Good Governance Index: ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ಈ ರಾಜ್ಯಗಳು ಅಗ್ರಸ್ಥಾನದಲ್ಲಿ; ಶೇ.9ರಷ್ಟು ಸುಧಾರಣೆ ಕಂಡ ಉತ್ತರಪ್ರದೇಶ

ಉತ್ತರ ಪ್ರದೇಶ ರಾಜ್ಯ ಸಾಮಾಜಿಕ ಕಲ್ಯಾಣ, ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತಾ ಕ್ಷೇತ್ರಗಳಲ್ಲೂ ಕಳೆದ ವರ್ಷಗಳಿಗಿಂತ ಪ್ರಗತಿ ಸಾಧಿಸಿದ್ದು, ಸೂಚ್ಯಂಕದಲ್ಲಿ ಸ್ಪಷ್ಟವಾಗಿದೆ.

Good Governance Index: ಕೇಂದ್ರ ಸರ್ಕಾರದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ಈ ರಾಜ್ಯಗಳು ಅಗ್ರಸ್ಥಾನದಲ್ಲಿ; ಶೇ.9ರಷ್ಟು ಸುಧಾರಣೆ ಕಂಡ ಉತ್ತರಪ್ರದೇಶ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 25, 2021 | 5:36 PM

ಇಂದು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನ. ತನ್ನಿಮಿತ್ತ ಕೇಂದ್ರ ಸರ್ಕಾರ ಉತ್ತಮ ಆಡಳಿತ ದಿನವನ್ನಾಗಿ ಆಚರಿಸುತ್ತದೆ. ಹಾಗೇ, ಈ ಉತ್ತಮ ಆಡಳಿತ ಸೂಚ್ಯಂಕ (Good Governance Index 2020-2021)ವನ್ನು ಇಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಗುಜರಾತ್​, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಹಾಗೇ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ.  2019ರ ಸೂಚ್ಯಂಕದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿತ್ತು.  ಅದರ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಕರ್ನಾಟಕ ಇದ್ದವು. 2020ರ ಅಕ್ಟೋಬರ್​ನಲ್ಲಿ ಬಿಡುಗಡೆಯಾಗಿದ್ದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ಕೇರಳ ಮತ್ತು ಗೋವಾಗಳು ಪ್ರಥಮ ಸ್ಥಾನ ಪಡೆದಿದ್ದವು. ಆದರೆ 2019 ಮತ್ತು 2020 ಎರಡೂ ವರ್ಷಗಳ ಉತ್ತಮ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಉತ್ತರ ಪ್ರದೇಶ ಈ ಬಾರಿ ತನ್ನ ಆಡಳಿತದಲ್ಲಿ ಶೇ.9ರಷ್ಟು ಹೆಚ್ಚು ಉತ್ತಮ ಪ್ರದರ್ಶನ ತೋರಿದೆ. ಅದರಲ್ಲೂ ಉತ್ತಮ ಆಡಳಿತ ಪರಿಗಣನೆ 10 ವಲಯಗಳಲ್ಲಿ ಒಂದಾಗಿರುವ ವಾಣಿಜ್ಯ ಮತ್ತು ಉದ್ಯಮ ಸೆಕ್ಟರ್​ನಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. 

ಇನ್ನು ಉತ್ತರ ಪ್ರದೇಶ ರಾಜ್ಯ ಸಾಮಾಜಿಕ ಕಲ್ಯಾಣ, ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತಾ ಕ್ಷೇತ್ರಗಳಲ್ಲೂ ಕಳೆದ ವರ್ಷಗಳಿಗಿಂತ ಪ್ರಗತಿ ಸಾಧಿಸಿದ್ದು, ಸೂಚ್ಯಂಕದಲ್ಲಿ ಸ್ಪಷ್ಟವಾಗಿದೆ. ಹಾಗೇ, ನಾಗರಿಕ ಕೇಂದ್ರಿತ ಆಡಳಿತ ನಿಯತಾಂಕಗಳಲ್ಲೂ ಒಳ್ಳೆಯ ಅಂಕ ಪಡೆದಿದೆ.  ಜಮ್ಮು-ಕಾಶ್ಮೀರವೂ ಕೂಡ ಉತ್ತಮ ಆಡಳಿತದಲ್ಲಿ ಶೇ.3.7ರಷ್ಟು ಸುಧಾರಣೆ ಕಂಡಿದೆ. ಹಾಗೇ, ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲೂ ಪ್ರಗತಿ ಉತ್ತಮವಾಗಿದೆ. ಒಟ್ಟಾರೆ 20 ರಾಜ್ಯಗಳು ತಮ್ಮ ಉತ್ತಮ ಆಡಳಿತ ಸೂಚ್ಯಂಕದ ಅಂಕಗಳಲ್ಲಿ ಅಭಿವೃದ್ಧಿ ಕಂಡಿವೆ. ಉತ್ತಮ ಆಡಳಿತ ಸೂಚ್ಯಂಕ 2021ರ ಫ್ರೇಮ್​ವರ್ಕ್​ ಸುಮಾರು 10 ವಲಯಗಳು ಮತ್ತು 58 ಸೂಚಕಗಳನ್ನು ಒಳಗೊಂಡಿದೆ. ಇದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ದರ್ಜೆಯನ್ನು ತಿಳಿಯಲು ಸಹಾಯ ಮಾಡುತ್ತದೆ.

ಈ ಬಾರಿ ಗುಜರಾತ್​ ರಾಜ್ಯ ಒಟ್ಟು 10 ಕ್ಷೇತ್ರಗಳಲ್ಲಿ 5ರಲ್ಲಿ ಅತ್ಯುತ್ತಮ ಆಡಳಿತ ತೋರಿದೆ. ಆರ್ಥಿಕ ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಮೂಲಸೌಕರ್ಯ ಮತ್ತು ಬಳಕೆ, ಸಾಮಾಜಿಕ ಕಲ್ಯಾಣ ಹಾಗೂ ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತಾ ಕ್ಷೇತ್ರಗಳಲ್ಲಿ ಗುಜರಾತ್​ ಅಗ್ರಸ್ಥಾನದಲ್ಲಿ ಇದೆ ಎಂದು ಗುಡ್​ ಗವರ್ನನ್ಸ್​ ಇಂಡೆಕ್ಸ್​ ಉಲ್ಲೇಖಿಸಿದೆ. ಮಹಾರಾಷ್ಟ್ರ ಕೃಷಿ ಮತ್ತು ಸಂಬಂಧಿತ ವಲಯಗಳು, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಮೂಲಸೌಕರ್ಯ ಮತ್ತು ಬಳಕೆ, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಆಡಳಿತ ತೋರಿದೆ ಎಂದೂ ಹೇಳಲಾಗಿದೆ. ಇನ್ನು ಗೋವಾ ಕೂಡ, ಕೃಷಿ ಮತ್ತು ಸಂಬಂಧಿತ ಕ್ಷೇತ್ರ, ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರ, ಸಾರ್ವಜನಿಕ ಮೂಲಸೌಕರ್ಯ ಮತ್ತು ಬಳಕೆ, ಆರ್ಥಿಕ ಆಡಳಿತ, ಸಾಮಾಜಿಕ ಅಭಿವೃದ್ಧಿ ಮತ್ತು ಕಲ್ಯಾಣ, ಪರಿಸರ ವಲಯಗಳಲ್ಲಿ ಉತ್ತಮ ಆಡಳಿತ ತೋರಿಸಿದ್ದು ಸೂಚ್ಯಂಕದಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ಗಾಳಿಪಟದ ಹಗ್ಗದೊಂದಿಗೆ ಹಾರಿ ಹೋದ ವ್ಯಕ್ತಿ: ವೀಡಿಯೋ ವೈರಲ್​

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್