AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರ ರಾಷ್ಟ್ರಗಳೊಂದಿಗೆ ದೇಶದ ಭದ್ರತೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡ ಪತ್ರಕರ್ತನ ವಿರುದ್ಧ ಸಿಬಿಐ ಕೇಸು ದಾಖಲು

ವಿವೇಕ್ ರಘುವಂಶಿ, ಡಿಆರ್‌ಡಿಒ ಮತ್ತು ಸೇನಾ ಯೋಜನೆಗಳ "ಸೂಕ್ಷ್ಮ" ಮತ್ತು "ಮಿನಿಟ್ಸ್" ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ವಿದೇಶಗಳ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಹೊರ ರಾಷ್ಟ್ರಗಳೊಂದಿಗೆ ದೇಶದ ಭದ್ರತೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡ ಪತ್ರಕರ್ತನ ವಿರುದ್ಧ ಸಿಬಿಐ ಕೇಸು ದಾಖಲು
ಸಿಬಿಐ
ರಶ್ಮಿ ಕಲ್ಲಕಟ್ಟ
|

Updated on:May 16, 2023 | 6:50 PM

Share

ದೆಹಲಿ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO) ಮತ್ತು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ ವಿದೇಶಗಳ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಫ್ರೀಲಾನ್ಸ್ ಪತ್ರಕರ್ತನ (freelance journalist)ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಿವೇಕ್ ರಘುವಂಶಿ ವಿರುದ್ಧ ಅಧಿಕಾರಿಗಳ ರಹಸ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಘುವಂಶಿ, ಡಿಆರ್‌ಡಿಒ ಮತ್ತು ಸೇನಾ ಯೋಜನೆಗಳ “ಸೂಕ್ಷ್ಮ” ಮತ್ತು “ಮಿನಿಟ್ಸ್” ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ವಿದೇಶಗಳ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಜೈಪುರ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ 12 ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸುತ್ತಿದ್ದು, ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಶೋಧ ವೇಳೆ  ಹಲವಾರು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕಾನೂನು ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಭಾರತ ಮತ್ತು ವಿದೇಶಗಳಲ್ಲಿ ರಘುವಂಶಿಯ ಸಹಚರರ ಬಗ್ಗೆ ಕಂಡುಹಿಡಿಯಲು ಸಂಸ್ಥೆ ಸಮಗ್ರ ತನಿಖೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಅವರು ವಿವಿಧ ಡಿಆರ್‌ಡಿಒ ಯೋಜನೆಗಳ ಪ್ರಗತಿಯ ಕುರಿತು ಸೂಕ್ಷ್ಮ ಮಾಹಿತಿ ಮತ್ತು ಸೂಕ್ಷ್ಮ ವಿವರಗಳನ್ನು ಸಂಗ್ರಹಿಸುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಮಿಡ್ನಾಪುರದಲ್ಲಿ ಪಟಾಕಿ ತಯಾರಿಸುತ್ತಿದ್ದ ಟಿಎಂಸಿ ನಾಯಕನ ಮನೆ ಸ್ಫೋಟ: ಏಳು ಸಾವು

ಅವರು ಭಾರತೀಯ ಸಶಸ್ತ್ರ ಪಡೆಗಳ ಭವಿಷ್ಯದ ಖರೀದಿ ಯೋಜನೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದರು, ಇದು ದೇಶದ ಕಾರ್ಯತಂತ್ರದ ಸನ್ನದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸಂಸ್ಥೆ ಆರೋಪಿಸಿದೆ. ರಘುವಂಶಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯ ಸಂವಹನ ಮಾಹಿತಿ, ಸ್ನೇಹಪರ ದೇಶಗಳೊಂದಿಗೆ ಭಾರತದ ವ್ಯೂಹಾತ್ಮಕ ಮತ್ತು ರಾಜತಾಂತ್ರಿಕ ಮಾತುಕತೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಈ ಮಾಹಿತಿಯನ್ನು ಬಹಿರಂಗವಾದರೆ ಈ ದೇಶಗಳೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧವನ್ನು ಅದು ಹಾಳುಮಾಡಬಹುದು ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Tue, 16 May 23