ದಂಡ ವಿಧಿಸಿ ಸೆಂಟ್ರಲ್ ವಿಸ್ಟಾ ವಿರುದ್ಧದ ಮನವಿಯನ್ನು ವಜಾಗೊಳಿಸಿ: ಸುಪ್ರೀಂಕೋರ್ಟ್‌ಗೆ ಕೇಂದ್ರ ಒತ್ತಾಯ
Central Vista project ಸಮೀಪದಲ್ಲಿ ಯಾವುದೇ ವಸತಿ ಕಾಲೋನಿಗಳು, ಕಚೇರಿಗಳು ಇಲ್ಲದಿರುವುದರಿಂದ 'ನೆರೆಹೊರೆಯ ಆಟದ ಪ್ರದೇಶ' ಪರಿಣಾಮ ಬೀರುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಸೆಂಟ್ರಲ್ ವಿಸ್ಟಾ ಮಾಸ್ಟರ್ ಪ್ಲಾನ್‌ನಲ್ಲಿ ಲಭ್ಯವಿರುವ ಸಾರ್ವಜನಿಕ ಮನರಂಜನಾ ಪ್ರದೇಶಗಳನ್ನು ಹೆಚ್ಚಿಸಲು ಸರ್ಕಾರವು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಂಡಿದೆ
ದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ( Central Vista project) ವಿರುದ್ಧದ ಅರ್ಜಿಯನ್ನು ವಜಾಗೊಳಿಸುವಂತೆ ಸರ್ಕಾರವು ಸುಪ್ರೀಂಕೋರ್ಟ್‌ಗೆ (Supreme Court) ಒತ್ತಾಯಿಸಿದೆ. ಮನವಿಯನ್ನು “ತಪ್ಪಾಗಿ ಗ್ರಹಿಸಲಾಗಿದೆ” ಎಂದು ಹೇಳಿದ ಕೇಂದ್ರ ದಂಡ ವಿಧಿಸಿ ಅದನ್ನು ವಜಾಗೊಳಿಸಬೇಕು ಎಂದು ಹೇಳಿದೆ. “ಪಬ್ಲಿಕ್ ರಿಕ್ರಿಯೇಷನಲ್ ” ವಲಯದ ಮೇಲೆ ಪರಿಣಾಮ ಬೀರುವ ಆಧಾರದ ಮೇಲೆ ಯೋಜನೆಯನ್ನು ಪ್ರಶ್ನಿಸಿದ ಅರ್ಜಿದಾರರಿಗೆ ಸುಪ್ರೀಂಕೋರ್ಟ್ ನವೆಂಬರ್ 12 ರೊಳಗೆ ಸರ್ಕಾರದ ಅಫಿಡವಿಟ್‌ಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಿದೆ. ನವೆಂಬರ್ 16 ರಂದು ನ್ಯಾಯಾಲಯವು ಮುಂದಿನ ವಿಚಾರಣೆ ನಡೆಸಲಿದೆ. ಈ ಜಾಗವನ್ನು ಕಳೆದ 90 ವರ್ಷಗಳಿಂದ ರಕ್ಷಣಾ ಸಚಿವಾಲಯದ ಕಚೇರಿಗಳಿಗೆ ಬಳಸಲಾಗುತ್ತಿತ್ತು ಮತ್ತು ಸಾರ್ವಜನಿಕರ ‘ಮನರಂಜನಾ ಉದ್ದೇಶಗಳಿಗಾಗಿ’ ಇದು ಎಂದಿಗೂ ತೆರೆದಿರಲಿಲ್ಲ ಎಂದು ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ಸಮೀಪದಲ್ಲಿ ಯಾವುದೇ ವಸತಿ ಕಾಲೋನಿಗಳು, ಕಚೇರಿಗಳು ಇಲ್ಲದಿರುವುದರಿಂದ ‘ನೆರೆಹೊರೆಯ ಆಟದ ಪ್ರದೇಶ’ ಪರಿಣಾಮ ಬೀರುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಸೆಂಟ್ರಲ್ ವಿಸ್ಟಾ ಮಾಸ್ಟರ್ ಪ್ಲಾನ್‌ನಲ್ಲಿ ಲಭ್ಯವಿರುವ ಸಾರ್ವಜನಿಕ ಮನರಂಜನಾ ಪ್ರದೇಶಗಳನ್ನು ಹೆಚ್ಚಿಸಲು ಸರ್ಕಾರವು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದು ಸಾರ್ವಜನಿಕರ ಹೆಚ್ಚಿನ ಪ್ರಯೋಜನಕ್ಕಾಗಿ ಎಂದು ಅದು ಹೇಳಿದೆ.
ಸೋಮವಾರ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರ ದ್ವಿಸದಸ್ಯ ಪೀಠವು ಈ ಅರ್ಜಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಮೂರು ದಿನಗಳ ಕಾಲಾವಕಾಶ ನೀಡಿತ್ತು. ಅಂತಹ ಪ್ರದೇಶವನ್ನು ಯೋಜನೆಯಿಂದ ತೆಗೆದುಹಾಕಿರುವುದೇ? ಅಥವಾ ಹಿಂದಿನ ಮನರಂಜನಾ ಪ್ರದೇಶಗಳನ್ನು ಸ್ಥಳಾಂತರಿಸಬೇಕಿದೆಯೇ? ಎಂದು ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ ನ್ಯಾಯಾಲಯ ಕೇಳಿದೆ.
ಹೊಸ ಸಂಸತ್ ಕಟ್ಟಡ ಮತ್ತು ಉಪರಾಷ್ಟ್ರಪತಿಯ ನಿವಾಸವನ್ನು ಅಲ್ಲಿ ನಿರ್ಮಿಸಲಾಗಿರುವುದರಿಂದ ಅಲ್ಲಿ ಮನರಂಜನಾ ಪ್ರದೇಶವನ್ನು ಹೊಂದಲು ಸಾಧ್ಯವಿಲ್ಲ ಎಂದು ಮೆಹ್ತಾ ಹೇಳಿದ್ದರು. “ನಾನು ಸರ್ಕಾರದಿಂದ ಸೂಚನೆಗಳನ್ನು ಪಡೆಯುತ್ತೇನೆ ಆದರೆ ಸಂಸತ್ತು ಮತ್ತು ಉಪರಾಷ್ಟ್ರಪತಿಗಳ ಮನೆ ಅಲ್ಲಿಗೆ ಬರುತ್ತಿರುವ ಕಾರಣ, ಸುತ್ತಮುತ್ತಲಿನ ಮನರಂಜನಾ ಪ್ರದೇಶವನ್ನು ಹೊಂದಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದರು.
ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯು ದೆಹಲಿಯ ಹೃದಯಭಾಗದಲ್ಲಿ 3.2 ಕಿಮೀ ವಿಸ್ತಾರವನ್ನು ಒಳಗೊಂಡಿರುತ್ತದೆ, ಇದನ್ನು ಸ್ವಾತಂತ್ರ್ಯದ ಮೊದಲು ಬ್ರಿಟಿಷರು ₹ 20,000 ಕೋಟಿ ವೆಚ್ಚದಲ್ಲಿ ವಿನ್ಯಾಸಗೊಳಿಸಿದ್ದರು.
ಸಂಸತ್ ಭವನ ಮತ್ತು ಸಚಿವಾಲಯದ ಕಚೇರಿಗಳು ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ಪುನರ್ ನಿರ್ಮಿಸಲಾಗುವುದು. ಯೋಜನೆಯನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ ಮತ್ತು ವಜಾಗೊಂಡಿವೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ಇದುವರೆಗೆ ನಿಲ್ಲಿಸಿಲ್ಲ. ಇಂದು ಪ್ರಶ್ನಿಸಿರುವ ಅರ್ಜಿಯನ್ನು ಸಾಮಾಜಿಕ ಕಾರ್ಯಕರ್ತ ರಾಜೀವ್ ಸೂರಿ ಅವರು ಸಲ್ಲಿಸಿದ್ದಾರೆ, ಅವರು ಈ ಹಿಂದೆ ಭೂ ಬಳಕೆಯಲ್ಲಿ ಅಕ್ರಮ ಬದಲಾವಣೆ ಮತ್ತು ಪರಿಸರ ಅನುಮತಿ ಇಲ್ಲದಿರುವುದನ್ನು ಉಲ್ಲೇಖಿಸಿ ಯೋಜನೆಯನ್ನು ಮೊದಲು ಪ್ರಶ್ನಿಸಿದ್ದರು.
ಭಾರತವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಮುಂದಿನ ವರ್ಷ ಈ ಯೋಜನೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪುನೀತ್ಗೆ ತೀವ್ರ ಹೃದಯಾಘಾತವಾಗಿದೆ, ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಏನನ್ನೂ ಹೇಳೋಕೆ ಆಗಲ್ಲ; ಆಸ್ಪತ್ರೆ ವೈದ್ಯರು