Central Vigilance Commission: ತಮಿಳುನಾಡಿನ ಇಬ್ಬರು ಮಾಜಿ ಸಚಿವರುಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ

ಇಬ್ಬರು ಮಾಜಿ ಸಚಿವರಾದ ಎಸ್ಪಿ ವೇಲು ಮಣಿ ಮತ್ತು ಸಿ ವಿಜಯಭಾಸ್ಕರ್ ಅವರ ಹಲವು ಆಸ್ತಿಗಳ ಮೇಲೆ ತಮ್ಮ ಇಲಾಖೆಗಳಲ್ಲಿ ಹಿಂದಿನ ಅಕ್ರಮಗಳಿಗಾಗಿ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಯುತ್ತಿವೆ.

Central Vigilance Commission: ತಮಿಳುನಾಡಿನ ಇಬ್ಬರು ಮಾಜಿ ಸಚಿವರುಗಳ ಮೇಲೆ ಕೇಂದ್ರ ವಿಚಕ್ಷಣ ಆಯೋಗ ದಾಳಿ
Central Vigilance Commission
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2022 | 10:41 AM

ಚೆನ್ನೈ : ತಮಿಳುನಾಡಿನ ಇಬ್ಬರು ಮಾಜಿ ಸಚಿವರಾದ ಎಸ್ಪಿ ವೇಲು ಮಣಿ ಮತ್ತು ಸಿ ವಿಜಯಭಾಸ್ಕರ್ ಅವರ ಹಲವು ಆಸ್ತಿಗಳ ಮೇಲೆ ತಮ್ಮ ಇಲಾಖೆಗಳಲ್ಲಿ ಹಿಂದಿನ ಅಕ್ರಮಗಳಿಗಾಗಿ ಕೇಂದ್ರ ವಿಚಕ್ಷಣ ಆಯೋಗ ದಾಳಿ ನಡೆಯುತ್ತಿವೆ.ತಮ್ಮ ಮುಚ್ಚಿದ ಕಂಪನಿಗಳಿಗೆ ಟೆಂಡರ್ ನೀಡಲು ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ವಿಚಕ್ಷಣ ಆಯೋಗ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ತಮಿಳುನಾಡು ಮಾಜಿ ಸಚಿವ ಪ್ರಸ್ತುತ ರಾಜ್ಯ ವಿಧಾನಸಭೆಯ ಸದಸ್ಯ ಎಸ್ಪಿ ವೇಲು ಮಣಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಎಸ್ಪಿ ವೇಲು ಮಣಿ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.

ಅವರು ನಷ್ಟದಲ್ಲಿರುವ ಕಂಪನಿಗಳಿಗೆ ಟೆಂಡರ್ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 500 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೇಂದ್ರ ವಿಚಕ್ಷಣ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. 2015 ಮತ್ತು 2018 ರ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಬೀದಿ ದೀಪಗಳನ್ನು ಲೆಡ್ ಲೈಟ್‌ಗಳೊಂದಿಗೆ ಬದಲಾಯಿಸಲು ಟೆಂಡರ್‌ಗಳನ್ನು ನೀಡಲಾಗಿದೆ.

ಚೆನ್ನೈನಲ್ಲಿ 10, ಕೊಯಮತ್ತೂರಿನ 9 ಮತ್ತು ತಾಂಬರಂ, ಅವಡಿ, ತಿರುಚ್ಚಿ ಸೇರಿದಂತೆ 7 ಸ್ಥಳಗಳು ಸೇರಿದಂತೆ 26 ಸ್ಥಳಗಳಲ್ಲಿ ನಡೆಸಿದ ಕಾರ್ಯಚರಣೆಯ ಆಧಾರದ ಮೇಲೆ ದಾಳಿಯನ್ನು ನಡೆಸಿದೆ ಎಂದು ಚೆಂಗಲ್ಪಟ್ಟು DVAC ಅಧಿಕೃತ ಹೇಳಿಕೆ ತಿಳಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ವೆಲ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ 2020 ರಲ್ಲಿ ಅಗತ್ಯ ಪ್ರಮಾಣಪತ್ರವನ್ನು ನೀಡುವಲ್ಲಿ ಅಕ್ರಮಗಳ ಪ್ರಕರಣದಲ್ಲಿ ರಾಜ್ಯದ ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಆ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಐದು, ಸೇಲಂನಲ್ಲಿ ಮೂರು ಮತ್ತು ಮಧುರೈ, ಥೇಣಿ, ಪುದುಕೊಟ್ಟೈ, ತಿರುವಳ್ಳೂರು ಮತ್ತು ತಾಂಬರಂ ಸೇರಿದಂತೆ 13 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಅಲ್ಲದೆ, ವೆಲ್ಸ್ ಗ್ರೂಪ್ ಅಧ್ಯಕ್ಷ ಇಶಾರಿ ಗಣೇಶ್, ವೆಲ್ಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೃಷ್ಣರಾಜ್, ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ.ಬಾಲಾಜಿನಾಥನ್ ಅವರ ಆವರಣದ ಮೇಲೆ ದಾಳಿ ನಡೆಸಲಾಗುತ್ತಿದೆ.

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್