ಮಹಾರಾಷ್ಟ್ರ: ಜೈನ ಸನ್ಯಾಸಿ ವಿದ್ಯಾಸಾಗರ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ, ಮೂವರು ಸಾವು

|

Updated on: Feb 19, 2024 | 10:09 AM

ಜೈನ ಧರ್ಮಗುರುಗಳ ಸಾವಿನ ಸುದ್ದಿ ಹರಡಿದ ತಕ್ಷಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಿಂದ ಅವರ ಹೆಚ್ಚಿನ ಸಂಖ್ಯೆಯ ಅನುಯಾಯಿಗಳು ಅವರ ಅಂತಿಮ ದರ್ಶನಕ್ಕಾಗಿ ಡೊಂಗರ್‌ಘರ್‌ಗೆ ತೆರಳಲು ಪ್ರಾರಂಭಿಸಿದರು. ಈ ವೇಳೆ ಆರು ಜನರಿದ್ದ ಎರ್ಟಿಗಾ ಕಾರು ಕಾಲುವೆಗೆ ಬಿದ್ದು ಅಪಘಾತಕ್ಕೀಡಾಗಿದೆ. ಮೂವರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ: ಜೈನ ಸನ್ಯಾಸಿ ವಿದ್ಯಾಸಾಗರ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ, ಮೂವರು ಸಾವು
ಅಪಘಾತ
Image Credit source: News 9
Follow us on

ಮಹಾರಾಷ್ಟ್ರದ ಗೊಂಡಿಯಾದ ಅಮ್ಗಾಂವ್ ಮತ್ತು ಸಲೇಕಾ ನಡುವಿನ ಕಾಲುವೆಗೆ ಕಾರು ಬಿದ್ದು ಮೂವರು ಸಾವನ್ನಪ್ಪಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಅವರು ಸಲ್ಲೇಖನ ವ್ರತದಿಂದ ದೇಹ ತ್ಯಜಿಸಿದ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದರು. ಈ ವೇಳೆ ಆರು ಜನರಿದ್ದ ಎರ್ಟಿಗಾ ಕಾರು ಕಾಲುವೆಗೆ ಬಿದ್ದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಇತರರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ದೇಹ ತ್ಯಾಗ ಮಾಡಿದ್ದಾರೆ. ಛತ್ತೀಸ್‌ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಅವರು ಕೊನೆಯುಸಿರೆಳೆದರು. ಅವರ ಅಂತಿಮ ಸಂಸ್ಕಾರವನ್ನು ಇಂದು ಫೆಬ್ರವರಿ 18 ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು. ಕಳೆದ ಕೆಲವು ದಿನಗಳಿಂದ ಆಚಾರ್ಯಶ್ರೀ ಅವರು ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.

ಆಚಾರ್ಯಶ್ರೀಗಳು ಕೊನೆಯ ಉಸಿರಿನವರೆಗೂ ಜಾಗೃತ ಸ್ಥಿತಿಯಲ್ಲಿದ್ದು ಮಂತ್ರಗಳನ್ನು ಪಠಿಸುತ್ತಲೇ ಇಹಲೋಕ ತ್ಯಜಿಸಿದರು. ಸಮಾಧಿಯ ಸಮಯದಲ್ಲಿ, ಪೂಜ್ಯ ಮುನಿಶ್ರೀ ಯೋಗಸಾಗರ ಜಿ ಮಹಾರಾಜ್, ಶ್ರೀ ಸಮತಾಸಾಗರ ಜಿ ಮಹಾರಾಜ್, ಶ್ರೀ ಪ್ರಸಾದಸಾಗರ್ ಜಿ ಮಹಾರಾಜ್ ಮತ್ತು ಸಂಘದವರು ಅವರೊಂದಿಗೆ ಉಪಸ್ಥಿತರಿದ್ದರು. ದೇಶಾದ್ಯಂತ ಜೈನ ಸಮುದಾಯ ಮತ್ತು ಆಚಾರ್ಯಶ್ರೀ ಅವರ ಭಕ್ತರು ಅವರ ಗೌರವಾರ್ಥ ಇಂದು ತಮ್ಮ ಸಂಸ್ಥೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲು ನಿರ್ಧರಿಸಿದ್ದರು.

ಮತ್ತಷ್ಟು ಓದಿ: Jain Muni Vidyasagar Maharaj: ಸಲ್ಲೇಖನ ವ್ರತ ಮೂಲಕ ದೇಹ ತ್ಯಜಿಸಿದ ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್

ಭಾನುವಾರ ಬೆಳಗ್ಗೆ ನಂದಗಾಂವ್ ಖಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಶಿಂಗ್ನಾಪುರ ಗ್ರಾಮದ ಬಳಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಘಟನೆಯ ವೇಳೆ ಬಸ್ಟ್‌ನಲ್ಲಿ ಒಟ್ಟು 21 ಮಂದಿ ಪ್ರಯಾಣಿಸುತ್ತಿದ್ದರು.

ವರದಿಗಳ ಪ್ರಕಾರ, ವಿದ್ಯಾರ್ಥಿಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಯವತ್ಮಾಲ್ ಜಿಲ್ಲೆಗೆ ಹೋಗುತ್ತಿದ್ದರು. ಬೆಳಗ್ಗೆ 8.30 ರಿಂದ 9 ಗಂಟೆಯೊಳಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಮೃತಪಟ್ಟವರಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಒಬ್ಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ಕೂಡಲೇ ಸ್ಥಳೀಯರು ಕೂಡ ಸ್ಥಳದ ಬಳಿ ಜಮಾಯಿಸಿ ಗಾಯಾಳುಗಳನ್ನು ನಂದಗಾಂವ್ ಖಂಡೇಶ್ವರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲು ಪೊಲೀಸರಿಗೆ ಸಹಾಯ ಮಾಡಿದರು. ಕೆಲ ಗಾಯಾಳುಗಳನ್ನು ಅಮರಾವತಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ