ಕೊರೊನಾ ಬಗ್ಗೆ ಸುಳ್ಳು ಮಾಹಿತಿ ಹರಡಿದ ಕಾಂಗ್ರೆಸ್​ ನಾಯಕ ಕಮಲ್​ನಾಥ್​ ವಿರುದ್ಧ ಎಫ್​ಐಆರ್ ದಾಖಲು: ಏನಿದು ಪ್ರಕರಣ? ​

Kamal Nath: ಕೋವಿಡ್ 19 ಎಂಬುದು ಭಾರತೀಯ ತಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಕಳೆದ ವಾರ ಭಾರತ ಸರ್ಕಾರ ಸಲಹೆ, ಸೂಚನೆಯನ್ನು ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯೂ ಸಹ (WHO) ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಯಾವುದೇ ರಾಷ್ಟ್ರದ ಹೆಸರಿನಲ್ಲಿ ಗುರುತಿಸುವುದು ಗುರುತರ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.

ಕೊರೊನಾ ಬಗ್ಗೆ ಸುಳ್ಳು ಮಾಹಿತಿ ಹರಡಿದ ಕಾಂಗ್ರೆಸ್​ ನಾಯಕ ಕಮಲ್​ನಾಥ್​ ವಿರುದ್ಧ ಎಫ್​ಐಆರ್ ದಾಖಲು: ಏನಿದು ಪ್ರಕರಣ? ​
ಕೊರೊನಾ ಬಗ್ಗೆ ಸುಳ್ಳು ಮಾಹಿತಿ ಹರಡಿದ ಕಾಂಗ್ರೆಸ್​ ನಾಯಕ ಕಮಲ್​ನಾಥ್​ ವಿರುದ್ಧ ಕ್ರೈಂ ಬ್ಯಾಂಚ್​ನಿಂದ ಎಫ್​ಐಆರ್ ದಾಖಲು: ಏನಿದು ಪ್ರಕರಣ? ​
Follow us
|

Updated on:May 24, 2021 | 11:52 AM

ಮಧ್ಯಪ್ರದೇಶ: ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್​ ನಾಯಕ ಕಮಲ್​ ನಾಥ್​ ವಿರುದ್ಧ ರಾಜ್ಯ ಕ್ರೈಂ ಬ್ಯಾಂಚ್​ ಎಫ್​ಐಆರ್ ದಾಖಲಿಸಿಕೊಂಡಿದೆ. ಮಹಾಸಾಂಕ್ರಾಮಿಕ ಕೊರೊನಾ ಬಗ್ಗೆ ಸುಳ್ಳು ಮತ್ತು ನಕಲಿ ಮಾಹಿತಿ ಹರಡಿದ ಆರೋಪದ ಮೇಲೆ ಅವರ ವಿರುದ್ಧ ಇದೀಗ ದೂರು ದಾಖಲಾಗಿದೆ.

ಶನಿವಾರ ಉಜ್ಜಯಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಕಮಲ್​ ನಾಥ್ ಅವರು ವಿಶ್ವವ್ಯಾಪಿ ವಿಸ್ತರಿಸಿರುವ ಕೊರೊನಾ ವೈರಸ್​ ಅನ್ನು ಭಾರತೀಯ ತಳಿ ಎಂದು ಗುರುತಿಸಲಾಗಿದೆ ಎಂದಿದ್ದರು. ಇದರ ವಿರುದ್ಧ ಭೋಪಾಲ್​ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಮೀತ್ ಪಚೋರಿ ಮತ್ತಿತರ ಇಬ್ಬರು ಶಾಸಕರು ಹಿರಿಯ ಕಾಂಗ್ರೆಸ್​ ನಾಯಕ ಕಮಲ್​ ನಾಥ್​ ವಿರುದ್ಧ ದೂರು ನೀಡಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯಿದೆ (National Disaster Management Act 2005) section 188 ಮತ್ತು section 54 ಅನುಸಾರ ದೂರು ದಾಖಲಾಗಿದೆ.

ಇಡೀ ರಾಷ್ಟ್ರ ಕೊರೊನಾದಿಂದಾಗಿ ದುರ್ಭರ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕ ಕಮಲ್​ ನಾಥ್​ ಗೊಂದಲ ಸೃಷ್ಟಿಸುತ್ತಿದ್ದಾರೆ ಮತ್ತು ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಅವರು ವಿಶ್ವ ಆರೋಗ್ಯ ಸಂಸ್ಥೆಯ (World Health Organization -WHO) ಕೋವಿಡ್ ಮಾರ್ಗಸೂಚಿಯನ್ನೂ ಪಾಲಿಸುತ್ತಿಲ್ಲ. ಇದೆಲ್ಲ ಭಾರತೋಯ ದಂಡ ಸಂಹಿತೆ (IPC) ಅನುಸಾರ ದೇಶದ್ರೋಹ ಅಪರಾಧವೂ ಆಗುತ್ತದೆ. ಹಾಗಾಗಿ ಅವರ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ದೂರುದಾರ ಬಿಜೆಪಿ ನಾಯಕರು ಅರ್ಜಿಯಲ್ಲಿ ಕೋರಿದ್ದಾರೆ.

ಇನ್ನು ಕೊರೊನಾ ಸೋಂಕಿನಿಂದಾಗುತ್ತಿರುವ ಸಾವುಗಳ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ತಪ್ಪು ಆರೋಪವನ್ನೂ ಅವರು ಹೊರಿಸಿದ್ದಾರೆ. ಇದರಿಂದ ಜನರ ಮಧ್ಯೆ ಭೀತಿಯ ವಾತಾವರಣ ಮೂಡಲಿದೆ. ಹಾಗಾಗಿ ಇದು ಕ್ರಿಮಿನಲ್​ ಅಪರಾಧವಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್ 19 ಎಂಬುದು ಭಾರತೀಯ ತಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಗಳನ್ನು ತೆಗೆದುಹಾಕುವಂತೆ ಕಳೆದ ವಾರ ಭಾರತ ಸರ್ಕಾರ ಸಲಹೆ, ಸೂಚನೆಯನ್ನು ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯೂ ಸಹ (WHO) ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಯಾವುದೇ ರಾಷ್ಟ್ರದ ಹೆಸರಿನಲ್ಲಿ ಗುರುತಿಸುವುದು ಗುರುತರ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.

(Case registered against former Madhya Pradesh CM Kamal Nath in Bhopal by Crime Branch for spreading misleading information over Covid 19)

Published On - 11:51 am, Mon, 24 May 21

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?