ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆ ಆದೇಶದ ಮರುಪರಿಶೀಲನೆ ಕೋರಿ ಸುಪ್ರೀಂ ಮೊರೆ ಹೋದ ಕೇಂದ್ರ

| Updated By: ರಮೇಶ್ ಬಿ. ಜವಳಗೇರಾ

Updated on: Nov 17, 2022 | 10:19 PM

Rajiv Gandhi assassination case ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡುವ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳ ಬಿಡುಗಡೆ ಆದೇಶದ ಮರುಪರಿಶೀಲನೆ ಕೋರಿ ಸುಪ್ರೀಂ ಮೊರೆ ಹೋದ ಕೇಂದ್ರ
ಸುಪ್ರೀಂ ಕೋರ್ಟ್
Follow us on

ರಾಜೀವ್ ಗಾಂಧಿ ಹತ್ಯೆ ಪ್ರಕರಣದ (Rajiv Gandhi assassination case) ಎಲ್ಲಾ ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡುವ ನವೆಂಬರ್ 11 ರ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ (Supreme Court)ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ತಮಿಳುನಾಡಿನಲ್ಲಿ ಒಬ್ಬ ಮಹಿಳೆ ಸೇರಿದಂತೆ ಆರು ಜನರು ಜೈಲಿನಿಂದ ಬಿಡುಗಡೆಯಾದ ಕೆಲವು ದಿನಗಳ ನಂತರ, ಕೇಂದ್ರ ಸುಪ್ರೀಂ ಮೊರೆ ಹೋಗಿದೆ.ಅಪರಾಧಿಗಳ ಬಿಡುಗಡೆಯನ್ನು ಸಮರ್ಪಕವಾಗಿ ವಿಚಾರಣೆಗೆ ಒಳಪಡಿಸದೆ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ವಾದಿಸಿದೆ. ಇದು ಸ್ವಾಭಾವಿಕ ನ್ಯಾಯದ ತತ್ವಗಳ ಒಪ್ಪಿಕೊಂಡ ಮತ್ತು ಸ್ಪಷ್ಟವಾದ ಉಲ್ಲಂಘನೆಗೆ ಮತ್ತು ವಾಸ್ತವವಾಗಿ ನ್ಯಾಯಾಲಯದ ವೈಫಲ್ಯತೆಗೆ ಕಾರಣವಾಯಿತು. ಆರು ಅಪರಾಧಿಗಳಲ್ಲಿ ನಾಲ್ವರು ಶ್ರೀಲಂಕಾದವರಾಗಿದ್ದಾರೆ.ಇವರು ದೇಶದ ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಿದ ಭೀಕರ ಅಪರಾಧಕ್ಕಾಗಿ  ಶಿಕ್ಷೆಗೊಳಗಾದವರು ಎಂದು ಸರ್ಕಾರ ಹೇಳಿದೆ. ಅವರಿಗೆ ಕ್ಷಮೆ ನೀಡುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವಾಗತಾರ್ಹವಲ್ಲದ ವಿಷಯವಾಗಿದೆ ಎಂದು ಕೇಂದ್ರ ಹೇಳಿದೆ.

ಮೇ 1991 ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿದ್ದಾಗ ರಾಜೀವ್ ಗಾಂಧಿಯರನ್ನು ಆತ್ಮಹತ್ಯಾ ಬಾಂಬ್ ನಿಂದ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ನ್ಯಾಯಾಲಯವು ತನ್ನ ನಿರ್ಧಾರವನ್ನು ಕೈದಿಗಳ ಉತ್ತಮ ನಡವಳಿಕೆ ಮತ್ತು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇನ್ನೊಬ್ಬ ವ್ಯಕ್ತಿ ಎಜಿ ಪೆರಾರಿವಾಲನ್‌ನ ಬಿಡುಗಡೆಯನ್ನು ಆಧರಿಸಿದೆ ಎಂದು ಹೇಳಿದೆ. ಬಂಧನದ ಸಮಯದಲ್ಲಿ ಆತ 19 ವರ್ಷ ವಯಸ್ಸಿನವನಾಗಿದ್ದು ಮತ್ತು 30 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದ ಎಂದು ನ್ಯಾಯಾಲಯ ಹೇಳಿತ್ತು.

Published On - 8:33 pm, Thu, 17 November 22