Internet ಗೆ ಶರವೇಗ? 4ಜಿ ತರಂಗಾಂತರ ಹರಾಜಿಗೆ ಕೇಂದ್ರ ಕ್ಯಾಬಿನೆಟ್ ಅಸ್ತು
ಒಟ್ಟೂ 2251.25 ಮೆಗಾಹರ್ಟ್ಸ್ಗಳನ್ನು ಕೇಂದ್ರ ಸರ್ಕಾರ ಹರಾಜಿಗೆ ಇಡುತ್ತಿದೆ. ಇದರಿಂದ, ಸರ್ಕಾರಕ್ಕೆ 3.92 ಲಕ್ಷ ಕೋಟಿ ರೂಪಾಯಿ ಸಿಗುವ ಸಾಧ್ಯತೆ ಇದೆ. ಮಾರ್ಚ್ 2021ರಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ನವದೆಹಲಿ: ದೇಶದಲ್ಲಿ Internet ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ದೂರ ಸಂಪರ್ಕದಲ್ಲಿ ಕ್ಷಮತೆ ಸಾಧಿಸಲು 4ಜಿ ತರಂಗಾಂತರಗಳನ್ನ ಹರಾಜು ಹಾಕಲಾಗಿದೆ. ಅಂದಾಜು 3.92 ಲಕ್ಷ ಕೋಟಿ ರೂಪಾಯಿಗೆ ಹರಾಜು ಹಾಕಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
700 ಮೆಗಾಹರ್ಟ್ಸ್, 800 ಮೆಗಾಹರ್ಟ್ಸ್, 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್, 2100 ಮೆಗಾಹರ್ಟ್ಸ್, 2300 ಮೆಗಾಹರ್ಟ್ಸ್ ಹಾಗೂ 2500 ಮೆಗಾಹರ್ಟ್ಸ್ ಫ್ರೀಕ್ವೆನ್ಸಿಯ ಬ್ಯಾಂಡ್ಗಳನ್ನು ಮಾರಾಟ ಮಾಡಲಾಗುತ್ತಿದೆ. 20 ವರ್ಷಗಳ ಕಾಲ ಇದರ ವ್ಯಾಲಿಡಿಟಿ ಇರಲಿದೆ.
ಒಟ್ಟೂ 2251.25 ಮೆಗಾಹರ್ಟ್ಸ್ಗಳನ್ನು ಕೇಂದ್ರ ಸರ್ಕಾರ ಹರಾಜಿಗೆ ಇಡುತ್ತಿದೆ. ಇದರಿಂದ, ಸರ್ಕಾರಕ್ಕೆ 3.92 ಲಕ್ಷ ಕೋಟಿ ರೂಪಾಯಿ ಸಿಗುವ ಸಾಧ್ಯತೆ ಇದೆ. ಮಾರ್ಚ್ 2021ರಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. 2016ರಲ್ಲಿ ಕೊನೆಯದಾಗಿ ತರಂಗಾಂತರಗಳನ್ನು ಹರಾಜು ಹಾಕಲಾಗಿತ್ತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಅಂದಹಾಗೆ, ಕೇಂದ್ರ ಸರ್ಕಾರ 5ಜಿ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಹೀಗಾಗಿ, ಮಾರ್ಚ್ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆ ಕೇವಲ 4ಜಿಗೆ ಮಾತ್ರ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಂದು, ಕೇಂದ್ರ ಸರ್ಕಾರ ಸಂಪುಟ ಸಭೆ ಕರೆದಿತ್ತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ, ಕೆಲ ಮಹತ್ವದ ನಿರ್ಧಾರಗಳಿಗೆ ಅನುಮೋದನೆ ಕೂಡ ದೊರೆತಿದೆ.