ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ ಸಿಗುವಂತೆ ಕೇಂದ್ರ ಸರ್ಕಾರವೂ ಶ್ರಮಿಸುತ್ತಿದೆ: ವಿದೇಶಾಂಗ ಇಲಾಖೆ

| Updated By: ganapathi bhat

Updated on: Jun 25, 2021 | 4:18 PM

ಭಾರತೀಯ ವಿದೇಶಾಂಗ ಇಲಾಖೆ, ಭಾರತ್ ಬಯೋಟೆಕ್​ನ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಸಿಗುವಂತೆ ಸಮೀಪದಿಂದ ಕೆಲಸ ಮಾಡುತ್ತಿದೆ. ಸದ್ಯ, ಲಸಿಕೆಗೆ ಅನುಮೋದನೆ ಸಿಗದೇ ಇರುವ ಕಾರಣ, ವಿದೇಶಕ್ಕೆ ಪ್ರಯಾಣ ಬೆಳೆಸುವ ಹಲವರಿಗೆ ಸಮಸ್ಯೆ ಉಂಟಾಗಿದೆ.

ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ ಸಿಗುವಂತೆ ಕೇಂದ್ರ ಸರ್ಕಾರವೂ ಶ್ರಮಿಸುತ್ತಿದೆ: ವಿದೇಶಾಂಗ ಇಲಾಖೆ
ಕೊರೊನಾ ಲಸಿಕೆ
Follow us on

ದೆಹಲಿ: ಕೊರೊನಾ ವಿರುದ್ಧದ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಪೂರ್ಣ ಪ್ರಮಾಣದ ಒಪ್ಪಿಗೆ ಸಿಗುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೆ ಭಾರತ ಸರ್ಕಾರ ಸೂಕ್ತ ಕೆಲಸಗಳನ್ನು ಮಾಡುತ್ತಿದೆ, ಪ್ರಕ್ರಿಯೆಯನ್ನು ಸಮೀಪದಿಂದ ಗಮನಿಸುತ್ತಿದೆ ಎಂದೂ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ತಿಳಿಸಿದ್ದಾರೆ. ಭಾರತ್ ಬಯೋಟೆಕ್ ನಡೆಸುತ್ತಿರುವ ಯತ್ನಗಳನ್ನು ನಾವು ಸಮೀಪದಿಂದ ಗಮನಿಸುತ್ತಿದ್ದೇವೆ ಎಂದು ಬಾಗ್ಚಿ ಹೇಳಿರುವುದನ್ನು ಎಎನ್​ಐ ವರದಿ ಮಾಡಿದೆ.

ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದಕ ಕಂಪೆನಿ ಭಾರತ್ ಬಯೋಟೆಕ್, ಯುನೈಟೆಡ್ ನೇಷನ್ಸ್​ನ ವಿಶ್ವ ಆರೋಗ್ಯ ಸಂಸ್ಥೆಯಿಂದ ಲಸಿಕೆಗೆ ಒಪ್ಪಿಗೆ ಸಿಗುವ ಬಗ್ಗೆ ಭರವಸೆ ವ್ಯಕ್ತಪಡಿಸಿತ್ತು. ಜುಲೈನಿಂದ ಸಪ್ಟೆಂಬರ್ ವೇಳೆಯಲ್ಲಿ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಸಿಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೊವ್ಯಾಕ್ಸಿನ್ ಲಸಿಕೆ ತಯಾರಕ ಸಂಸ್ಥೆ, ಅದಕ್ಕೆ ಬೇಕಾದ ಶೇಕಡಾ 90ರಷ್ಟು ಸೂಕ್ತ ದಾಖಲೆಗಳನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗಿದೆ. ಉಳಿದ ಕೆಲವು ದಾಖಲೆಗಳನ್ನು ಜುಲೈನಲ್ಲಿ ಕಳುಹಿಸಿಕೊಡಲಾಗುವುದು ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಈ ಬಗ್ಗೆ ಯುನೈಟೆಡ್ ನೇಷನ್ಸ್ ಸಂಸ್ಥೆಯೊಂದಿಗೆ ಭಾರತ್ ಬಯೋಟೆಕ್ ಜುಲೈ 23ರಂದು ಪೂರ್ವ ಸಭೆಯನ್ನು ಕೂಡ ನಡೆಸಿದೆ.

ಭಾರತೀಯ ವಿದೇಶಾಂಗ ಇಲಾಖೆ, ಭಾರತ್ ಬಯೋಟೆಕ್​ನ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಸಿಗುವಂತೆ ಸಮೀಪದಿಂದ ಕೆಲಸ ಮಾಡುತ್ತಿದೆ. ಸದ್ಯ, ಲಸಿಕೆಗೆ ಅನುಮೋದನೆ ಸಿಗದೇ ಇರುವ ಕಾರಣ, ವಿದೇಶಕ್ಕೆ ಪ್ರಯಾಣ ಬೆಳೆಸುವ ಹಲವರಿಗೆ ಸಮಸ್ಯೆ ಉಂಟಾಗಿದೆ.

ಭಾರತದಿಂದ ಬಹುದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಕಲಿಕೆಗೆಂದು ವಿದೇಶಕ್ಕೆ ಪ್ರಯಾಣಿಸುತ್ತಾರೆ. ಅದರಲ್ಲಿ ಹಲವು ವಿದ್ಯಾರ್ಥಿಗಳು ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡ ಬಳಿಕ, ಅವರಿಗೆ ತಾವು ಹಾಕಿಸಿದ ಲಸಿಕೆ ವಿದೇಶದಲ್ಲಿ ಒಪ್ಪಿತವಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಅವರಿಗೆ ತೊಂದರೆ ಉಂಟಾಗಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯನ್ನು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: 1.89 ಕೋಟಿ ಡೋಸ್ ಬಳಕೆಯಾಗದ ಕೊವಿಡ್ ಲಸಿಕೆ ರಾಜ್ಯಗಳಲ್ಲಿವೆ: ಕೇಂದ್ರ ಆರೋಗ್ಯ ಇಲಾಖೆ

ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಸಿಕ್ಕಿಲ್ಲ ಪೂರ್ಣ ಪ್ರಮಾಣದ ಒಪ್ಪಿಗೆ; ಇನ್ನೂ ಬಾಕಿ ಇದೆ 3ನೇ ಹಂತದ ಪ್ರಯೋಗ! ಮುಂದೇನು?