ದಕ್ಷಿಣ ಭಾರತದ ಎನ್ ​440 ಕೆ ಕೊವಿಡ್-19 ರೂಪಾಂತರ ಯಾವುದು? ಇದು 15 ಪಟ್ಟು ಹೆಚ್ಚು ಮಾರಕವೇ?

ಜ್ವರ, ಸ್ನಾಯುಗಳಲ್ಲಿ ನೋವು, ನಿರಂತರವಾಗಿ ಕೆಮ್ಮು, ವಾಸನೆ ಮತ್ತು ರುಚಿ ಇಲ್ಲದಿರುವುದು, ಗಂಟಲು ನೋವು, ತಲೆನೋವು, ಹೊಟ್ಟೆ ಉಬ್ಬರ ಜೊತೆಗೆ ಕೈ ಮತ್ತು ಕಾಲ್ಬೆರಳುಗಳ ಬಣ್ಣಗಳ ಬದಲಾವಣೆ N440K ರೂಪಾಂತರಿ ಕೊರೊನಾ ಲಕ್ಷಣಗಳು.

ದಕ್ಷಿಣ ಭಾರತದ ಎನ್ ​440 ಕೆ ಕೊವಿಡ್-19 ರೂಪಾಂತರ ಯಾವುದು? ಇದು 15 ಪಟ್ಟು ಹೆಚ್ಚು ಮಾರಕವೇ?
ಸಂಗ್ರಹ ಚಿತ್ರ
Follow us
shruti hegde
| Updated By: ರಶ್ಮಿ ಕಲ್ಲಕಟ್ಟ

Updated on:May 05, 2021 | 7:21 PM

ಈಗಾಗಲೇ B.1617 ಎಂದು ಕರೆಯಲ್ಪಡುವ SARS-CoV-2 ನ ಭಾರತೀಯ ರೂಪಾಂತರವು ದೇಶದಲ್ಲಿ ಹೆಚ್ಚು ಪರಿಣಾಮ ಬೀರುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಆಂಧ್ರಪ್ರದೇಶದಲ್ಲಿ ಹೊಸ ರೂಪಾಂತರಿ ಕೊರೊನಾ ಕಂಡು ಬಂದಿದೆ. ಈ ಕುರಿತಂತೆ ಹೈದರಾಬಾದ್​ ಸಂಶೋಧಕರು ತಿಳಿಸಿದ್ದಾರೆ. ಇದು ಹಿಂದಿನದಕ್ಕಿಂತ 15 ಪಟ್ಟು ಹೆಚ್ಚು ಮಾರಕವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಮುಖ್ಯವಾಗಿ N440K ರೂಪಾಂತರಿ ಕೊರೊನಾ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹಾಗೂ ಛತ್ತೀಸ್​ಗಡದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ .

ಸೆಂಟರ್​ ಫಾರ್​ ಸೆಲ್ಯುಲರ್​ ಮತ್ತು ಮಾಲಿಕ್ಯುಲರ್​ ಬಯಾಲಜಿ(ಸಿಸಿಎಂಬಿ) ವಿಜ್ಞಾನಿಗಳು ಹೊಸ ಕೊರೊನಾ ವೈರಸ್​ ರೂಪಾಂತರ N440K ಅನ್ನು ಕಂಡು ಹಿಡಿದಿದ್ದಾರೆ. ಮೊದಲ ಬಾರಿಗೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಈ ವೈರಸ್​ ಕಂಡುಹಿಡಿಯಲಾಗಿದೆ.

ಜಿಲ್ಲಾ ಕೊವಿಡಿ ವಿಶೇಷ ಅಧಿಕಾರಿ ಮತ್ತು ಆಂಧ್ರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ವಿ. ಸುಧಾಕರ್​ ಅವರು ವೈರಸ್​ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ‘ಈ ರೂಪಾಂತರ ಕೊರೊನಾ ವೈರಸ್​ ಹೆಚ್ಚು ವೇಗದಲ್ಲಿ ಹರಡುತ್ತದೆ. ಈ ಕುರಿತಂತೆ ನಾವು ಗಮನ ಹರಿಸಿದ್ದೇವೆ. ಪ್ರಸ್ತುತದಲ್ಲಿ ರೋಗಿಗಳು ಮೂರು ಅಥವಾ ನಾಲ್ಕು ದಿನಗಳಲ್ಲಿಯೇ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ. ಅದಕ್ಕಾಗಿಯೇ ಆಮ್ಲಜನಕ ಹೊಂದಿರುವ ಬೆಡ್​ಗಳ ಮೇಲೆ ಭಾರೀ ಒತ್ತಡವಿದೆ ಎಂದು ಹೇಳಿದ್ದಾರೆ. ಈ ವೈರಸ್​ ಕಡಿಮೆ ಅವಧಿಯಲ್ಲಿ ಬಹುಬೇಗ ಹರಡುವುದರಿಂದಾಗಿ ನಾಲ್ಕರಿಂದ ಐದು ವ್ಯಕ್ತಿಗಳಿಗೆ ಸೋಂಕು ತಗುಲುವಂತೆ ಮಾಡುತ್ತದೆ. ಹೀಗಾಗಿ ಇದು ಹೆಚ್ಚು ಮಾರಕವಾಗಿದೆ ಎಂದು ಸಂಶೋಧನೆ ತಿಳಿಸಿದೆ. ಈ ಕುರಿತಂತೆ ಭಯಭೀತರಾಗುವ ಅವಶ್ಯಕತೆ ಇಲ್ಲ. ಈ ಒತ್ತಡವನ್ನು ಮುಂಬರುವ ದಿನಗಳಲ್ಲಿ ನಿಭಾಯಿಸಲಾಗುತ್ತದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ.

ನಾವು ಹೊಸ ಕೊವಿಡ್ ರೂಪಾಂತರವನ್ನು ನೋಡುತ್ತಿದ್ದೇವೆ. ಇದರ ಲಕ್ಷಣಗಳೆಂದರೆ ಜ್ವರ, ಸ್ನಾಯುಗಳಲ್ಲಿ ನೋವು, ನಿರಂತರವಾಗಿ ಕೆಮ್ಮು, ವಾಸನೆ ಮತ್ತು ರುಚಿ ಇಲ್ಲದಿರುವುದು, ಗಂಟಲು ನೋವು, ತಲೆನೋವು, ಹೊಟ್ಟೆ ಉಬ್ಬರ ಜೊತೆಗೆ ಕೈ ಮತ್ತು ಕಾಲ್ಬೆರಳುಗಳ ಬಣ್ಣಗಳ ಮೂಲಕ ಈ ವೈರಸ್​ ಪತ್ತೆಯಾಗುತ್ತದೆ ಎಂದು ಉಜಾಲಾ ಸಿಗ್ನಸ್ ಗ್ರೂಫ್ ಆಫ್​ ಹಾಸ್ಪಿಟಲ್​ನ ಸ್ಥಾಪಕ ಮತ್ತು ನಿರ್ದೇಶಕ ಡಾ.ಶುಚಿನ್​ ಬಜಾಜ್​ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: 17 ದೇಶಗಳಲ್ಲಿ ಭಾರತದ ಕೊರೊನಾ ರೂಪಾಂತರಿ ವೈರಾಣು ಪತ್ತೆ: ವಿಶ್ವ ಆರೋಗ್ಯಸಂಸ್ಥೆ

Published On - 4:12 pm, Wed, 5 May 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್