ಮೋದಿ, ಏಕನಾಥ್ ಶಿಂಧೆ ಮತ್ತು ನಾರಾಯಣ್ ರಾಣೆಯನ್ನು ಅನುಕರಿಸಿದ 7 ಶಿವಸೇನಾ ನಾಯಕರ ವಿರುದ್ಧ ಕೇಸು ದಾಖಲು
ಥಾಣೆಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಅನುಕರಿಸಿದ ಶಿವಸೇನಾದ ನಾಯಕರ ವಿರುದ್ಧ ಕೇಸು ದಾಖಲು
ಮುಂಬೈ: ಅಕ್ಟೋಬರ್ 9 ರಂದು ಥಾಣೆಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಸಿಎಂ ಏಕನಾಥ್ ಶಿಂಧೆ (Eknath Shinde) ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಅನುಕರಿಸಿದ ಶಿವಸೇನಾದ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ 7 ನಾಯಕರ ವಿರುದ್ಧ ಥಾಣೆಯ ನೌಪಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಥಾಣೆ ಪೊಲೀಸರು ಹೇಳಿದ್ದಾರೆ. ಥಾಣೆಯ ನೌಪದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153, 500 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಸರಾ ರ್ಯಾಲಿಯಲ್ಲಿ ‘ಶಿವಸೇನಾ – ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂದು ಕರೆಯಲ್ಪಡುವ ಉದ್ಧವ್ ಠಾಕ್ರೆ ಅವರ ಶಿವಸೇನಾ ಪಿಎಂ ಮೋದಿ ಮತ್ತು ಇತರ ಗಣ್ಯರನ್ನು ಅನುಕರಿಸುವುದು ಮಾತ್ರವಲ್ಲದೆ ಮುಖ್ಯಮಂತ್ರಿಗಳ ದಸರಾ ರ್ಯಾಲಿಯನ್ನು ಅಣಕಿಸಿದೆ.
Maharashtra | Case registered at Thane's Naupada PS u/s 153, 500, 504 IPC against 7 leaders of ShivSena (Uddhav Balasaheb Thackeray) for mimicking PM Modi, CM Eknath Shinde & Union Minister Narayan Rane, at a rally in Thane on October 9th: Thane Police
— ANI (@ANI) October 12, 2022
ಶಿವಸೇನಾ vs ಶಿವಸೇನಾ ದಸರಾ ರ್ಯಾಲಿ
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮತ್ತು ಈಗ ಪ್ರಸ್ತುತ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾವೆ ಶಕ್ತಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಲ ಮೆಗಾ ದಸರಾ ರ್ಯಾಲಿಗಳನ್ನು ನಡೆಸಿತ್ತು. ದಾದರ್ ಪ್ರದೇಶದ ಶಿವಾಜಿ ಪಾರ್ಕ್‌ನಲ್ಲಿ ಠಾಕ್ರೆ ತಮ್ಮ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರೆ, ಶಿಂಧೆ ಬಿಕೆಸಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಅವರ ಅನುಕರಣೆ ಮಾಡಿದ್ದು ಇದೇ ಮೊದಲು ಅಲ್ಲ
ಏತನ್ಮಧ್ಯೆ, ಶಿವಸೇನಾ ನಾಯಕರೊಬ್ಬರು ಪ್ರಧಾನಿ ಮೋದಿಯನ್ನು ಅನುಕರಿಸುವುದು ಇದೇ ಮೊದಲಲ್ಲ. ಡಿಸೆಂಬರ್ 2021 ರಲ್ಲಿ, ಪಕ್ಷದ ಭಾಸ್ಕರ್ ಜಾಧವ್ ಅವರು ಪಿಎಂ ಮೋದಿಯವರನ್ನು ಅನುಕರಿಸಿದರು. ಈ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ನಂತರ ಕ್ಷಮೆಯಾಚಿಸಿದರು. ಪಿಎಂ ಮೋದಿಯನ್ನು ಸ್ಪಷ್ಟವಾಗಿ ಕೆಣಕುವ ಮೂಲಕ, ಸಂಸತ್ ಅಧಿವೇಶನದಲ್ಲಿ ಜಾದವ್ ಅವರು 2014 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ಮರಳಿ ತರುವ ಬಗ್ಗೆ ಹೇಳಿದ್ದನ್ನೇ ಪುನರಾವರ್ತಿಸಿ ಅನುಕರಿಸಿದ್ದರು.
Published On - 12:48 pm, Wed, 12 October 22