ಕೊರೊನಾ ಸಂಕಷ್ಟ: ದೇಶದ 80 ಕೋಟಿ ಬಡವರಿಗೆ 2 ತಿಂಗಳು ಆಹಾರಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ

| Updated By: ganapathi bhat

Updated on: Aug 23, 2021 | 12:51 PM

ಕೊರೊನಾ ಸೋಂಕಿನಿಂದ ಆಗಿರುವ ಆರ್ಥಿಕ ತೊಂದರೆಯಿಂದ ಬಡವರು ಬಳಲದಂತೆ ಕೇಂದ್ರ ಸರ್ಕಾರದಿಂದ ಆಹಾರ ಧಾನ್ಯ ನೀಡಿಕೆ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕೆ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಇಂದು ಒಪ್ಪಿಗೆ ಸಿಕ್ಕಿದೆ.

ಕೊರೊನಾ ಸಂಕಷ್ಟ: ದೇಶದ 80 ಕೋಟಿ ಬಡವರಿಗೆ 2 ತಿಂಗಳು ಆಹಾರಧಾನ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ
ನರೇಂದ್ರ ಮೋದಿ
Follow us on

ದೆಹಲಿ: ದೇಶದ ಬಡವರಿಗೆ 2 ತಿಂಗಳು ಆಹಾರಧಾನ್ಯ ನೀಡಲು ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. 79.88 ಕೋಟಿ ಫಲಾನುಭವಿಗಳಿಗೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಉಚಿತ ಆಹಾರ ಧಾನ್ಯ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅದರಂತೆ ಪ್ರತಿಯೊಬ್ಬರಿಗೂ 5 ಕೆಜಿ ಆಹಾರ ಧಾನ್ಯ ನೀಡಲಾಗುವುದು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್‌ ಅನ್ನ ಯೋಜನೆ-3 ಜಾರಿ ಮಾಡಲಾಗುವುದು. ಇದಕ್ಕಾಗಿ 25,332 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಲಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಆಹಾರಧಾನ್ಯ ನೀಡಿಕೆಗೆ ಒಪ್ಪಿಗೆ ನೀಡಲಾಗಿದ್ದು, ಉಳಿದಂತೆ ದೇಶಾದ್ಯಂತ ಲಾಕ್​ಡೌನ್ ಜಾರಿ ಬಗ್ಗೆ ಇಂದಿನ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಂಡಿಲ್ಲ. ಎರಡು ತಿಂಗಳ ಕಾಲ ನಾಗರಿಕ ಪೂರೈಕೆ ಮೂಲಕ ಅಕ್ಕಿ, ಗೋಧಿ ನೀಡಲಾಗುತ್ತದೆ. ಪ್ರತಿ ಮೆಟ್ರಿಕ್ ಟನ್ ಅಕ್ಕಿಗೆ 36,789 ರೂಪಾಯಿ ಹಾಗೂ ಪ್ರತಿ ಮೆಟ್ರಿಕ್ ಟನ್ ಗೋಧಿಗೆ 25,731 ರೂಪಾಯಿ ನೀಡಿ ಖರೀದಿ ಮಾಡಲಾಗುತ್ತದೆ. ಎರಡು ತಿಂಗಳಿಗೆ 80 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ನೀಡಿಕೆ ‌ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

ಕೊರೊನಾ ಸೋಂಕಿನಿಂದ ಆಗಿರುವ ಆರ್ಥಿಕ ತೊಂದರೆಯಿಂದ ಬಡವರು ಬಳಲದಂತೆ ಕೇಂದ್ರ ಸರ್ಕಾರದಿಂದ ಆಹಾರ ಧಾನ್ಯ ನೀಡಿಕೆ ಯೋಜನೆ ಜಾರಿಗೊಳಿಸಲಾಗಿದೆ. ಇದಕ್ಕೆ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಇಂದು ಒಪ್ಪಿಗೆ ಸಿಕ್ಕಿದೆ.

ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,780 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ 900 ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದು ದೆಹಲಿಯಲ್ಲಿ 338 ಮತ್ತು ಉತ್ತರಪ್ರದೇಶದಲ್ಲಿ 351ಮಂದಿ ಮೃತ ಪಟ್ಟಿದ್ದಾರೆ. ಕನಿಷ್ಠ 13 ರಾಜ್ಯಗಳಲ್ಲಿ 100ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ದೇಶದಲ್ಲಿ 3.82 ಲಕ್ಷ ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸಕ್ರಿಯ ಪ್ರಕರಣಗಳಸಂಖ್ಯೆ 34. 87ಲಕ್ಷಕ್ಕೇರಿದೆ. ಮಹಾರಾಷ್ಟ್ರದಲ್ಲಿ 51,880 ಪ್ರಕರಣ ಪತ್ತೆಯಾಗಿದ್ದು ಕರ್ನಾಟಕದಲ್ಲಿ 44,631 ಪ್ರಕರಣಗಳು ವರದಿ ಆಗಿವೆ.

ಭಾರತದಲ್ಲಿ ಪ್ರತಿ ದಿನ ಮೂರು ಲಕ್ಷ ಕೊವಿಡ್ -19 ಪ್ರಕರಣಗಳನ್ನು ವರದಿಯಾಗುತ್ತಿದ್ದು ಹಲವಾರು ರಾಜ್ಯಗಳು ಇನ್ನೂ ಆಮ್ಲಜನಕದ ಪೂರೈಕೆಯ ಕೊರತೆ ಇದೆ . ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸದಿದ್ದಲ್ಲಿ ಹಲವಾರು ಜೀವಗಳು ನಷ್ಟವಾಗುತ್ತವೆ ಎಂದು ಹರ್ಯಾಣ ಸರ್ಕಾರ ಮಂಗಳವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ತಿಳಿಸಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ಕೇಂದ್ರ ಸರ್ಕಾರಕ್ಕೆಪ್ರತ್ಯೇಕವಾಗಿ ಪತ್ರ ಬರೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಗೆ ಒತ್ತಾಯಿಸಿದೆ. ಮೇ 3 ರಂದು ಒಂದೇ ದಿನ ದೆಹಲಿಯ 41 ಆಸ್ಪತ್ರೆಗಳಲ್ಲಿ 7,000 ರೋಗಿಗಳ ದಾಖಲಾತಿ ಆಗಿದೆ.

ಇದನ್ನೂ ಓದಿ: ‘ಕೇರಳದಲ್ಲಿ ಲಸಿಕೆ ವ್ಯರ್ಥವಾಗುತ್ತಿಲ್ಲ’ ಪಿಣರಾಯಿ ವಿಜಯನ್ ಟ್ವೀಟ್ ರೀಟ್ವೀಟ್ ಮಾಡಿ ಶ್ಲಾಘಿಸಿದ ನರೇಂದ್ರ ಮೋದಿ

Covid Lockdown: ಕೋವಿಡ್ 2ನೇ ಅಲೆಗೆ ಕಡಿವಾಣ ಹಾಕಲು ಲಾಕ್​ಡೌನ್ ಹೇರಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್​ ಸೂಚನೆ

(Central Govt to provide free food grains to approx. 80 crores people across India)

Published On - 3:16 pm, Wed, 5 May 21