ಮಣಿಪುರ: ಇಬ್ಬರು ಮೈತಿ ವಿದ್ಯಾರ್ಥಿಗಳನ್ನು ಅಪಹರಿಸಿ, ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿ ಬಂಧನ
ಜುಲೈ 6 ರಂದು ಲೈಮಾಟನ್‌ನಲ್ಲಿ ಕುಕಿ ಉಗ್ರಗಾಮಿಗಳು ಟಕಿಲ್‌ನ ಫಿಜಾಮ್ ಹೇಮನ್‌ಜಿತ್ ಸಿಂಗ್ (20) ಮತ್ತು ಹುಡುಗಿ ಲುವಾಂಗ್ಬಿ ಲಿಂಥೋಂಗಂಬಿ ಹಿಜಾಮ್ (17) ಅವರನ್ನು ಅಪಹರಿಸಿದ್ದಾರೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ., ಸೆಪ್ಟೆಂಬರ್‌ನಲ್ಲಿ ಇವರು ಹತ್ಯೆಗೀಡಾಗಿರುವ ಚಿತ್ರ ಕಾಣಿಸಿಕೊಂಡಿತ್ತು.
ದೆಹಲಿ ಅಕ್ಟೋಬರ್ 13: ಮಣಿಪುರದಲ್ಲಿ (Manipur) ಜುಲೈ 6 ರಿಂದ ನಾಪತ್ತೆಯಾಗಿದ್ದ ಇಬ್ಬರು ಮೈತಿ ವಿದ್ಯಾರ್ಥಿಗಳ (Meitei students) ಅಪಹರಣ ಮತ್ತು ಕೊಲೆ (murder) ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ದಳ (CBI) 22 ವರ್ಷದ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪ್ರಕರಣದಲ್ಲಿ ಇದು ಐದನೇ ಬಂಧನವಾಗಿದೆ. ಪೌಲುನ್ ಮಾಂಗ್ ಎಂಬಾತನ್ನು ಮಹಾರಾಷ್ಟ್ರದ ಪುಣೆಯಿಂದ ಬುಧವಾರ ಬಂಧಿಸಿ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 16 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ವಿದ್ಯಾರ್ಥಿಗಳ ಅಪಹರಣ ಮತ್ತು ಹತ್ಯೆಯ ಹಿಂದೆ ಮಾಂಗ್ ಪಾತ್ರ ಪ್ರಮುಖವಾಗಿತ್ತು. ಈ ಹಿಂದೆ ಬಂಧಿತರಾಗಿರುವ ನಾಲ್ವರ ವಿಚಾರಣೆ ಆಧರಿಸಿ ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಾಲ್ವರು ಶಂಕಿತರಲ್ಲಿ ಇಬ್ಬರು ಪುರುಷರು, ಪಾವೊಮಿನ್ಲುನ್ ಹಾಕಿಪ್ ಮತ್ತು ಎಸ್ ಮಾಲ್ಸಾಮ್ ಹಾಕಿಪ್, ಮತ್ತು ಇಬ್ಬರು ಮಹಿಳೆಯರು, ಲಿಂಗ್ನಿಚಾಂಗ್ ಬೈಟೆಕುಕಿ ಮತ್ತು ಟಿನ್ನೆಲ್ಹಿಂಗ್ ಹೆಂತಾಂಗ್ ಎಂಬವರನ್ನು ಸಿಬಿಐ ನೇತೃತ್ವದ ಭದ್ರತಾ ಪಡೆಗಳ ತಂಡವು ಅಕ್ಟೋಬರ್ 1 ರಂದು ಇಬ್ಬರು ವಿದ್ಯಾರ್ಥಿಗಳನ್ನು ಅಪಹರಣ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಿದೆ.
ಜುಲೈ 6 ರಂದು ಲೈಮಾಟನ್‌ನಲ್ಲಿ ಕುಕಿ ಉಗ್ರಗಾಮಿಗಳು ಟಕಿಲ್‌ನ ಫಿಜಾಮ್ ಹೇಮನ್‌ಜಿತ್ ಸಿಂಗ್ (20) ಮತ್ತು ಹುಡುಗಿ ಲುವಾಂಗ್ಬಿ ಲಿಂಥೋಂಗಂಬಿ ಹಿಜಾಮ್ (17) ಅವರನ್ನು ಅಪಹರಿಸಿದ್ದಾರೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ., ಸೆಪ್ಟೆಂಬರ್‌ನಲ್ಲಿ ಇವರು ಹತ್ಯೆಗೀಡಾಗಿರುವ ಚಿತ್ರ ಕಾಣಿಸಿಕೊಂಡಿತ್ತು.
ಎರಡು ತಿಂಗಳಿಗೂ ಹೆಚ್ಚು ಕಾಲ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವವರೆಗೂ, ವಿದ್ಯಾರ್ಥಿಗಳ ಕುಟುಂಬಗಳು ತಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂದು ನಂಬಿದ್ದರು ಆದರೆ ಜನಾಂಗೀಯ ಕಲಹದಿಂದ ಪೀಡಿತ ರಾಜ್ಯದಲ್ಲಿ ಎಲ್ಲೋ ಜೀವಂತವಾಗಿದ್ದಾರೆ.
ಆದಾಗ್ಯೂ, ಸೆಪ್ಟೆಂಬರ್ 25 ರಂದು, ರಾಜ್ಯ ಸರ್ಕಾರವು ಸೆಲ್ಯುಲಾರ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದ ಎರಡು ದಿನಗಳ ನಂತರ, ವಿದ್ಯಾರ್ಥಿಗಳ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು.
ಹಿನ್ನಲೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಹೊಂದಿರುವ ಕಾಡಿನಲ್ಲಿ ಅವರು ನೆಲದ ಮೇಲೆ ಕುಳಿತಿರುವುದನ್ನು ಒಂದು ಫೋಟೋ ತೋರಿಸಿದೆ .ಇನ್ನೊಂದು ಅವರು ಸತ್ತು ಬಿದ್ದಿರುವುದನ್ನು ತೋರಿಸಿದೆ. ಮೊದಲ ಛಾಯಾಚಿತ್ರದಲ್ಲಿ ಕಾಣುವ ಬಟ್ಟೆಯನ್ನೇ ಇಬ್ಬರು ಧರಿಸಿದ್ದಾರೆ. ಎರಡನೇ ಫೋಟೋದಲ್ಲಿ ಅವರ ಮುಖ ಕಾಣಿಸುತ್ತಿಲ್ಲ.
ಈ ಘಟನೆ ಮತ್ತೊಮ್ಮೆ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಸೆಪ್ಟೆಂಬರ್ 28 ರಂದು, ಲುವಾಂಗ್‌ಸಂಗ್‌ಬಾಮ್‌ನಲ್ಲಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಖಾಸಗಿ ನಿವಾಸಕ್ಕೆ ಭಾರಿ ಜನಸಮೂಹ ನುಗ್ಗಲು ಪ್ರಯತ್ನಿಸಿತು. ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರದ ದಿನಗಳಲ್ಲಿ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಬೇಕಾಯಿತು.
ಇದನ್ನೂ ಓದಿ: ಮಣಿಪುರದಲ್ಲಿ ವ್ಯಕ್ತಿಯನ್ನು ಸುಟ್ಟುಹಾಕಿದ ವಿಡಿಯೊ ವೈರಲ್; ಇದು ಮೇ4ರ ಘಟನೆ ಎಂದ ಸರ್ಕಾರ
ಇಬ್ಬರು ವಿದ್ಯಾರ್ಥಿಗಳ ಆಪಾದಿತ ಕೊಲೆಯ ತನಿಖೆಗಾಗಿ ಹಿರಿಯ ಅಧಿಕಾರಿ ವಿಶೇಷ ನಿರ್ದೇಶಕ ಅಜಯ್ ಭಟ್ನಾಗರ್ ನೇತೃತ್ವದ ವಿಶೇಷ ಸಿಬಿಐ ತಂಡವನ್ನು ಇಂಫಾಲ್‌ಗೆ ಹಾರಿಸಲಾಯಿತು. ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಉಗ್ರಗಾಮಿ ಎಲ್‌ಹಿಂಗ್ನಿಚಾಂಗ್‌ನ ಪತಿ ವೊಖೋಗಿನ್ ಬೈಟ್ ಅಲಿಯಾಸ್ ಟೈಗರ್ (36) ಗಾಗಿ ಸಿಬಿಐ ಹುಡುಕಾಟ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ