ದೆಹಲಿ: ತೆಂಗು ಅಭಿವೃದ್ಧಿ ಸಂಸ್ಥೆಗೆ ಚೇರ್ಮನ್ ಆಗಿ ಖಾಸಗಿ ವ್ಯಕ್ತಿ ನೇಮಕ, ತೆಂಗು ವಿದೇಶಕ್ಕೆ ರಫ್ತು ಮಾಡಲು ಕೇಂದ್ರದಿಂದ ಅವಕಾಶ ನೀಡುವುದಾಗಿ ದೆಹಲಿಯಲ್ಲಿ ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಈ ಹಿಂದೆ ವಿದೇಶಗಳಿಗೆ ತೆಂಗು ರಫ್ತಿಗೆ ಅವಕಾಶ ಇರಲಿಲ್ಲ. ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ₹1 ಲಕ್ಷ ಕೋಟಿ ಇಟ್ಟಿದೆ. ಒಂದೊಂದು ಸ್ಥಳೀಯ ಸಂಸ್ಥೆಗೆ 25 ಯೋಜನೆಗೆ ಅವಕಾಶ ನೀಡಿದೆ. ಕಳೆದ ಬಾರಿ ರಾಜ್ಯದಲ್ಲಿ ನೆರೆ ಬಂದಾಗ NDRFನಿಂದ 685 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಯಂತ್ರಗಳ MRP ಬಹಿರಂಗ ಪಡಿಸುವ ಬಗ್ಗೆ ಕೇಂದ್ರ ತೀರ್ಮಾನ ಮಾಡಿದೆ. ಕೃಷಿ ಸಿಂಚಾಯಿ ಯೋಜನೆ ಬಗ್ಗೆ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ.
2021-22ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಸಿಂಚಾಯಿ ಯೋಜನೆಗೆ 4 ಸಾವಿರ ಕೋಟಿ ಇಟ್ಟಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ 500 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. 300 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ದೇಶದಲ್ಲಿ 112 ಲಕ್ಷ ಹೆಕ್ಟರ್ ಭೂಮಿಯಲ್ಲಿ 2026 ಕ್ಕೆ ಸಿಂಚಾಯಿ ಯೋಜನೆ ಅನುಷ್ಟಾನ ಮಾಡಲು ತೀರ್ಮಾನ ಮಾಡಲಾಗಿದೆ. ನೀರು ಕಡಿಮೆ ಇರುವ ಪ್ರದೇಶಗಳೇ ಇದರ ಯೋಜನೆ. ಸಿರಿಧಾನ್ಯ ಅತಿಹೆಚ್ಚು ಬೆಳೆಯೋ ರಾಜ್ಯ ಕರ್ನಾಟಕ. ಸಿರಿಧಾನ್ಯವನ್ನ ಬೇರೆಬೇರೆ ದೇಶಕ್ಕೆ ರಫ್ತು ಮಾಡಲು ಉತ್ತೇಜನ ಮಾಡಲಾಗುತ್ತೆ. 2023 ಕ್ಕೆ ಇಂಟರ್ನಾಷನಲ್ ಡೇ ಆಫ್ ಮಿಲೆಟ್ಸ್ ಎಂಬ ಕಾರ್ಯಕ್ರಮ ಮಾಡಲಾಗುತ್ತೆ. ಇದಕ್ಕೆ ಯುನೈಟೆಡ್ ರಾಷ್ಟ್ರಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬ್ಲಾಕ್‌ಮೇಲ್ ತಂತ್ರ ಮಾಡುವುದಿಲ್ಲ, ನೇರವಾಗಿ ಕೇಳುತ್ತೇನೆ: ಸಚಿವ ಆನಂದ್ ಸಿಂಗ್