Char Dham Yatra 2024: ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ, ಮೇ 31ರವರೆಗಿಲ್ಲ ವಿಐಪಿ ದರ್ಶನ

|

Updated on: May 17, 2024 | 10:23 AM

ಉತ್ತರಾಖಂಡದಲ್ಲಿ ಮೇ 10ರಿಂದ ಚಾರ್​ ಧಾಮ್ ಯಾತ್ರೆ ಶುರುವಾಗಿದೆ. ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ 50 ಮೀಟರ್​ ವ್ಯಾಪ್ತಿಯಲ್ಲಿ ಯಾರೂ ರೀಲ್ಸ್​ಗಳನ್ನು ಮಾಡುವಂತಿಲ್ಲ ಎನ್ನುವ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ.

Char Dham Yatra 2024: ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ, ಮೇ 31ರವರೆಗಿಲ್ಲ ವಿಐಪಿ ದರ್ಶನ
ಚಾರ್​ ಧಾಮ್ ಯಾತ್ರೆ
Follow us on

ಉತ್ತರಾಖಂಡದಲ್ಲಿ ಚಾರ್​ ಧಾಮ್ ಯಾತ್ರೆ(Char Dham Yatra) ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ 50 ಮೀಟರ್​ ವ್ಯಾಪ್ತಿಯಲ್ಲಿ ಯಾರೂ ರೀಲ್ಸ್​ಗಳನ್ನು ಮಾಡುವಂತಿಲ್ಲ ಎನ್ನುವ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ. ಕೇದಾರನಾಥ, ಬದರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿಯಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ.

ಹರಿದ್ವಾರ ಮತ್ತು ರಿಷಿಕೇಶದಲ್ಲಿ ಆಫ್‌ಲೈನ್ ನೋಂದಣಿ ಮೇ 19 (ಭಾನುವಾರ)ದವರೆಗೆ ಮುಚ್ಚಿರುತ್ತದೆ ಎಂದು ಮುಖ್ಯ ಕಾರ್ಯದರ್ಶಿ ರಾಧಾ ರತುರಿ ತಿಳಿಸಿದ್ದಾರೆ. ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ವಿಡಿಯೋಗ್ರಫಿ ಮತ್ತು ಸಾಮಾಜಿಕ ಮಾಧ್ಯಮ ರೀಲ್‌ಗಳ ಮೇಕಿಂಗ್ ಮೇಲೆ ನಿಷೇಧ ಹೇರಲಾಗಿದೆ.

ಕೆಲವು ಯಾತ್ರಾರ್ಥಿಗಳಿಂದ ದೇವಾಲಯಗಳ ಆವರಣದಲ್ಲಿ ವೀಡಿಯೊಗ್ರಫಿ ಮಾಡಲಾಗುತ್ತಿದೆ ಮತ್ತು ರೀಲ್ಸ್​ಗಳನ್ನು ಮಾಡಲಾಗುತ್ತಿದೆ, ಇದರಿಂದಾಗಿ ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ, ಇದರಿಂದ ಅನನುಕೂಲತೆ ಉಂಟಾಗುತ್ತದೆ ಎಂದು ರಾತುರಿ ಹೇಳಿದರು.

ಮತ್ತಷ್ಟು ಓದಿ: Chardham Yatra 2024: ಇಂದಿನಿಂದ ಚಾರ್​ಧಾಮ್ ಯಾತ್ರೆ ಇಂದಿನಿಂದ ಶುರು

ಮೇ 10 ರಂದು (ಶುಕ್ರವಾರ) ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ತೀರ್ಥಯಾತ್ರೆಯ ಮೊದಲ ಆರು ದಿನಗಳಲ್ಲಿ, ಬುಧವಾರದವರೆಗೆ, ಭಾರತ ಮತ್ತು ವಿದೇಶಗಳಿಂದ ಕನಿಷ್ಠ 3,34,732 ಜನರು ಪ್ರಾರ್ಥನೆ ಸಲ್ಲಿಸಲು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಯಾತ್ರೆಗೆ ಏಪ್ರಿಲ್ 25 ರಂದು ನೋಂದಣಿ ಆರಂಭವಾಗಿದ್ದು, ಗುರುವಾರ ಸಂಜೆಯವರೆಗೆ 27 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ವೈದ್ಯಕೀಯ ಇತಿಹಾಸ ಹೊಂದಿರುವ ಹಿರಿಯ ನಾಗರಿಕರು ಯಾತ್ರೆಯನ್ನು ಪ್ರಾರಂಭಿಸುವ ಮುನ್ನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ, ಗಂಗೋತ್ರಿಯ ಕಡೆಗೆ, ಕೇದಾರನಾಥದ ಕಡೆಗೆ ಸಾಗುತ್ತದೆ ಮತ್ತು ಅದು ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ. ಪ್ರಯಾಣವನ್ನು ರಸ್ತೆ ಅಥವಾ ವಿಮಾನದ ಮೂಲಕ ಪೂರ್ಣಗೊಳಿಸಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:05 am, Fri, 17 May 24