ಆಳವಾದ ಬಾವಿಗೆ ಬಿದ್ದ ತುಂಟ ಆನೆ ಮರಿಯ ರಕ್ಷಣೆ; ರಕ್ಷಣಾ ಕಾರ್ಯ ಹೇಗಿತ್ತು? ನೋಡಿ

Elephant calf rescued from open well: ಅದರಂತೆ ಬೃಹತ್ ಜೆಸಿಬಿ ಯಂತ್ರವನ್ನು ತಂದು ಬಾವಿಯ ಒಂದು ಮಗ್ಗಲಿಗೆ ಕಾಲುವೆ ಮಾದರಿ ತೋಡಲು ಆರಂಭಿಸಿದ್ದಾರೆ. ಅದೇ ವೇಳೆಗೆ ಮುಂದೆ ಇಂತಹ ಅನಾಹುತಗಳು ಆದಾಗ ರೆಫರೆನ್ಸ್​ಗೆ ಇರಲಿ ಅಂತಾ ವಿಡಿಯೋ ಸಹ ಮಾಡಿಸಿದ್ದಾರೆ ಅರಣ್ಯ ರಕ್ಷಕರು.

ಆಳವಾದ ಬಾವಿಗೆ ಬಿದ್ದ ತುಂಟ ಆನೆ ಮರಿಯ ರಕ್ಷಣೆ; ರಕ್ಷಣಾ ಕಾರ್ಯ ಹೇಗಿತ್ತು? ನೋಡಿ
ಆಳವಾದ ಬಾವಿಗೆ ಬಿದ್ದ ತುಂಟ ಆನೆ ಮರಿಯ ರಕ್ಷಣೆ; ರಕ್ಷಣಾ ಕಾರ್ಯ ಹೇಗಿತ್ತು? ನೋಡಿ
Follow us
ಸಾಧು ಶ್ರೀನಾಥ್​
|

Updated on:May 05, 2021 | 3:07 PM

ತುಂಟ ಆನೆ ಮರಿಯೊಂದು ಅಪ್ಪ-ಅಮ್ಮನ ಹಿಂಡಿನಿಂದ ಬೇರ್ಪಟ್ಟು ಅದು ಹೇಗೋ ಸೀದಾ ಆಳವಾದ ಬಾವಿಗೆ ಬಿದ್ದುಬಿಟ್ಟಿದೆ. ಅದು ಹೇಗೋ ಮಾನವೀಯತೆಯ ಜನರ ಕಣ್ಣಿಗೆ ಬಿದ್ದಿದೆ. ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅದೇನು ಅಷ್ಟು ಸುಲಭದ ಕೆಲಸವಾ? ರಕ್ಷಣಾ ಕಾರ್ಯ ಹೇಗಿತ್ತು? ನೀವೂ ನೋಡಿ..

ಅದು ಜಾರ್ಖಂಡ್​ನ ಗ್ರಾಮ. ಆ ಗ್ರಾಮದಲ್ಲೊಂದು ತೆರೆದ ವಿಶಾಲವಾದ ಆಳವಾದ ಬಾವಿ. ವಾರದ ಹಿಂದೆ ಆ ಬಾವಿಯೊಳಕ್ಕೆ ಆನೆ ಮರಿಯೊಂದು ಬಂದು ಬಿದ್ದುಬಿಟ್ಟಿದೆ. ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳ ಕಿವಿಗೆ ಸಂಗತಿ ತಿಳಿಸಿದ್ದಾರೆ. ಅಷ್ಟೇ ಅರಣ್ಯಾಧಿಕಾರಿಗಳೋ ಸೀದಾ ಗ್ರಾಮಕ್ಕೆ ಬಂದು ಬಾವಿಯಲ್ಲಿ ಬಗ್ಗಿ ನೋಡಿದ್ದಾರೆ. ಆಗಲೇ ಅವರಿಗೆ ಅನ್ನಿಸಿದ್ದು.. ಅದು ಬಡಪಟ್ಟಿಗೆ ಎಟುಕುವಂಥದ್ದಲ್ಲಾ.. ಸರಿಯಾಗಿ ಯೋಚಿಸಿಯೇ, ಸಾವಕಾಶವಾಗಿ ಆ ಮರಿಯನ್ನು ರಕ್ಷಣೆ ಮಾಡಬೇಕು ಎಂದು. ಅದಕ್ಕಾಗಿ ಬಾವಿ ಕಟ್ಟೆ ಮೇಲೆ ಕುಳಿತು ಯೋಜನೆ ರೂಪಿಸಿದ್ದಾರೆ.

ಅದರಂತೆ ಬೃಹತ್ ಜೆಸಿಬಿ ಯಂತ್ರವನ್ನು ತಂದು ಬಾವಿಯ ಒಂದು ಮಗ್ಗಲಿಗೆ ಕಾಲುವೆ ಮಾದರಿ ತೋಡಲು ಆರಂಭಿಸಿದ್ದಾರೆ. ಅದೇ ವೇಳೆಗೆ ಮುಂದೆ ಇಂತಹ ಅನಾಹುತಗಳು ಆದಾಗ ರೆಫರೆನ್ಸ್​ಗೆ ಇರಲಿ ಅಂತಾ ವಿಡಿಯೋ ಸಹ ಮಾಡಿಸಿದ್ದಾರೆ ಅರಣ್ಯ ರಕ್ಷಕರು.

ಬಾವಿಯ ಒಂದು ಭಾಗಕ್ಕೆ ಕಾಲುವೆ ಮಾದರಿ ತೋಡಿದ್ದು, 8 ಗಂಟೆಗಳ ಕಾರ್ಯಾಚರಣೆ ಮುಗಿದ ಮೇಲೆ ಆನೆ ಮರಿ ತನ್ನಷ್ಟಕ್ಕೆ ತಾನೇ ಮೇಲಕ್ಕೆ ನಡೆದು ಬರಲು ಸಹಾಯ ಮಾಡಿದ್ದಾರೆ. ಮಧ್ಯೆ ಮಧ್ಯೆ ಇದೆಲ್ಲವನ್ನೂ ವಿಡಿಯೋ/ಫೋಟೋಗ್ರಫಿ ಮಾಡಿದ್ದಾರೆ. ಅತ್ತ ಆನೆ ಮರಿ ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಮೇಲಕ್ಕೆ ಬಂದು, ಅತ್ತಿತ್ತ ನೋಡಿ ಆನೆ ನಡೆದಿದ್ದೇ ದಾರಿ ಎನ್ನುತ್ತಾ ಸ್ಥಳದಿಂದ ಪರಾರಿಯಾಗಿದೆ. ಇತ್ತ ಅದೆಲ್ಲ ಫೋಟೋಗಳನ್ನು ಸಾಮಾಝಿಕ ಜಾಲತಾಣದಲ್ಲಿ ಹರಿಯಬಿಟ್ಟು ಹೆಂಗೆ ನಾವು ಆನೆ ಮರೀನಾ ರಕ್ಷಿಸಿಬಿಟ್ಟಿವಿ ಎಂದು ಅರಣ್ಯ ಇಲಾಖೆಯವರು ಗಜಗಾಂಭೀರ್ಯದಿಂದ ಹೇಳಿದ್ದನ್ನು ನೆಟ್ಟಿಗರು ಶಹಭಾಸ್​ ಅನ್ನುತ್ತಾ.. ಷೇರು, ಲೈಕು ಒತ್ತುತ್ತಾ ಜೈ ಜೈ ಅಂದಿದ್ದಾರೆ.

ಇದನ್ನೆಲ್ಲ ವೃತ್ತಿ ಸಹಜವಾಗಿ ಪ್ರಾಣಿ-ಪಕ್ಷಿಗಳು, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್​ ಕಶ್ವಾನ್​ (Parveen Kaswan, IFS) ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಮಧ್ಯೆ ಒಬ್ಬರು ‘ಅದಕ್ಕೇ ನಾನು ಅಪ್ಪ-ಅಮ್ಮನಿಂದ ದೂರವಾಗುವುದಿಲ್ಲ’ ಎಂದು ಷರಾ ಬರೆದಿರುವುದು ಮನೋಜ್ಞವಾಗಿದೆ.  ಎಚ್ಚರಿಕೆಯ ಪಾಠವೂ ಇದೆ ಆ ಒಂದು ಸಾಲಿನಲ್ಲಿ… ಅಲ್ವಾ?

(Elephant calf rescued from open well in Jharkhand village IFS Parveen Kaswan shares story that goes Viral)

ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ

Published On - 3:03 pm, Wed, 5 May 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್