10 ಡೌನಿಂಗ್ ಸ್ಟ್ರೀಟ್ ಎಂದು ವಿಳಾಸ ಬರೆದಾಗ ಇದೇನು ತಮಾಷೆನಾ?ಎಂದು ಕೇಳಿದ್ದರು ವಲಸೆ ಅಧಿಕಾರಿ: ಲಂಡನ್ನಲ್ಲಿನ ಅನುಭವ ಹೇಳಿದ ಸುಧಾಮೂರ್ತಿ
ಲಂಡನ್‌ನಲ್ಲಿ ಎಲ್ಲಿ ತಂಗಿದ್ದೀಯಾ? ಎಂದು ಅವರು ನನ್ನಲ್ಲಿ ಕೇಳಿದರು. ನನ್ನ ಅಕ್ಕ ನನ್ನ ಜೊತೆಗಿದ್ದಳು. ನನ್ನ ಮಗ ಅಲ್ಲಿ (ಯುಕೆ) ವಾಸಿಸುತ್ತಾನೆ, ಆದರೆ ನನಗೆ ಅವನ ಸಂಪೂರ್ಣ ವಿಳಾಸ ನೆನಪಿಲ್ಲ.ಹಾಗಾಗಿ ನಾನು ‘10 ಡೌನಿಂಗ್ ಸ್ಟ್ರೀಟ್’ ಎಂದು ಬರೆಯಬೇಕು ಎಂದುಕೊಂಡೆ. ಕೊನೆಗೆ 10 ಡೌನಿಂಗ್ ಸ್ಟ್ರೀಟ್ ಎಂದೇ ಬರೆದೆ.
ಇನ್ಫೋಸಿಸ್ ಫೌಂಡೇಶನ್‌ನ ಸಂಸ್ಥಾಪಕಿ, ಲೇಖಕಿ, ಪರೋಪಕಾರಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಈಗ ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ರಿಷಿ ಸುನಕ್ (Rishi Sunak) ಅವರ ಅತ್ತೆ ಸುಧಾಮೂರ್ತಿ (Sudha Murty) ಕಪಿಲ್ ಶರ್ಮಾ ಶೋನಲ್ಲಿ (Kapil Sharma Show)ಲಂಡನ್ ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ಜನರು ತಮ್ಮನ್ನು ಯುಕೆಯ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರ ತಾಯಿ ಮತ್ತು ವಿಶೇಷವಾಗಿ ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಅತ್ತೆ ಎಂದು ನಂಬಲು ನಿರಾಕರಿಸುತ್ತಾರೆ ಎಂದು ಹೇಳಿದ್ದಾರೆ. ಅದಕ್ಕೆ ಅವರ ಸಿಂಪಲ್ ಲುಕ್ ಕಾರಣ.
ಲಂಡನ್ ವಿಮಾನ ನಿಲ್ದಾಣದಲ್ಲಿ ತಮ್ಮ ವಿಳಾಸ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸ ಮತ್ತು ಕಚೇರಿಯಾದ ’10 ಡೌನಿಂಗ್ ಸ್ಟ್ರೀಟ್’ ಎಂದು ಬರೆದಾಗ ಯುಕೆಯಲ್ಲಿನ ವಲಸೆ ಅಧಿಕಾರಿಯೊಬ್ಬರು ಅದನ್ನು ನಂಬಲು ನಿರಾಕರಿಸಿದರು ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಆ ಸ್ವಾರಸ್ಯಕರ ಘಟನೆ ಹೀಗಿದೆ. ಒಮ್ಮೆ ನಾನು ಲಂಡನ್ ಗೆ ಹೋದಾಗ, ಅವರು ನನ್ನ ನಿವಾಸದ ವಿಳಾಸವನ್ನು ಕೇಳಿದರು. ‘ಲಂಡನ್‌ನಲ್ಲಿ ಎಲ್ಲಿ ತಂಗಿದ್ದೀಯಾ? ಎಂದು ಅವರು ನನ್ನಲ್ಲಿ ಕೇಳಿದರು. ನನ್ನ ಅಕ್ಕ ನನ್ನ ಜೊತೆಗಿದ್ದಳು. ನನ್ನ ಮಗ ಅಲ್ಲಿ (ಯುಕೆ) ವಾಸಿಸುತ್ತಾನೆ, ಆದರೆ ನನಗೆ ಅವನ ಸಂಪೂರ್ಣ ವಿಳಾಸ ನೆನಪಿಲ್ಲ. ಹಾಗಾಗಿ ನಾನು ‘10 ಡೌನಿಂಗ್ ಸ್ಟ್ರೀಟ್’ ಎಂದು ಬರೆಯಬೇಕು ಎಂದುಕೊಂಡೆ. ಕೊನೆಗೆ 10 ಡೌನಿಂಗ್ ಸ್ಟ್ರೀಟ್ ಎಂದೇ ಬರೆದೆ. ಆಗ ವಲಸೆ ಅಧಿಕಾರಿ ನನ್ನತ್ತ ನೋಡಿ ‘ನೀನು ತಮಾಷೆ ಮಾಡುತ್ತಿದ್ದೀಯಾ?’ ಎಂದು ಕೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಸಿಕ್ಕಿದ ಹೊಸ ಸ್ನೇಹಿತರು; ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿದ ಫೋಟೊಗೆ ನೆಟ್ಟಿಗರು ಫಿದಾ
ನಾನು ಅವರಿಗೆ ‘ನಹಿ, ಸಚ್ಚಿ ಬೋಲ್ತಿ ಹೂ’ (ಇಲ್ಲ, ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ) ಎಂದು ಹೇಳಿದೆ. ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಅವರು ಭಾವಿಸಿದ್ದರು. 72 ವರ್ಷ ವಯಸ್ಸಿನ, ಸರಳ ಮಹಿಳೆಯಾಗಿರುವ ನಾನು ಯುಕೆ ಪ್ರಧಾನಿಯ ಅತ್ತೆ ಎಂದು ಯಾರೂ ನಂಬುವುದಿಲ್ಲ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಕಪಿಲ್ ಶೋ ಶರ್ಮಾ ಶೋನಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ನಿರ್ಮಾಪಕಿ ಗುನೀತ್ ಮೊಂಗಾ, ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ನಟಿ ರವೀನಾ ಟಂಡನ್ ಕೂಡೂ ಸುಧಾ ಮೂರ್ತಿ ಜತೆ ಭಾಗವಹಿಸಿದ್ದರು. ಏಪ್ರಿಲ್‌ನಲ್ಲಿ, ಸುಧಾ ಮೂರ್ತಿ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:44 pm, Tue, 16 May 23