AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಗತ ಗೆಳೆಯ..ಚಂದ್ರಯಾನ-2 ಆರ್ಬಿಟರ್​​ ಜತೆ ಸಂಪರ್ಕ ಸಾಧಿಸಿದ ಚಂದ್ರಯಾನ-3 ಲ್ಯಾಂಡರ್

ಈ ಬಗ್ಗೆ ಟ್ವೀಟ್ ಮಾಡಿದ ಇಸ್ರೋ, ಚಂದ್ರನ ದೂರದ ಭಾಗದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವ ಲ್ಯಾಂಡರ್ ವಿಕ್ರಮ್‌ಗೆ ಆರ್ಬಿಟರ್ ಸ್ವಾಗತ ಸಂದೇಶವನ್ನು ಕಳುಹಿಸಿದೆ. 'ಸ್ವಾಗತ, ಗೆಳೆಯ' Ch-2 ಆರ್ಬಿಟರ್ ಔಪಚಾರಿಕವಾಗಿ Ch-3 LM ಅನ್ನು ಸ್ವಾಗತಿಸಿತು. ಎರಡರ ನಡುವೆ ದ್ವಿಮುಖ ಸಂವಹನವನ್ನು ಸ್ಥಾಪಿಸಲಾಗಿದೆ. MOX ಈಗ LM ಅನ್ನು ತಲುಪಲು ಹೆಚ್ಚಿನ ಮಾರ್ಗಗಳನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಸ್ವಾಗತ ಗೆಳೆಯ..ಚಂದ್ರಯಾನ-2 ಆರ್ಬಿಟರ್​​ ಜತೆ ಸಂಪರ್ಕ ಸಾಧಿಸಿದ ಚಂದ್ರಯಾನ-3 ಲ್ಯಾಂಡರ್
ಚಂದ್ರಯಾನ -3
Follow us
ರಶ್ಮಿ ಕಲ್ಲಕಟ್ಟ
|

Updated on: Aug 21, 2023 | 6:57 PM

ಬೆಂಗಳೂರು ಆಗಸ್ಟ್ 21: ಚಂದ್ರಯಾನ-3ರ (Chandrayaan-3) ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲು ಕೆಲವೇ ಗಂಟೆ ಬಾಕಿ ಇರುವಾಗ ಇದು ಚಂದ್ರಯಾನ-2 (Chandrayaan-2) ಮಿಷನ್‌ನ ಆರ್ಬಿಟರ್ ಜತೆ ದ್ವಿಮುಖ ಸಂವಹನವನ್ನು ಸ್ಥಾಪಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿದೆ. ಕಳೆದು ಹೋಗಿದ್ದ ಚಂದ್ರಯಾನ-2 ಮಿಷನ್‌ನ  ಪ್ರದಾನ್ ಎಂಬ ಆರ್ಬಿಟರ್, ಪ್ರಸ್ತುತ ಚಂದ್ರನ ಸುತ್ತ 100 ಕಿಮೀ x 100 ಕಿಮೀ ಕಕ್ಷೆಯಲ್ಲಿದೆ. ಈ ಬಗ್ಗೆ ಟ್ವೀಟ್ ಮಾಡಿದ ಇಸ್ರೋ, ಚಂದ್ರನ ದೂರದ ಭಾಗದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವ ಲ್ಯಾಂಡರ್ ವಿಕ್ರಮ್‌ಗೆ ಆರ್ಬಿಟರ್ ಸ್ವಾಗತ ಸಂದೇಶವನ್ನು ಕಳುಹಿಸಿದೆ ಎಂದು ಹೇಳಿದೆ.

‘ಸ್ವಾಗತ, ಗೆಳೆಯ’ Ch-2 ಆರ್ಬಿಟರ್ ಔಪಚಾರಿಕವಾಗಿ Ch-3 LM ಅನ್ನು ಸ್ವಾಗತಿಸಿತು. ಎರಡರ ನಡುವೆ ದ್ವಿಮುಖ ಸಂವಹನವನ್ನು ಸ್ಥಾಪಿಸಲಾಗಿದೆ. MOX ಈಗ LM ಅನ್ನು ತಲುಪಲು ಹೆಚ್ಚಿನ ಮಾರ್ಗಗಳನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಆಗಸ್ಟ್ 23 ರಂದು (ಬುಧವಾರ) ಸಂಜೆ 5.20 ಕ್ಕೆ ಇಳಿಯುವಿಕೆಯ ನೇರ ಪ್ರಸಾರ ಪ್ರಾರಂಭವಾಗಲಿದೆ ಎಂದು ಅದು ತಿಳಿಸಿದೆ. ಲ್ಯಾಂಡಿಂಗ್ ಗೆ ಮುಂಚಿತವಾಗಿ, ವಿಕ್ರಮ್ ಚಂದ್ರನ ಕುಳಿಗಳ ಚಿತ್ರಗಳನ್ನು ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಕ್ಲಿಕ್ ಮಾಡಿ ಕಳುಹಿಸಿದೆ

ಕಳೆದ ಶನಿವಾರ ಸೆರೆಹಿಡಿಯಲಾದ ಚಿತ್ರಗಳು ಹೇನ್, ಬಾಸ್ ಎಲ್, ಮೇರ್ ಹಂಬೋಲ್ಟಿಯಾನಮ್ ಮತ್ತು ಬೆಲ್ಕೊವಿಚ್ ಕುಳಿಗಳನ್ನು ಗುರುತಿಸಿವೆ. ಈ ಚಿತ್ರಗಳನ್ನು ಇಸ್ರೋ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದೆ.

ಇಸ್ರೋ ಮಾಜಿ ಮುಖ್ಯಸ್ಥ ಮತ್ತು ಹಿಂದಿನ ಚಂದ್ರಯಾನ-2 ರ ಉಸ್ತುವಾರಿ ಕೆ ಶಿವನ್ ಸೋಮವಾರ ಈ ಮಿಷನ್ ಅದ್ಭುತ ಯಶಸ್ಸು” ಎಂದು ಹೇಳಿದ್ದಾರೆ. ಇದು ತುಂಬಾ ಆತಂಕದ ಕ್ಷಣವಾಗಿದೆ..ಈ ಬಾರಿ ಅದು ದೊಡ್ಡ ಯಶಸ್ಸನ್ನು ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಶಿವನ್ ಹೇಳಿದ್ದಾರೆ.

ಇದನ್ನೂ ಓದಿ: ಚಂದ್ರಯಾನದ ಬಗ್ಗೆ ವ್ಯಂಗ್ಯವಾಡಿದ ನಟ ಪ್ರಕಾಶ್ ರಾಜ್; ಖಡಕ್ ಆಗಿ ಪ್ರತಿಕ್ರಿಯಿಸಿದ ನೆಟ್ಟಿಗರು

ಲ್ಯಾಂಡಿಂಗ್ ಅನ್ನು ಇಸ್ರೋ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನೆಲ್, ಫೇಸ್‌ಬುಕ್ ಮತ್ತು ಸಾರ್ವಜನಿಕ ಪ್ರಸಾರಕ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಮಾಡ್ಯೂಲ್ ಗುರುವಾರ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಇದಾದ ನಂತರ ನಿರ್ಣಾಯಕ “ಡೀಬೂಸ್ಟಿಂಗ್” ಆಗಿ ಹತ್ತಿರ ಕಕ್ಷೆಗೆ ಇಳಿಯಿತು. ಚಂದ್ರಯಾನ-3 ಮಿಷನ್‌ನ ಲ್ಯಾಂಡರ್‌ಗೆ ವಿಕ್ರಮ್ ಸಾರಾಭಾಯ್ (1919-1971) ಅವರ ಹೆಸರನ್ನು ಇಡಲಾಗಿದೆ. ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಪರಿಗಣಿಸಲ್ಪಡುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್
Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?
Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?