Mobile Battery Blast: ಬರೇಲಿಯಲ್ಲಿ ಮೊಬೈಲ್ ಬ್ಯಾಟರಿ ಸ್ಫೋಟ: 8 ತಿಂಗಳ ಮಗುವಿನ ದುರ್ಮರಣ

ಮೊಬೈಲ್ ಚಾರ್ಜಿಂಗ್​ನಲ್ಲಿರುವಾಗ ಫೋನಿನ ಬ್ಯಾಟರಿ ಸ್ಫೋಟಗೊಂಡಿದ್ದು, ಅಲ್ಲೇ ಇದ್ದ ಎಂಟು ತಿಂಗಳು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

Mobile Battery Blast: ಬರೇಲಿಯಲ್ಲಿ ಮೊಬೈಲ್ ಬ್ಯಾಟರಿ ಸ್ಫೋಟ: 8 ತಿಂಗಳ ಮಗುವಿನ ದುರ್ಮರಣ
Baby
Follow us
TV9 Web
| Updated By: ನಯನಾ ರಾಜೀವ್

Updated on: Sep 13, 2022 | 11:16 AM

ಮೊಬೈಲ್ ಚಾರ್ಜಿಂಗ್​ನಲ್ಲಿರುವಾಗ ಫೋನಿನ ಬ್ಯಾಟರಿ ಸ್ಫೋಟಗೊಂಡಿದ್ದು, ಅಲ್ಲೇ ಇದ್ದ ಎಂಟು ತಿಂಗಳು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಫೋನ್ ಅನ್ನು ಕೇವಲ ಆರು ತಿಂಗಳ ಹಿಂದಷ್ಟೇ ಖರೀದಿಸಲಾಗಿದೆ. ಈಗಾಗಲೇ ಬ್ಯಾಟರಿ ಊದಿಕೊಂಡಿರುವುದು ಗಮನಕ್ಕೆ ಬಂದಿತ್ತು, ಆದರೂ ಅದನ್ನು ಚಾರ್ಜಿಂಗ್​ಗೆ ಇಡಲಾಗಿತ್ತು.

ಪೊಲೀಸ್ ಅಧಿಕಾರಿಗಳ ಪ್ರಕಾರ, ಸ್ಫೋಟದ ಸಮಯದಲ್ಲಿ ಮಗುವಿನ ತಾಯಿ ಕುಸುಮ್ ಕಶ್ಯಪ್ ಕೋಣೆಯಲ್ಲಿ ಇರಲಿಲ್ಲ. ದೊಡ್ಡ ಶಬ್ದ ಕೇಳಿದ ನಂತರ ಅವರು ಅಲ್ಲಿ ಓಡಿಬಂದರು ಮತ್ತು ತನ್ನ ಇನ್ನೊಬ್ಬ ಮಗಳು ನಂದಿನಿಯ ಸಹಾಯಕ್ಕಾಗಿ ಕೂಗಿದಳು. ಮಗುವಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

‘ಪೋಷಕರ ನಿರ್ಲಕ್ಷ್ಯ’ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಆದರೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ತಂದೆ ಸುನೀಲ್ ಕುಮಾರ್ ಕಶ್ಯಪ್, 30, ಕಾರ್ಮಿಕನಾಗಿದ್ದು, ವಿದ್ಯುತ್ ಸಂಪರ್ಕವಿಲ್ಲದೆ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಅವರ ಕುಟುಂಬವು ಸೋಲಾರ್ ಪ್ಲೇಟ್ ಅನ್ನು ಬ್ಯಾಟರಿಗೆ ಹಾಗೂ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಬಳಸುತ್ತದೆ. ಗೃಹಿಣಿಯಾಗಿರುವ ಪತ್ನಿ ಕುಸುಮ ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಸುನೀಲ್ ಕೆಲಸಕ್ಕೆ ಹೋಗಿದ್ದರು.

ಊಟದ ನಂತರ, ಕುಸುಮ್ ತನ್ನ ಹೆಣ್ಣು ಮಕ್ಕಳನ್ನು ಪ್ರತ್ಯೇಕ ಕಡೆ ಮಲಗಿಸಿದ್ದರು, ಚಿಕ್ಕ ಮಗು ಮಲಗಿರುವ ಪಕ್ಕದಲ್ಲಿ ಫೋನ್ ಚಾರ್ಜಿಗ್​ ಹಾಕಲಾಗಿತ್ತು.

ನನ್ನ ಮೊಬೈಲ್ ಫೋನ್ ನನ್ನ ಮಗಳಿಗೆ ಮಾರಕವಾಗಬಹುದು ಎಂದು ನಾನು ಎಂದಿಗೂ ಯೋಚಿಸಲಿಲ್ಲ, ಇಲ್ಲದಿದ್ದರೆ ನಾನು ಅದನ್ನು ಅಲ್ಲಿ ಇಡುತ್ತಿರಲಿಲ್ಲ, ಎಂದು ಕಣ್ಣೀರು ಹಾಕಿದ್ದಾರೆ.

ಸುನೀಲ್ ಅವರ ಸಹೋದರ ಅಜಯ್ ಕುಮಾರ್, ಮಾತನಡಿ,ನಾವು ತುಂಬಾ ಬಡವರು, ಇನ್ನೂ ಕೀಪ್ಯಾಡ್ ಫೋನ್‌ಗಳನ್ನು ಬಳಸುತ್ತಿದ್ದೇವೆ. ಯುಎಸ್‌ಬಿ ಕೇಬಲ್ ಬಳಸಿ ಫೋನ್ ಚಾರ್ಜ್ ಆಗುತ್ತಿದೆ ಆದರೆ ಅಡಾಪ್ಟರ್ ಸಂಪರ್ಕಗೊಂಡಿಲ್ಲ, ಅದಕ್ಕಾಗಿಯೇ ಅದು ಸ್ಫೋಟಗೊಂಡಿದೆ.

ಖಾಸಗಿ ಆಸ್ಪತ್ರೆಯಲ್ಲಿ ನೇಹಾಳ ಚಿಕಿತ್ಸೆಗೆ ನನ್ನ ಸಹೋದರನ ಬಳಿ ಹೆಚ್ಚು ಹಣವಿರಲಿಲ್ಲ, ಇಲ್ಲದಿದ್ದರೆ ಆಕೆಯ ಜೀವ ಉಳಿಸಬಹುದಿತ್ತು.

ಫರೀದ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ವೀರ್ ಸಿಂಗ್ ಮಾತನಾಡಿ, ಮೊಬೈಲ್ ಸ್ಫೋಟದಿಂದ ಮಗು ಗಾಯಗೊಂಡಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್