124 ಸಿಖ್ ರೆಜಿಮೆಂಟ್ನಲ್ಲಿ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ ಕೇಂದ್ರ ಸಚಿವ ಅನುರಾಗ್ ಠಾಕೂರ್
ಕ್ಯಾಪ್ಟನ್ ಆಗಿ ಹುದ್ದೆ ಅಲಂಕರಿಸಿರುವ ಸಂಸದ ಅನುರಾಗ್ ಠಾಕೂರ್, ಸಂಸತ್ ಸದಸ್ಯನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಅಲ್ಲದೆ ಸೇನೆ ಬಯಸಿದ ಯಾವುದೇ ಕ್ಷಣ ಸೇವೆ ಸಲ್ಲಿಸಲೂ ಸಿದ್ಧ ಎಂದು ತಿಳಿಸಿದ್ದಾರೆ.
ದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ನೂತನ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಸಚಿವ ಮತ್ತು ಸಂಸದರಾಗಿದ್ದಾಗಲೇ ಭೂಸೇನೆಯಲ್ಲಿ ಗೌರವ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ್ದಾರೆ. ಹಿಮಾಚಲ ಪ್ರದೇಶದ ಹಮಿರ್ಪುರ್ ಕ್ಷೇತ್ರದ ಸಂಸದ ಅನುರಾಗ್ ಠಾಕೂರ್ ಅವರು ಇದೀಗ 124 ಸಿಖ್ ರೆಜಿಮೆಂಟ್ನಲ್ಲಿ ಕ್ಯಾಪ್ಟನ್ ಗೌರವಕ್ಕೆ ಪಾತ್ರವಾಗಿದ್ದಾರೆ. 2016ರ ಜೂನ್ನಿಂದಲೇ ಗೌರವ ಲೆಫ್ಟಿನೆಂಟ್ ಹುದ್ದೆ ನಿರ್ವಹಿಸುತ್ತಿದ್ದ ಅವರು ಇದೀಗ ಪದೋನ್ನತಿ ಹೊಂದಿದ್ದಾರೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ‘ಲೆಫ್ಟಿನೆಂಟ್ ಪದವಿಯಿಂದ ಕ್ಯಾಪ್ಟನ್ ಹುದ್ದೆಗೆ ಪದೋನ್ನತಿ ಹೊಂದುತ್ತಿರುವುದು ಖುಷಿಯ ಸಂಗತಿ. ಮಾತೃಭೂಮಿಗೆ ಸೇವೆ ಸಲ್ಲಿಸಲು ಸೈನ್ಯದಲ್ಲಿ ಇನ್ನೂ ಹೆಚ್ಚಿನ ಅವಕಾಶ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ದೇಶದ ಕುರಿತು ನನ್ನ ಅಭಿಮಾನ ಮತ್ತು ಸೇವಾ ಮನೋಭಾವವನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.
ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಬಹು ಹಿಂದಿನಿಂದಲೂ ಸೇನೆಗೆ ಸೇರಿ ಸೇವೆ ಸಲ್ಲಿಸುವ ಪದ್ಧತಿಯಿದೆ. ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಈ ಪದ್ಧತಿಯನ್ನು ನಾನು ಮುಂದುವರೆಸಿಕೊಂಡು ಹೋಗಬಯಸುತ್ತೇನೆ. ಈ ಅವಕಾಶ ನನಗೆ ದೊರೆತಿರುವುದು ಸಹಜವಾಗಿ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
I was commissioned as a regular officer into the Territorial Army in July 2016 as a Lieutenant.
Today I am honoured to share, I have been promoted to the rank of Captain.
I reaffirm my commitment for serving the people and the call of duty towards mother India ??.
जय हिन्द | pic.twitter.com/pfaNPASMqT
— Anurag Thakur (@ianuragthakur) March 10, 2021
ಈಗಾಗಲೇ ಕ್ಯಾಪ್ಟನ್ ಆಗಿ ಹುದ್ದೆ ಅಲಂಕರಿಸಿರುವ ಸಂಸದ ಅನುರಾಗ್ ಠಾಕೂರ್, ಸಂಸತ್ ಸದಸ್ಯನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಅಲ್ಲದೆ ಸೇನೆ ಬಯಸಿದಾಗ ಯಾವುದೇ ಕ್ಷಣ ಸೇವೆ ಸಲ್ಲಿಸಲೂ ಸಿದ್ಧ ಎಂದು ತಿಳಿಸಿದ್ದಾರೆ.
Congratulations Captain Anurag Thakur on your promotion. @ianuragthakur ji pic.twitter.com/BMZH76qEZ5
— Dushyant Kumar Gautam (@dushyanttgautam) March 10, 2021
श्री @ianuragthakur के जीवन का प्रत्येक क्षण राष्ट्र को समर्पित है। मंत्री के रूप में तो वे देश की सेवा कर ही रहे हैं Territorial Army (TA) के अधिकारी के तौर पर भी वे अपने कर्तव्यों के प्रति पूर्ण समर्पित हैं। TA में Captain के पद पर promote होने पर उनको शुभकामनाएं। pic.twitter.com/PFsNWYVOT6
— Om Birla (@ombirlakota) March 10, 2021
ಇದನ್ನೂ ಓದಿ: Explainer | Arjun Mark 1A Tank: ಭೂಸೇನೆಗೆ ಅರ್ಜುನ್ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?
Parliament: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ನಿಂದ ಬಡವರ ಬದುಕು ಸುಧಾರಣೆ: ಅನುರಾಗ್ ಠಾಕೂರ್