AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ ತಿಂಗಳಲ್ಲಿ ಚಾರ್​ ಧಾಮ್ ಯಾತ್ರೆಗೆ ವಿಶೇಷ ರಿಯಾಯ್ತಿ ಘೋಷಿಸಿದ ರೈಲ್ವೆ: ಇಲ್ಲಿದೆ ಮಾಹಿತಿ

ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್​ ಉಪಕ್ರಮಗಳ ಭಾಗವಾಗಿ ಐಆರ್​ಸಿಟಿಸಿ ಈ ಯೋಜನೆಯನ್ನು ಪರಿಚಯಿಸಿದೆ

ಮೇ ತಿಂಗಳಲ್ಲಿ ಚಾರ್​ ಧಾಮ್ ಯಾತ್ರೆಗೆ ವಿಶೇಷ ರಿಯಾಯ್ತಿ ಘೋಷಿಸಿದ ರೈಲ್ವೆ: ಇಲ್ಲಿದೆ ಮಾಹಿತಿ
ಕೇದಾರನಾಥ್
TV9 Web
| Edited By: |

Updated on:Apr 02, 2022 | 1:08 PM

Share

ದೆಹಲಿ: ಉತ್ತರಾಖಂಡದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಪ್ರವಾಸ ಹೊರಡುವ ಆಸೆ ಹೊಂದಿರುವವರಿಗೆ ಐಆರ್​ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದೆ. ಹಲವು ಅಗತ್ಯ ಸೌಲಭ್ಯಗಳಿರುವ ಪ್ಯಾಕೇಜ್ ಟೂರ್​ಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ರಿಯಾಯ್ತಿಯೂ ಸಿಗುತ್ತಿದೆ. ಬದರಿನಾಥ್, ಕೇದಾರ್​ನಾಥ್, ಗಂಗೋತ್ರಿ ಮತ್ತು ಯಮುನೋತ್ರಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಈ ಪ್ಯಾಕೇಜ್​ನಲ್ಲಿದೆ. ಈ ನಾಲ್ಕು ತೀರ್ಥ ಕ್ಷೇತ್ರಗಳ ದರ್ಶನದಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ.

ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್​ ಉಪಕ್ರಮಗಳ ಭಾಗವಾಗಿ ಐಆರ್​ಸಿಟಿಸಿ ಈ ಯೋಜನೆಯನ್ನು ಪರಿಚಯಿಸಿದೆ. ಈ ವರ್ಷ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸಾಕಷ್ಟು ಜನರು ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಮೇ 14ರಿಂದ ಆರಂಭವಾಗಿ ಮೇ 25ಕ್ಕೆ ಮುಕ್ತಾಯವಾಗಲಿರುವ ಈ ಯಾತ್ರೆಯು 12 ಹಗಲು ಮತ್ತು 11 ರಾತ್ರಿಗಳ ಪ್ರವಾಸ ಪ್ಯಾಕೇಜ್ ಹೊಂದಿರುತ್ತದೆ.

ಹರಿದ್ವಾರ, ಬಾರ್​ಕೊಟ್, ಜಾನಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಸನ್​ಪ್ರಯಾಗ, ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಸಂದರ್ಶಿಸಲಾಗುತ್ತದೆ. ನಾಗಪುರ ಮತ್ತು ದೆಹಲಿ ಮಾರ್ಗವಾಗಿ ವಾಯುಯಾನ ಟಿಕೆಟ್​ಗಳನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ.

ಒಬ್ಬರಿಗೆ ₹ 77,600 ಮತ್ತು ಇಬ್ಬರಿಗೆ ₹ 61,400 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಪ್ರಯಾಣದರದೊಂದಿಗೆ ವಸತಿ, ಊಟೋಪಚಾರ ವೆಚ್ಚಗಳನ್ನೂ ಒಳಗೊಂದಿದೆ. ಹೆಚ್ಚಿನ ಮಾಹಿತಿಗೆ www.irctctourism.com ಜಾಲತಾಣ ನೋಡಿ.

ಇದನ್ನೂ ಓದಿ: ಮೈಸೂರು: ಸಫಾರಿ ವೇಳೆ ಒಂದೆರಡಲ್ಲ, ಮೂರು ಹುಲಿಗಳ ದರ್ಶನ! ಪ್ರವಾಸಿಗರಿಗೆ ಧಮಾಕ; ವಿಡಿಯೋ ನೋಡಿ

ಇದನ್ನೂ ಓದಿ: Nandi Hills: ಕೋವಿಡ್​ಗೆ ಬೈ ಬೈ, ಪ್ರವಾಸಿಗರ ಭೇಟಿಗೆ ನಂದಿ ಬೆಟ್ಟ ಇನ್ಮುಂದೆ ಸದಾ ಮುಕ್ತ ಮುಕ್ತ ಮುಕ್ತಾ! ಟಿಕೆಟ್ ಬುಕ್ಕಿಂಗ್ ಹೇಗೆ?

Published On - 1:06 pm, Sat, 2 April 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್