ದೆಹಲಿಯಲ್ಲಿ ಕೆಜಿಗೆ 65 ರೂ. ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ
ಸಾಮಾನ್ಯ ಜನರಿಗೆ ಪರಿಹಾರ ನೀಡಲು ಮತ್ತು ಮಧ್ಯವರ್ತಿಗಳ ಕಾಟವನ್ನು ತಡೆಯಲು ಕೇಂದ್ರ ಸರ್ಕಾರವು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿಗೆ 65 ರೂ.ಗೆ ಟೊಮ್ಯಾಟೊವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ದೆಹಲಿಯಲ್ಲಿ ಟೊಮ್ಯಾಟೊ ಕೆಜಿಗೆ ಸರಾಸರಿ 90 ರೂ.ಗೆ ಮಾರಾಟವಾಗುತ್ತಿದೆ.
ನವದೆಹಲಿ: ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸುವ ಮತ್ತು ಮಧ್ಯವರ್ತಿಗಳಿಂದ ಅಧಿಕ ಲಾಭವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂದು ದೆಹಲಿಯಲ್ಲಿ ಪ್ರತಿ ಕೆಜಿಗೆ 65 ರೂ.ಗಳ ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಹಣ್ಣಿನ ಮಾರಾಟವನ್ನು ಪ್ರಾರಂಭಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಸರಾಸರಿ 90 ರೂ.ಗೆ ಮಾರಾಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತಲೆಬಿಸಿಯಾಗಿತ್ತು.
ಕಡಿಮೆ ದರದಲ್ಲಿ ಟೊಮ್ಯಾಟೊ ಮಾರಾಟಕ್ಕೆ ಅನುಕೂಲವಾಗುವಂತೆ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ನಗರದಾದ್ಯಂತ ಮೊಬೈಲ್ ವ್ಯಾನ್‌ಗಳನ್ನು ನಿಯೋಜಿಸಿದೆ. ಈ ಯೋಜನೆಯನ್ನು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಅವರು ಅಧಿಕೃತವಾಗಿ ಪ್ರಾರಂಭಿಸಿದರು. ಅವರು NCCF ವ್ಯಾನ್‌ಗಳನ್ನು ಫ್ಲ್ಯಾಗ್‌ಆಫ್ ಮಾಡಿದರು.
Flagged off mobile vans of NCCF from Krishi Bhavan, New Delhi today for Retail sale of Tomatoes at Rupees 65/- Per kg. The initiative will help in bringing relief to consumers in Delhi-NCR from high tomato prices.#TomatoPrice #NCCF pic.twitter.com/L7p7K6VpFo
— Nidhi Khare (@inidhikhare) October 7, 2024
“ನಾವು ಟೊಮ್ಯಾಟೊ ಬೆಲೆಯನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ. ಈ ಮಾರುಕಟ್ಟೆ ಮಧ್ಯಸ್ಥಿಕೆಯೊಂದಿಗೆ ಮುಂದಿನ 3-4 ದಿನಗಳಲ್ಲಿ ಟೊಮ್ಯಾಟೊ ಬೆಲೆಗಳು ಕಡಿಮೆಯಾಗುತ್ತವೆ” ಎಂದು ನಿಧಿ ಖರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
NCCF ನೇರವಾಗಿ ಮಂಡಿಗಳಿಂದ ಟೊಮ್ಯಾಟೊಗಳನ್ನು ಖರೀದಿಸಿ ಮತ್ತು ಪ್ರತಿ ಕೆಜಿಗೆ 65 ರೂಪಾಯಿಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ಹಸ್ತಕ್ಷೇಪವನ್ನು ಪ್ರಾರಂಭಿಸಿದೆ. ಮೊಬೈಲ್ ವ್ಯಾನ್‌ಗಳು ರಾಷ್ಟ್ರ ರಾಜಧಾನಿಯ 50 ಕಾಲೋನಿಗಳಲ್ಲಿ ಟೊಮ್ಯಾಟೊಗಳನ್ನು ಮಾರಾಟ ಮಾಡುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ