AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕೂಟರ್​​ಗೆ ಕಾರು ಡಿಕ್ಕಿ, ಓರ್ವ ಸಾವು; ಕೇರಳದ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇನ್ನೊಂದು ವಾಹನವನ್ನು ಓವರ್​​ಟೇಕ್ ಮಾಡುವುದಕ್ಕಾಗಿ ರಭಸವಾಗಿ ನುಗ್ಗಿದ ಕಾರು ಸ್ಕೂಟರ್​​ಗೆ ಡಿಕ್ಕಿ ಹೊಡೆದಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಕಾರು ಗುದ್ದಿದ ಭರಕ್ಕೆ ಖಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಕೂಟರ್​​ಗೆ ಕಾರು ಡಿಕ್ಕಿ, ಓರ್ವ ಸಾವು; ಕೇರಳದ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಅಪಘಾತದ ದೃಶ್ಯ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 22, 2022 | 6:13 PM

Share

ಕೇರಳದ (Kerala) ಮಲಪ್ಪುರಂ (Malappuram) ಜಿಲ್ಲೆಯಲ್ಲಿ ವೇಗವಾಗಿ ಬಂದ ಕಾರೊಂದು ಸ್ಕೂಟರ್​​ಗೆ ಡಿಕ್ಕಿ ಹೊಡೆದಿದ್ದು, ಸ್ಕೂಟರ್ ಚಾಲಕ ಸ್ಥಳದಲ್ಲೇ ಮೃತರಾಗಿದ್ದಾರೆ. ಮೃತರನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಮತ್ತು ಆತನ ಪತ್ನಿ ರುಕಿಯಾ ಸ್ಕೂಟರ್​​ನಲ್ಲಿ ಹೋಗುತ್ತಿದ್ದಾಗ ವಿರುದ್ಧ ದಿಶೆಯಿಂದ ಬಂದ ಕಾರು ಗುದ್ದಿದೆ. ಹೀಗೆ ಡಿಕ್ಕಿ ಹೊಡೆದ ರಭಸದಲ್ಲಿ ಸ್ಕೂಟರ್​​ನಲ್ಲಿ ಹಿಂಬದಿ ಸವಾರರಾಗಿದ್ದ ರುಕಿಯಾ ಮೇಲಕ್ಕೆ ಚಿಮ್ಮಿ ಬಿದ್ದಿದ್ದಾರೆ. ಅಪಘಾತದ ವೇಳೆ ರುಕಿಯಾ ಸೀಟಿನಿಂದ ಜಾರಿ ಗಾಳಿಯಲ್ಲಿ ತೇಲಿದಂತಾಗಿ ದೊಪ್ಪನೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರುಕಿಯಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ವಾಹನವನ್ನು ಓವರ್​​ಟೇಕ್ ಮಾಡುವುದಕ್ಕಾಗಿ ರಭಸವಾಗಿ ನುಗ್ಗಿದ ಕಾರು ಸ್ಕೂಟರ್​​ಗೆ ಡಿಕ್ಕಿ ಹೊಡೆದಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಕಾರು ಗುದ್ದಿದ ಭರಕ್ಕೆ ಖಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯುಎಇಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಖಾದರ್ ಕೆಲವು ದಿನಗಳ ಹಿಂದೆಯಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದರು. ಇವರು ತಾವನ್ನೂರ್ ನಲ್ಲಿ ಸಂಬಂಧಿಕರ ಮನೆಗೆ ಹೋಗಿ ಮರಳಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶನಿವಾರ ಸಂಜೆ ಕುಟ್ಟಿಪುರಂ-ತಿರೂರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

Published On - 5:39 pm, Mon, 22 August 22