಲು ಯಾದವ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್

ಒಂದುವೇಳೆ ಯಾರಾದರೂ ಲಾಲೂ ಪ್ರಸಾದ್ ಯಾದವ್ ಅಥವಾ ರಾಹುಲ್ ಗಾಂಧಿ ಎಂದು ಹೆಸರಿಟ್ಟುಕೊಂಡಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲ. ಈ ಹೆಸರಿನ ಗೊಂದಲಕ್ಕೆ ಬೇರೆ ಪರಿಹಾರವನ್ನು ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಹುಲ್ ಗಾಂಧಿ, ಲಾಲು ಯಾದವ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Follow us
|

Updated on:May 03, 2024 | 6:31 PM

ನವದೆಹಲಿ: ರಾಜಕಾರಣಿಯ ಹೆಸರು ಹೊಂದಿರುವ ಮಾತ್ರಕ್ಕೆ ಯಾವುದೇ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯ ಪೀಠ ಚುನಾವಣೆಯಲ್ಲಿ ಅಭ್ಯರ್ಥಿಗಳ ಹೆಸರುಗಳ ಸಮಸ್ಯೆಯ ಪರಿಹಾರಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನಿರ್ದೇಶನಗಳನ್ನು ಕೋರುವ ಮನವಿಯನ್ನು ವಜಾಗೊಳಿಸಿದ ಬಳಿಕ ಈ ಹೇಳಿಕೆಯನ್ನು ನೀಡಿತು.

ಯಾರಾದರೂ ರಾಹುಲ್ ಗಾಂಧಿ ಅಥವಾ ಲಾಲು ಪ್ರಸಾದ್ ಯಾದವ್ ಎಂಬ ಹೆಸರನ್ನು ಇಟ್ಟುಕೊಂಡರೆ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು ಹೇಗೆ? ಇದು ಅವರ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲವೇ? ಯಾರದ್ದಾದರೂ ಪೋಷಕರು ರಾಜಕೀಯ ನಾಯಕನ ಹೆಸರನ್ನು ಇಟ್ಟಿದ್ದರೆ ಅದು ಅವರ ಚುನಾವಣೆಯಲ್ಲಿ ಹೋರಾಡುವ ಹಕ್ಕಿಗೆ ಅಡ್ಡಿಯಾಗಬಹುದೇ? ಎಂದು ಅರ್ಜಿದಾರ ಸಾಬು ಸ್ಟೀಫನ್ ಪರ ವಾದ ಮಂಡಿಸಿದ ವಕೀಲ ವಿಕೆ ಬಿಜು ಅವರನ್ನು ಪೀಠ ಪ್ರಶ್ನಿಸಿತು.

ಇದನ್ನೂ ಓದಿ: Mallikarjun Kharge: ಶಿವ ವರ್ಸಸ್ ರಾಮ; ಚುನಾವಣೆ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ 

“ಈ ಪ್ರಕರಣದ ಭವಿಷ್ಯ ಏನಾಗಲಿದೆ ನಿಮಗೆ ತಿಳಿದಿದೆ” ಎಂದು ನ್ಯಾಯಾಧೀಶರು ವಕೀಲರಿಗೆ ಹೇಳಿದರು. ಹಾಗೇ, ಅವರ ಮನವಿಯನ್ನು ಹಿಂಪಡೆಯಲು ಅವರಿಗೆ ಅನುಮತಿ ನೀಡಿದರು.

ತನ್ನ ಮನವಿಯಲ್ಲಿ ಅರ್ಜಿದಾರರಾದ ಸ್ಟೀಫನ್, ಒಂದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಭ್ಯಾಸ ಮತದಾರರ ಮನಸ್ಸಿನಲ್ಲಿ ಗೊಂದಲ ಮೂಡಿಸಲು ವಿನ್ಯಾಸಗೊಳಿಸಲಾದ ಹಳೆಯ ತಂತ್ರ ಎಂದು ವಿವರಿಸಿದ್ದಾರೆ. ಪ್ರತಿಯೊಂದು ಮತಕ್ಕೂ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಿರುತ್ತದೆ ಎಂಬ ಕಾರಣದಿಂದ ಅಂತಹ ಅಭ್ಯಾಸವನ್ನು ಚುನಾವಣೆ ಸಮಯದಲ್ಲಿ ಮೊಟಕುಗೊಳಿಸಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: Legislative Council Election: ಕರ್ನಾಟಕ ವಿಧಾನಪರಿಷತ್‌ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

ಒಂದೇ ರೀತಿಯ ಹೆಸರಿಸುವ ಅಭ್ಯರ್ಥಿಗಳಿಗೆ ಭಾರತದಲ್ಲಿನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗಳ ಬಗ್ಗೆ ಜ್ಞಾನ ಮತ್ತು ಅರಿವು ಇಲ್ಲದಿರಬಹುದು. ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗಿ ಅವರು ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ಆದರೆ, ಹೀಗೆ ಒಂದೇ ರೀತಿಯ ಹೆಸರಿನ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು “ನಕಲಿ” ಎಂದು ನಾನು ಹೇಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Fri, 3 May 24