AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಯೆಟ್ನಾಂನಲ್ಲಿ ಒತ್ತೆಯಾಳಾಗಿದ್ದ 157 ಗುಜರಾತಿ ಪ್ರವಾಸಿಗರು ಬಿಡುಗಡೆ

350 ಗುಜರಾತಿಗಳ ಈ ಗುಂಪು ಸೂರತ್ ಮೂಲದ ಟೂರ್ ಆಪರೇಟರ್‌ನ ಸಹಾಯದಿಂದ ವಿಯೆಟ್ನಾಂಗೆ ಪ್ರವಾಸವನ್ನು ಯೋಜಿಸಿತ್ತು. ಅವರು ಒಟ್ಟು ಪ್ರಯಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಸಹ ಗುರುವಾರ ಆಗ್ನೇಯ ಏಷ್ಯಾದ ರಾಷ್ಟ್ರಕ್ಕೆ ಬಂದಿಳಿದ ನಂತರ ಟೂರ್ ಆಪರೇಟರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗುಂಪು ಆರೋಪಿಸಿದೆ ಎಂದು ಟಿವಿ9 ಗುಜರಾತಿ ವರದಿ ಮಾಡಿದೆ.

ವಿಯೆಟ್ನಾಂನಲ್ಲಿ ಒತ್ತೆಯಾಳಾಗಿದ್ದ 157 ಗುಜರಾತಿ ಪ್ರವಾಸಿಗರು ಬಿಡುಗಡೆ
ವಿಯೆಟ್ನಾಂImage Credit source: Photo credit: Unsplash
ರಶ್ಮಿ ಕಲ್ಲಕಟ್ಟ
|

Updated on: Oct 13, 2023 | 7:13 PM

Share

ಸೂರತ್ ಅಕ್ಟೋಬರ್ 13: 1 ಕೋಟಿ ರೂಪಾಯಿ ಪ್ರಯಾಣದ ಬಾಕಿ ಪಾವತಿಸದ ಆರೋಪದ ಮೇಲೆ ಗುರುವಾರ ದೇಶದ ಪ್ರವಾಸ ನಿರ್ವಾಹಕರಿಂದ ಒತ್ತೆಯಾಳಾಗಿದ್ದ ಗುಜರಾತ್‌ನ (Gujarat) ಸೂರತ್‌ನಿಂದ 157 ಜನರನ್ನು 10 ಗಂಟೆಗಳ ನಂತರ ವಿಯೆಟ್ನಾಂನಲ್ಲಿರುವ (Vietnam) ಭಾರತೀಯ ರಾಯಭಾರ ಕಚೇರಿ (Indian Embassy) ಬಿಡುಗಡೆ ಮಾಡಿದೆ. ಜನರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ. ಅವರೀಗ ಮನೆಗೆ ಮರಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

350 ಗುಜರಾತಿಗಳ ಈ ಗುಂಪು ಸೂರತ್ ಮೂಲದ ಟೂರ್ ಆಪರೇಟರ್‌ನ ಸಹಾಯದಿಂದ ವಿಯೆಟ್ನಾಂಗೆ ಪ್ರವಾಸವನ್ನು ಯೋಜಿಸಿತ್ತು. ಅವರು ಒಟ್ಟು ಪ್ರಯಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಸಹ ಗುರುವಾರ ಆಗ್ನೇಯ ಏಷ್ಯಾದ ರಾಷ್ಟ್ರಕ್ಕೆ ಬಂದಿಳಿದ ನಂತರ ಟೂರ್ ಆಪರೇಟರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗುಂಪು ಆರೋಪಿಸಿದೆ ಎಂದು ಟಿವಿ9 ಗುಜರಾತಿ ವರದಿ ಮಾಡಿದೆ.

ಒಪ್ಪಂದದ ಪ್ರಕಾರ 1.07 ಕೋಟಿ ರೂ.ಗಳನ್ನು ತನಗೆ ನೀಡಬೇಕಿದ್ದು, ಆ ಮೊತ್ತವನ್ನು ಪಡೆಯುವವರೆಗೆ ತಾನು ಪ್ರವಾಸಕ್ಕೆ ಮುಂದಾಗುವುದಿಲ್ಲ ಎಂದು ಆರೋಪಿ ಟೂರ್ ಆಪರೇಟರ್  ಗುಂಪಿಗೆ ತಿಳಿಸಿದ್ದಾರೆ. ಗುಜರಾತ್‌ನ ಲೆಯುವಾ ಪಾಟಿದಾರ್ ಸಮುದಾಯಕ್ಕೆ ಸೇರಿದ ಪ್ರಯಾಣಿಕರು ವಿದೇಶಿ ನೆಲದಲ್ಲಿ ಮುಖಾಮುಖಿಯಾದ ನಂತರ ಆಘಾತ ಮತ್ತು ಭಯಕ್ಕೆ ಒಳಗಾಗಿದ್ದರು. ನಂತರ ಆ ವ್ಯಕ್ತಿ 157 ಪ್ರವಾಸಿಗರನ್ನು ಒತ್ತೆಯಾಳಾಗಿ ಇರಿಸಿದ್ದಾನೆ.

ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶ

ಈ ಸುದ್ದಿ ಕೇಳಿ ಪ್ರಯಾಣಿಕರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಘಟನೆಯನ್ನು ಅಧಿಕಾರಿಗಳ ಗಮನಕ್ಕೆ ತಂದ ನಂತರ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅವರನ್ನು ಬಿಡುಗಡೆ ಮಾಡಲು ಅಧಿಕಾರಿಗಳನ್ನು ಕಳುಹಿಸಿದೆ. ಹತ್ತು ಗಂಟೆಗಳ ನಂತರ, ಭಾರತೀಯ ಅಧಿಕಾರಿಗಳು ಈ ಸಂಬಂಧ ಮಾತುಕತೆ ನಡೆಸಿದ ನಂತರ ಆರೋಪಿಗಳು ವ್ಯಕ್ತಿಗಳನ್ನು ಬಿಡುಗಡೆ ಮಾಡಿದರು. 157 ಮಂದಿ ಈಗ ಸೂರತ್‌ಗೆ ಹಿಂತಿರುಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಮಣಿಪುರ: ಇಬ್ಬರು ಮೈತಿ ವಿದ್ಯಾರ್ಥಿಗಳನ್ನು ಅಪಹರಿಸಿ, ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿ ಬಂಧನ

ವಿಯೆಟ್ನಾಂ ಪ್ರವಾಸವನ್ನು ಲೆಯುವಾ ಪಾಟಿದಾರ್ ಪ್ರಗತಿ ಮಂಡಲ್ ಆಯೋಜಿಸಿತ್ತು. ಪ್ರವಾಸದ ಭಾಗವಾಗಿ, ಸೂರತ್‌ನಿಂದ 157 ಜನರ ಬ್ಯಾಚ್ ಗುರುವಾರ ವಿಯೆಟ್ನಾಂಗೆ ಬಂದಿಳಿದಾಗ, ಆಯೋಜಕರು ಬಾಕಿ ಪಾವತಿಸದ ಆರೋಪದ ಮೇಲೆ ಟೂರ್ ಆಪರೇಟರ್ ಅವರನ್ನು ತಡೆದು ನಿಲ್ಲಿಸಿದ್ದ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?