ಕರ್ನಾಟಕದಲ್ಲಿ ಸಿಕ್ಕಿದ ಹೊಸ ಸ್ನೇಹಿತರು; ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿದ ಫೋಟೊಗೆ ನೆಟ್ಟಿಗರು ಫಿದಾ
ಕರ್ನಾಟಕ ಪ್ರಚಾರದ ಸಮಯದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಂಡೆ ಎಂದು ಪ್ರಿಯಾಂಕಾ ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ. ಎರಡನೇ ಫೋಟೋದಲ್ಲಿ, ಕಾಂಗ್ರೆಸ್ ನಾಯಕಿ ಆನೆಯ ಸೊಂಡಿಲಿನ ಮೇಲೆ ಕೈ ಇಟ್ಟುಕೊಂಡು ನಗುತ್ತಿರುವುದನ್ನು ಕಾಣಬಹುದು.
ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyaka Gandhi Vadra) ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಚಂದದ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದು ಕರ್ನಾಟಕದಲ್ಲಿ (Karnataka) ತನ್ನ ಪ್ರಚಾರದ ಸಮಯದಲ್ಲಿ ಆನೆಯೊಂದಿಗೆ ಇರುವ ಫೋಟೊ. ಆನೆ ಸೊಂಡಿಲನ್ನು ಪ್ರಿಯಾಂಕಾ ತಲೆಯ ಮೇಲೆ ಇರಿಸಿದ್ದು ಅದು ಆಕೆಯನ್ನು ಆಶೀರ್ವದಿಸುತ್ತಿರುವಂತೆ ಎಂದು ತೋರುತ್ತದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಭಿನಂದಿಸುತ್ತಾ ಬಳಕೆದಾರರು ಫೋಟೋದಲ್ಲಿ ಅನೇಕ ಲವ್ ಇಮೋಜಿ ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಕರ್ನಾಟಕ ಪ್ರಚಾರದ ಸಮಯದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಂಡೆ ಎಂದು ಪ್ರಿಯಾಂಕಾ ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ. ಎರಡನೇ ಫೋಟೋದಲ್ಲಿ, ಕಾಂಗ್ರೆಸ್ ನಾಯಕಿ ಆನೆಯ ಸೊಂಡಿಲಿನ ಮೇಲೆ ಕೈ ಇಟ್ಟುಕೊಂಡು ನಗುತ್ತಿರುವುದನ್ನು ಕಾಣಬಹುದು. “Omg lovely,” ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ” Awwww how cute is the P” ಎಂದು ಮತ್ತೊಬ್ಬರು ಹೇಳಿದರು. ಮಾಶಾ ಅಲ್ಲಾ ಎಂದು ಮತ್ತೊಬ್ಬ ಬಳಕೆದಾರರು Instagram ನಲ್ಲಿ ಕಾಮೆಂಟ್ ಮಾಡಿದ್ದಾರೆ.
View this post on Instagram
ಮೇ 13 ರ ಫಲಿತಾಂಶದಲ್ಲಿ ಕರ್ನಾಟಕದ 244 ಸ್ಥಾನಗಳಲ್ಲಿ 137 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದರೊಂದಿಗೆ ದಕ್ಷಿಣದಲ್ಲಿ ಬಿಜೆಪಿ ತನ್ನ ಏಕೈಕ ಭದ್ರಕೋಟೆಯನ್ನು ಕಳೆದುಕೊಂಡಿತು. ಕಾಂಗ್ರೆಸ್ ಪಕ್ಷಕ್ಕೆ ಹಲವು ವರ್ಷಗಳಿಂದ ಸ್ಥಾನಗಳು ಮತ್ತು ಮತಗಳ ಹಂಚಿಕೆಯಲ್ಲಿ ಇದು ದಾಖಲೆಯಾಗಿದೆ. ಬಿಜೆಪಿ 65 ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿದೆ.
ಇದನ್ನೂ ಓದಿ:Fact Check: ರಾಹುಲ್ ಗಾಂಧಿಯನ್ನು ಹೊಗಳಿರುವ ವಿರಾಟ್ ಕೊಹ್ಲಿಯ ವೈರಲ್ ಇನ್‌ಸ್ಟಾಗ್ರಾಮ್ ಸ್ಟೋರಿ Fake
ಗೆಲುವಿಗಾಗಿ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಜನಪರ ಕಾಳಜಿಯನ್ನು ಎತ್ತಿ ಹಿಡಿಯುವ ವಿಷಯದ ಮೇಲೆ ಕೇಂದ್ರೀಕರಿಸಿದ ಕಾಂಗ್ರೆಸ್ ಪ್ರಚಾರವು ಹಿಟ್ ಆಗಿದೆ ಎಂದು ಹೇಳಿದರು. ಅವರು ಕರ್ನಾಟಕ ಚುನಾವಣೆಗಳಿಗಾಗಿ ಹೆಚ್ಚಿನ ಪ್ರಚಾರವನ್ನು ನಡೆಸಿದ್ದರು.12 ರೋಡ್ ಶೋಗಳಲ್ಲಿ ಭಾಗವಹಿಸುವುದರ ಜೊತೆಗೆ 13 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇವರು ಎರಡು ಮಹಿಳಾ ಸಭೆಗಳು ಮತ್ತು ಕಾರ್ಮಿಕರ ಸಭೆಯನ್ನೂ ನಡೆಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ