ಸ್ವಿಫ್ಟ್ ಕಾರು ಚರಂಡಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 6 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶ(Uttar Pradesh)ದಲ್ಲಿ ನಡೆದಿದೆ. ವಾಹನದಲ್ಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ತಿಲಕ ಸಮಾರಂಭಕ್ಕೆ (ಮದುವೆಗೆ ಸಂಬಂಧಿಸಿದ) ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಜಗನ್ನಾಥಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬಲಿಯಾದ ಆರು ಮಂದಿಯನ್ನು ದೇರಾಪುರ ಮತ್ತು ಶಿವರಾಜಪುರ ನಿವಾಸಿಗಳು ಎಂದು ಗುರುತಿಸಲಾಗಿದೆ.
ಅಂತ್ಯಕ್ರಿಯೆಗೆ ತೆರಳುತ್ತಿದ್ದವರು ನಿಜವಾಗಿಯೂ ಸ್ಮಶಾನ ಸೇರಿದ್ರು, ಕಾರು ಮರಕ್ಕೆ ಡಿಕ್ಕಿ, 6 ಮಂದಿ ಸಾವು
ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿರುವ ಘಟನೆ ಹರ್ಯಾಣದ ಸಿರ್ಸಾ ಜಿಲ್ಲೆಯ ದಬ್ವಾಲಿಯಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಐವರು ಒಂದೇ ಕುಟುಂಬದವರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಡಬ್ವಾಲಿಯ ಉಪವಿಭಾಗೀಯ ಸಿವಿಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೃತರನ್ನು ರಾಜಸ್ಥಾನದ ಶ್ರೀಗಂಗಾನಗರದ ರಾಮದೇವ್ ಕಾಲೋನಿಯ ನಿವಾಸಿ ಬನ್ವಾರಿ ಲಾಲ್ ವರ್ಮಾ, ಅವರ ಪತ್ನಿ ದರ್ಶನಾ, ಅಣ್ಣ ಕೃಷ್ಣಕುಮಾರ್, ಅವರ ಪತ್ನಿ ಗುದ್ದಿದೇವಿ, ಎರಡನೇ ಸಹೋದರ ಓಂಪ್ರಕಾಶ್ ಅವರ ಪತ್ನಿ ಚಂದ್ರಕಲಾ, ಕಾರು ಚಾಲಕ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ಹುಬ್ಬಳ್ಳಿ: ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ನಾಲ್ವರ ಸಾವು
ಮತ್ತೊಂದು ಘಟನೆ
ಮಂಗಳೂರಿನಲ್ಲಿ ಪ್ರತ್ಯೇಕ ಅಪಘಾತ: ಮೂವರು ಧಾರುಣ ಸಾವು
ಬಸ್ಗಾಗಿ ಕಾಯುತ್ತಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಉಜಿರೆ ಗ್ರಾಮದ ಗಾಂಧಿನಗರದ ಬಳಿ ನಡೆದಿದೆ. ಗಾಂಧಿನಗರದ ಕೃಷ್ಣಪ್ಪ(52) ಹಾಗೂ ಮೋಹಿನಿ(56) ಮೃತ ರ್ದುದೈವಿಗಳು. ಇನ್ನು ಲಾರಿ ಡಿಕ್ಕಿ ರಭಸಕ್ಕೆ 2 ವಿದ್ಯುತ್ ಕಂಬಗಳು ಧರೆಗುರುಳಿದಿದ್ದು, ಕಟ್ಟಡದ ಒಂದು ಭಾಗಕ್ಕೆ ಹಾನಿಯಾಗಿದೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಖಾಸಗಿ ಬಸ್ಸಿನ ಅತೀ ವೇಗಕ್ಕೆ ಸ್ಕೂಟರ್ ಸವಾರ ಬಲಿ
ಖಾಸಗಿ ಬಸ್ಸಿನ ಅತೀ ವೇಗಕ್ಕೆ ಸ್ಕೂಟರ್ ಸವಾರ ಬಲಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಬಳಿ ನಡೆದಿದೆ. ಪರಾರಿ ನಿವಾಸಿ ಧರಣೇಂದ್ರ (24) ಕೊನೆಯುಸಿರೆಳೆದಿದ್ದಾರೆ. ವೇಗವಾಗಿ ಬಂದ ಬಸ್, ನಿಯಂತ್ರಣ ಕಳೆದುಕೊಂಡು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಧರಣೇಂದ್ರ ಎಂಬಾತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯಯೇ ಮೃತರಾಗಿದ್ದಾರೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ