Aadhaar Card ಆಧಾರ್ ಕಾರ್ಡ್ ಫೋಟೊಕಾಪಿ ಹಂಚಿಕೊಳ್ಳಬೇಡಿ ಎಂಬ ಯುಐಡಿಎಐ ಎಚ್ಚರಿಕೆ ವಾಪಸ್ ಪಡೆದ ಕೇಂದ್ರ ಸರ್ಕಾರ

ಪತ್ರಿಕಾ ಪ್ರಕಟಣೆ ಬಗ್ಗೆ ತಪ್ಪಾದ ವ್ಯಾಖ್ಯಾನಕ್ಕೆ ಸಾಧ್ಯತೆ ಇರುವ ಕಾರಣ ತಕ್ಷಣವೇ ಅದನ್ನು  ಹಿಂತೆಗೆದುಕೊಳ್ಳಲಾಗುತ್ತದೆ. ಆಧಾರ್ ಗುರುತಿನ ದೃಢೀಕರಣ ವ್ಯವಸ್ಥೆಯು ಆಧಾರ್ ಹೊಂದಿರುವವರ ಗುರುತು ಮತ್ತು ಗೌಪ್ಯತೆಯನ್ನು ರಕ್ಷಿಸಲು...

Aadhaar Card ಆಧಾರ್ ಕಾರ್ಡ್ ಫೋಟೊಕಾಪಿ ಹಂಚಿಕೊಳ್ಳಬೇಡಿ ಎಂಬ ಯುಐಡಿಎಐ ಎಚ್ಚರಿಕೆ ವಾಪಸ್ ಪಡೆದ ಕೇಂದ್ರ ಸರ್ಕಾರ
ಆಧಾರ್
Updated By: ರಶ್ಮಿ ಕಲ್ಲಕಟ್ಟ

Updated on: May 29, 2022 | 7:01 PM

ದೆಹಲಿ: ಜನರು ತಮ್ಮ ಆಧಾರ್ ಕಾರ್ಡ್‌ನ (Aadhaar card) ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ. ಅದು ದುರುಪಯೋಗಕ್ಕೊಳಗಾಗಬಹುದು ಎಂದು ಮೇ 27 ರಂದು ಯುಐಡಿಎಐ (UIDAI) ಹೊರಡಿಸಿದ ಪತ್ರಿಕಾ ಪ್ರಕಟಣೆ ಬಗ್ಗೆ ಕೇಂದ್ರ ಸರ್ಕಾರ  ಸ್ಪಷ್ಟೀಕರಣವನ್ನು ನೀಡಿದೆ.  “ಇದು ಬೆಂಗಳೂರು ಪ್ರಾದೇಶಿಕ ಕಚೇರಿ, UIDAI ನಿಂದ 27 ಮೇ 2022 ರ ಪತ್ರಿಕಾ ಪ್ರಕಟಣೆ ಬಗ್ಗೆ ಸ್ಪಷ್ಟನೆ. ದುರುಪಯೋಗಕ್ಕೊಳಗಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಫೋಟೊಕಾಪಿ  ಪ್ರತಿಗಳನ್ನು ಹಂಚಿಕೊಳ್ಳಬೇಡಿ ಎಂದು ಈ ಸೂಚನೆ ನೀಡಲಾಗಿದೆ. ಹಾಗಾಗಿಯೇ ಜನರು ತಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಎಂದು ಪ್ರಕಟಣೆಯು ಸಲಹೆ ನೀಡಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಭಾನುವಾರ ಸ್ಪಷ್ಟನೆ ನೀಡಿದೆ.  ಆದಾಗ್ಯೂ ಪತ್ರಿಕಾ ಪ್ರಕಟಣೆ ಬಗ್ಗೆ ತಪ್ಪಾದ ವ್ಯಾಖ್ಯಾನಕ್ಕೆ ಸಾಧ್ಯತೆ ಇರುವ ಕಾರಣ ತಕ್ಷಣವೇ ಅದನ್ನು  ಹಿಂತೆಗೆದುಕೊಳ್ಳಲಾಗುತ್ತದೆ. ಆಧಾರ್ ಗುರುತಿನ ದೃಢೀಕರಣ ವ್ಯವಸ್ಥೆಯು ಆಧಾರ್ ಹೊಂದಿರುವವರ ಗುರುತು ಮತ್ತು ಗೌಪ್ಯತೆಯನ್ನು ರಕ್ಷಿಸಲು  ಸಾಕಷ್ಟು ವೈಶಿಷ್ಟ್ಯಗಳನ್ನು ಒದಗಿಸಿದೆ ಎಂದು ಸಚಿವಾಲಯ  ಹೇಳಿದೆ.

ಹಿಂದಿನ ಪತ್ರಿಕಾ ಪ್ರಕಟಣೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವಾಲಯ, ಆಧಾರ್ ಕಾರ್ಡ್‌ದಾರರು ತಮ್ಮ 12-ಅಂಕಿಯ ಐಡಿ ಸಂಖ್ಯೆಗಳನ್ನು ಬಳಸುವಾಗ ಮತ್ತು ಹಂಚಿಕೊಳ್ಳುವಲ್ಲಿ ಸಾಮಾನ್ಯ ವಿವೇಕವನ್ನು ಬಳಸಿ ಎಂದು ಹೇಳಿದೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಪ್ರಕಟಣೆಯು ಆಧಾರ್  ಕಾರ್ಡುದಾರರಿಗೆ ಮಾಸ್ಕ್ ಮಾಡಿದ ಆಧಾರ್ ಕಾರ್ಡ್ ಅನ್ನು ಮಾತ್ರ ಬಳಸಲು ಕೇಳಿದೆ. ಮಾಸ್ಕ್ ಮಾಡಿದ ಕಾರ್ಡ್ ಬಳಕೆದಾರರ ಐಡಿಯ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ಪ್ರದರ್ಶಿಸುತ್ತದೆ. ಇ-ಆಧಾರ್ ಡೌನ್‌ಲೋಡ್ ಮಾಡಲು ಇಂಟರ್ನೆಟ್ ಕೆಫೆಗಳು ಅಥವಾ ಕಿಯೋಸ್ಕ್‌ಗಳಲ್ಲಿ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸಬೇಡಿ ಎಂದು ಪ್ರಕಟಣೆಯಲ್ಲಿ ಸಲಹೆ ನೀಡಿದೆ.

ಇದನ್ನೂ ಓದಿ
PM Kisan Samman Yojana: ಮೇ 31ರಂದು ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಬಿಡುಗಡೆ; ಇಕೆವೈಸಿ ಮಾಡುವುದು ಹೇಗೆ?
ಜಮ್ಮುವಿನ ಹೀರಾನಗರ ಸೆಕ್ಟರ್‌ನಲ್ಲಿ ಸ್ಫೋಟಕ ಹೊಂದಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
7 ಗಂಟೆಯ ನಂತರ ಮಹಿಳೆಯರಿಗೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ: ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ
Aadhaar Card: ಸಿಕ್ಕಸಿಕ್ಕಲ್ಲಿ ಆಧಾರ್​ ಕಾರ್ಡ್​ ಹಂಚಿಕೊಳ್ಳುವುದರಿಂದ ಹಲವು ಅಪಾಯ; ಕೇಂದ್ರ ಸರ್ಕಾರದ ಎಚ್ಚರಿಕೆ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:45 pm, Sun, 29 May 22