Fact Check: ರಾಹುಲ್​​ ಗಾಂಧಿಯನ್ನು ಹೊಗಳಿರುವ ವಿರಾಟ್ ಕೊಹ್ಲಿಯ ವೈರಲ್​​​​​ ಇನ್‌ಸ್ಟಾಗ್ರಾಮ್​​ ಸ್ಟೋರಿ Fake

ವೈರಲ್ ಸ್ಟೋರಿಯಲ್ಲಿ ಬಳಕೆದಾರ ಹೆಸರಿನಲ್ಲಿರುವ "L" ಅಕ್ಷರವು (Lower case) ನಿರ್ದಿಷ್ಟವಾದ ಫಾಂಟ್ ಶೈಲಿಯನ್ನು ಹೊಂದಿದೆ, ಅದನ್ನು ವೈರಲ್ ಆಗಿರುವ ಎಲ್ಲಾ ಸ್ಕ್ರೀನ್‌ಶಾಟ್‌ಗಳಲ್ಲಿ ಕಾಣಬಹುದು. ಅಂದಹಾಗೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪೋಸ್ಟ್​​ಗಳನ್ನು ವಿರಾಟ್ ಕೊಹ್ಲಿ ಶೇರ್ ಮಾಡಿಲ್ಲ.

Fact Check: ರಾಹುಲ್​​ ಗಾಂಧಿಯನ್ನು ಹೊಗಳಿರುವ ವಿರಾಟ್ ಕೊಹ್ಲಿಯ ವೈರಲ್​​​​​ ಇನ್‌ಸ್ಟಾಗ್ರಾಮ್​​ ಸ್ಟೋರಿ Fake
ವೈರಲ್ ಆಗಿರುವ ಇನ್ ಸ್ಟಾ ಸ್ಟೋರಿ
Follow us
ರಶ್ಮಿ ಕಲ್ಲಕಟ್ಟ
|

Updated on: May 16, 2023 | 8:06 PM

ಕರ್ನಾಟಕ ಚುನಾವಣೆಯ (Karnataka Assembly Elections) ಎಣಿಕೆ ನಡೆಯುತ್ತಿರುವಾಗ ಮತ್ತು ಆರಂಭಿಕ ಟ್ರೆಂಡ್‌ಗಳು ಕಾಂಗ್ರೆಸ್ 120 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತೋರಿಸಿದಾಗ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಇನ್‌ಸ್ಟಾಗ್ರಾಮ್ (Instagram) ಸ್ಟೋರಿ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಈ ಸ್ಟೋರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಫೋಟೋ ಮತ್ತು ಅವರ ಬಗ್ಗೆ ಕೆಲವು ಹೊಗಳಿಕೆಯ ಮಾತುಗಳನ್ನು ನೋಡಬಹುದು.

ಪತ್ರಕರ್ತೆ ಎಂದು ಹೇಳಿಕೊಳ್ಳುವ ಟ್ವಿಟರ್ ಬಳಕೆದಾರರಾದ ಸದಾ ಅಫ್ರೀನ್ ಅವರು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಸ್ಟೇಟಸ್‌ ಬಗ್ಗೆ ಏನಾದರೂ ಹೇಳಬೇಕೇ?” ಎಂದು ಹಿಂದಿಯಲ್ಲಿ ಬರೆದಿದ್ದಾರೆ. ಡಾ ನಿಮೋ ಯಾದವ್’ ಎಂಬ ಡಿಸ್ಪ್ಲೇ ಹೆಸರಿನ ಅಣಕು ಖಾತೆ ಕೂಡಾ ಇದೇ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು ವಿರಾಟ್ ಕೊಹ್ಲಿ ಈಸ್ ಆನ್ ಫೈರ್, ಅವರು ಅದನ್ನು ಅಳಿಸುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಬರೆದಿದ್ದಾರೆ.

ಫ್ಯಾಕ್ಟ್ ಚೆಕ್

ಈ ವೈರಲ್ ಸ್ಕ್ರೀನ್ ಶಾಟ್ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ ಆಲ್ಟ್ ನ್ಯೂಸ್, ಆ ದಿನ ವಿರಾಟ್ ಕೇವಲ ಎರಡು ಇನ್ಸ್ಟಾಗ್ರಾಮ್ ಸ್ಟೋರಿಗಳನ್ನು ಪೋಸ್ ಮಾಡಿದ್ದಾರೆ ಎಂದಿದೆ.  ವಿರಾಟ್ 248 ಮಿಲಿಯನ್ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ. ಆದರೆ, ಸ್ಟೋರಿ ಪೋಸ್ಟ್ ಮಾಡಿದ 17 ನಿಮಿಷಗಳ ನಂತರ ತೆಗೆದ ಒಂದು ಸ್ಕ್ರೀನ್‌ಶಾಟ್ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೈರಲ್ ಸ್ಟೋರಿಯಲ್ಲಿ ಬಳಕೆದಾರ ಹೆಸರಿನಲ್ಲಿರುವ “L” ಅಕ್ಷರವು (Lower case) ನಿರ್ದಿಷ್ಟವಾದ ಫಾಂಟ್ ಶೈಲಿಯನ್ನು ಹೊಂದಿದೆ, ಅದನ್ನು ಹಂಚಿಕೊಂಡಿರುವ ಎಲ್ಲಾ ಸ್ಕ್ರೀನ್‌ಶಾಟ್‌ಗಳಲ್ಲಿ ಕಾಣಬಹುದು. ವಿರಾಟ್ ಕೊಹ್ಲಿ ಹೆಸರಿನ ಮುಂದಿರುವ ವೆರಿಫೈಡ್ ಚೆಕ್ ಮಾರ್ಕ್ ಸರಿಯಾಗಿ ಜೋಡಿಸಲಾಗಿಲ್ಲ ಎಂದು ತೋರುತ್ತದೆ.

viral-ss

ಇನ್ನೊಂದು ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಬಳಕೆದಾರರ ಹೆಸರು ಮತ್ತು ವೆರಿಫೈಡ್ ಚೆಕ್‌ಮಾರ್ಕ್ ಅನ್ನು ಸರಾಗಿ ಜೋಡಿಸಲಾಗಿದೆ ಎಂದು ಕಂಡುಬಂದರೂ, ರಾಹುಲ್ ಗಾಂಧಿಯವರ ಫೋಟೋವನ್ನು ಬೇರೆ ಯಾವುದೋ ಮೇಲೆ ಇರಿಸಲಾಗಿದೆ ಎಂದು ತೋರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರಾಹುಲ್ ಗಾಂಧಿಯವರ ಫೋಟೋವನ್ನು ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರ ಫೋಟೋ ಮೇಲೆ ಇರಿಸಿರುವುದು ಕಾಣಬಹುದು. ಸೂರ್ಯ ಕುಮಾರ್ ಬಗ್ಗೆ ಕೊಹ್ಲಿ ಇನ್ ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಸೂರ್ಯ ಕುಮಾರ್ ಅವರ ನೀಲಿ ಜೆರ್ಸಿಯ ಒಂದು ಭಾಗವು ರಾಹುಲ್ ಗಾಂಧಿಯ ಫೋಟೋ ಕೆಳಗೆ ಗೋಚರಿಸುತ್ತದೆ.

ಇದನ್ನೂ ಓದಿ: Fact Check: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಪಾಕ್ ಪಿಎಂ ಶೆಹಬಾಜ್ ಷರೀಫ್ ಅಭಿನಂದಿಸಿರುವ ಟ್ವೀಟ್ ಫೇಕ್

ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಎರಡು ತಿರುಚಿದ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯ ವಿಜಯದ ಬಗ್ಗೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ