Aadhaar Card: ಸಿಕ್ಕಸಿಕ್ಕಲ್ಲಿ ಆಧಾರ್​ ಕಾರ್ಡ್​ ಹಂಚಿಕೊಳ್ಳುವುದರಿಂದ ಹಲವು ಅಪಾಯ; ಕೇಂದ್ರ ಸರ್ಕಾರದ ಎಚ್ಚರಿಕೆ

Masked Aadhaar: ಆಧಾರ್​ ಕಾರ್ಡ್​​ನ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರವು ಎಚ್ಚರಿಸಿದೆ.

Aadhaar Card: ಸಿಕ್ಕಸಿಕ್ಕಲ್ಲಿ ಆಧಾರ್​ ಕಾರ್ಡ್​ ಹಂಚಿಕೊಳ್ಳುವುದರಿಂದ ಹಲವು ಅಪಾಯ; ಕೇಂದ್ರ ಸರ್ಕಾರದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 29, 2022 | 12:43 PM

ದೆಹಲಿ: ಆಧಾರ್ ಕಾರ್ಡ್​ಗಳ ಜೆರಾಕ್ಸ್​ ಪ್ರತಿಗಳನ್ನು ಸಿಕ್ಕಸಿಕ್ಕಲ್ಲಿ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರವು ಸಾರ್ವಜನಿಕರನ್ನು ಎಚ್ಚರಿಸಿದೆ. ಆಧಾರ್​ ಕಾರ್ಡ್​​ನ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿಶಿಷ್ಟ ಗುರುತು ಪ್ರಾಧಿಕಾರ ದಿಂದ (Unique Identification Authority of India – UIDAI) ಅನುಮತಿ ಪಡೆದ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ವ್ಯಕ್ತಿಯ ಗುರುತು ಪತ್ತೆಗೆ ಬಳಸಿಕೊಳ್ಳಬಹುದು. ಆದರೆ ಹೊಟೆಲ್ ಅಥವಾ ಚಿತ್ರಮಂದಿರಗಳಿಗೆ ಸಾರ್ಜಜನಿಕರಿಂದ ಆಧಾರ್ ಮಾಹಿತಿಯ ಜೆರಾಕ್ಸ್​ ಪ್ರತಿಗಳನ್ನು ಸಂಗ್ರಹಿಸಲು ಅನುಮತಿ ನೀಡಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.

‘ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಸಂಸ್ಥೆಯು ಆಧಾರ್ ಕಾರ್ಡ್​ ಪರಿಶೀಲಿಸುವಂತಿಲ್ಲ. ಯಾವುದೇ ವ್ಯಕ್ತಿಯ ಆಧಾರ್ ಕಾರ್ಡ್ ತೋರಿಸುವಂತೆ ಕೋರುವಂತಿಲ್ಲ. ಆಧಾರ್ ಕಾಯ್ದೆ 2016ರ ಅನ್ವಯ ಇದು ಅಪರಾಧವಾಗುತ್ತದೆ. ಖಾಸಗಿ ಸಂಸ್ಥೆ ಅಥವಾ ಯಾವುದೇ ವ್ಯಕ್ತಿಯು ನಿಮ್ಮ ಆಧಾರ್​ ಕಾರ್ಡ್​ನ ನಕಲು ಪ್ರತಿ ಕೇಳಿದರೆ ಅವರು ವಿಶಿಷ್ಟ ಗುರುತು ಪ್ರಾಧಿಕಾರದ ಅನುಮತಿ ಪಡೆದಿದ್ದಾರೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದೆ.

ಆಧಾರ್ ಕಾರ್ಡ್​ನ ಫೋಟೊಕಾಪಿಗಳನ್ನು ಹಂಚಿಕೊಳ್ಳುವ ಬದಲು ಕೇವಲ ಮರೆಮಾಚಿದ ಗುರುತಿನ (Masked Aadhaar Card) ಡೌನ್​ಲೋಡ್ ಮಾಡಿಟ್ಟುಕೊಳ್ಳಬಹುದು. ಇದರಲ್ಲಿ ಆಧಾರ್​ನ ಕೊನೆಯ ನಾಲ್ಕು ಸಂಖ್ಯೆಗಳು ಮಾತ್ರವೇ ಕಾಣಿಸುತ್ತವೆ. ವಿಶಿಷ್ಟು ಗುರುತು ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಮಾಸ್ಕ್​ ಆಧಾರ್ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ.

ಇ-ಆಧಾರ್ ಡೌನ್​ಲೋಡ್ ಮಾಡಿಕೊಳ್ಳಲು ಸಾರ್ವಜನಿಕ ಸ್ಥಳದ ಕಂಪ್ಯೂಟರ್, ಇಂಟರ್ನೆಟ್ ಕೆಫೆ, ಕಿಯಾಸ್ಕ್ ಬಳಸುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಒಂದು ವೇಳೆ ಯಾವುದೇ ಕಂಟ್ಯೂಟರ್​ನಲ್ಲಿ ಇ-ಆಧಾರ್ ಡೌನ್​ಲೋಡ್ ಮಾಡಿದ್ದರೆ, ಅದನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದೀರಿ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯು ಎಚ್ಚರಿಸಿದೆ.

ಮಾಸ್ಕ್​ಡ್ ಆಧಾರ್ ಕಾರ್ಡ್ ಎಂದರೇನು? ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆ?

ಮಾಸ್ಕ್​ಡ್ ಆಧಾರ್ ಕಾರ್ಡ್​ನಲ್ಲಿ ಆಧಾರ್​ನ ಎಲ್ಲಾ 12 ಅಂಕಿಗಳು ಕಾಣಿಸುವುದಿಲ್ಲ. ಅದರ ಬದಲಿಗೆ ಕೇವಲ 4 ಅಂಕಿಗಳು ಮಾತ್ರವೇ ಕಾಣುತ್ತಿರುತ್ತವೆ. ಮಾಸ್ಕ್​ಡ್ ಆಧಾರ್ ಕಾರ್ಡ್​ನ ಪ್ರತಿಯನ್ನು ವಿಶಿಷ್ಟ ಗುರುತು ಪ್ರಾಧಿಕಾರದ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.

ಮಾಸ್ಕ್​ಡ್ ಆಧಾರ್ ಡೌನ್​ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ…

1) https://myaadhaar.uidai.gov.in/ ವೆಬ್​ಸೈಟ್​ಗೆ ಹೋಗಿ 2) ಆಧಾರ್ ಕಾರ್ಡ್​ ಸಂಖ್ಯೆ ನಮೂದಿಸಿ 3) ‘Do you want a masked Aadhaar’ ಮಾಸ್ಕ್​ಡ್ ಆಧಾರ್​ ಡೌನ್​ಲೋಡ್ ಮಾಡಿಕೊಳ್ಳುವ ಆಯ್ಕೆ ಕ್ಲಿಕ್ ಮಾಡಿ 4) ಡೌನ್​ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಆಧಾರ್​ ಕಾರ್ಡ್​ನ ಕೊನೆಯ ನಾಲ್ಕು ಅಂಕಿಗಳಿರುವ ಪ್ರತಿಯೊಂದನ್ನು ಪಡೆಯಿರಿ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Sun, 29 May 22