‘ಕೇರಳದಲ್ಲಿ ಲಸಿಕೆ ವ್ಯರ್ಥವಾಗುತ್ತಿಲ್ಲ’ ಪಿಣರಾಯಿ ವಿಜಯನ್ ಟ್ವೀಟ್ ರೀಟ್ವೀಟ್ ಮಾಡಿ ಶ್ಲಾಘಿಸಿದ ನರೇಂದ್ರ ಮೋದಿ

Vaccine Wastage: ಕೊವಿಡ್-19 ವಿರುದ್ಧದ ಹೋರಾಟ ಬಲಪಡಿಸಲು ಲಸಿಕೆ ಪೋಲಾಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

  • TV9 Web Team
  • Published On - 14:26 PM, 5 May 2021
‘ಕೇರಳದಲ್ಲಿ ಲಸಿಕೆ ವ್ಯರ್ಥವಾಗುತ್ತಿಲ್ಲ’ ಪಿಣರಾಯಿ ವಿಜಯನ್ ಟ್ವೀಟ್ ರೀಟ್ವೀಟ್ ಮಾಡಿ ಶ್ಲಾಘಿಸಿದ ನರೇಂದ್ರ ಮೋದಿ
ನರೇಂದ್ರ ಮೋದಿ

ದೆಹಲಿ: ಮೂರನೇ ಹಂತದ ಕೊವಿಡ್ ಲಸಿಕೆ ಅಭಿಯಾನ ಮತ್ತು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುತ್ತಿರುವ ಹೊತ್ತಲ್ಲಿ ಲಸಿಕೆಯನ್ನು ವ್ಯರ್ಥ ಮಾಡದೆ ಸದುಪಯೋಗ ಪಡಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ದಾದಿಯರ ಪರಿಶ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ವಿರುದ್ಧದ ಹೋರಾಟ ಬಲಪಡಿಸಲು ಲಸಿಕೆ ಪೋಲಾಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಟ್ವೀಟ್ ನ್ನು ರೀಟ್ವೀಟ್ ಮಾಡಿದ ಮೋದಿ, ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ಮಾದರಿಯಾಗುತ್ತಿರುವುದು ಖುಷಿ ಕೊಡುತ್ತಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಕೇರಳ 73,38,806 ಡೋಸ್ ಲಸಿಕೆ ಪಡೆದಿತ್ತು. ನಾವು 74,26,164 ಡೋಸ್ ಲಸಿಕೆಗಳನ್ನು ವಿತರಣೆ ಮಾಡಿದ್ದಾರೆ. ಪ್ರತಿಯೊಂದು ವಯಲ್​ನಲ್ಲಿ ಲಸಿಕೆ ವ್ಯರ್ಥವಾಗದಂತೆ ನಾವು ನೋಡಿಕೊಂಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ದಾದಿಯರಿಗೆ ಶ್ಲಾಘನೆಗಳು ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.


ಲಸಿಕೆ ಸಂಗ್ರಹವು ವೇಗವಾಗಿ ಕ್ಷೀಣಿಸುತ್ತಿರುವುದರಿಂದ ಲಸಿಕೆ ವ್ಯರ್ಥವಾಗುವುದನ್ನು ಕೇಂದ್ರವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಬುಧವಾರ ಬೆಳಿಗ್ಗೆ 8 ಗಂಟೆಯವರೆಗೆ ಮೇಘಾಲಯ, ನಾಗಾಲ್ಯಾಂಡ್, ಬಿಹಾರ, ಪಂಜಾಬ್, ದಾದ್ರಾ ಮತ್ತು ನಗರ ಹವೇಲಿ, ಹರಿಯಾಣ, ಮಣಿಪುರ, ಅಸ್ಸಾಂ, ತಮಿಳುನಾಡು, ಲಕ್ಷದ್ವೀಪ ಶೇ 4.01 ರಿಂದ ಶೇ 9.76 ರವರೆಗೆ ವ್ಯರ್ಥವಾಗಿದೆ ಎಂದು ವರದಿ ಮಾಡಿದೆ. ಕೇರಳದಲ್ಲಿ ಕಡಿಮೆ ಲಸಿಕೆ ವ್ಯರ್ಥ ಶೇಕಡಾವಾರು ಇದೆ.


ಈ ಹಿಂದೆ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಲಸಿಕೆಗಳನ್ನು ವ್ಯರ್ಥವಾಗದಂತೆ ಮತ್ತು ಲಸಿಕೆಗಳು ಬಂದಾಗ ಬಳಸುವಂತೆ ಸಲಹೆ ನೀಡಿದ್ದರು. ಲಸಿಕೆ ಪಡೆಯಲು ಹಿಂಜರಿಯುವಿಕೆಯು ಲಸಿಕೆ ವ್ಯರ್ಥವಾಗುವುದಕ್ಕೆ ಒಂದು ಕಾರಣವಾಗಿದೆ. ಒಂದು ಬಾಟಲಿಯನ್ನು ತೆರೆದರೆ ಮತ್ತು ಸಾಕಷ್ಟು ಫಲಾನುಭವಿಗಳು ಬರದೇ ಇದ್ದರೆ ಅದು ವ್ಯರ್ಥವಾಗಬಹುದು.

ಬುಧವಾರ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಇನ್ನೂ ಲಭ್ಯವಿರುವ ಲಸಿಕೆ ಡೋಸ್​ಗಳ ರಾಜ್ಯವಾರು ರೂಪರೇಖೆಯನ್ನು ನೀಡಿತು. ಪ್ರಸ್ತುತ ರಾಜ್ಯಗಳೊಂದಿಗೆ 94.47 ಲಕ್ಷಕ್ಕೂ ಹೆಚ್ಚು ಕೊವಿಡ್ -19 ಡೋಸ್ ಲಸಿಕೆ ಇವೆ. ಮುಂದಿನ ಮೂರು ದಿನಗಳಲ್ಲಿ 36 ಲಕ್ಷ ಡೋಸ್ ಅವುಗಳನ್ನು ತಲುಪಲಿವೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ದೇಶದಲ್ಲಿ ಇಲ್ಲಿಯವರೆಗೆ 44 ಲಕ್ಷ ಡೋಸ್ ಲಸಿಕೆ ವ್ಯರ್ಥ; ಅತಿ ಹೆಚ್ಚು ಪೋಲಾಗಿದ್ದು ತಮಿಳುನಾಡಿನಲ್ಲಿ

Shaktikanta Das Speech: ಕೊರೊನಾ ಲಸಿಕೆ ತಯಾರಕರು, ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ನೀಡಲು 50 ಸಾವಿರ ಕೋಟಿ ರೂ.

(PM Narendra Modi retweets Pinarayi Vijayan’s message on reducing vaccine wastage in Kerala)