AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Char Dham Yatra: ಚಾರ್​ ಧಾಮ ಯಾತ್ರೆಯಲ್ಲಿ 15 ದಿನದಲ್ಲಿ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವು

ಚಾರ್​ ಧಾಮ ಯಾತ್ರೆ ಏಪ್ರಿಲ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ನಡೆಯುತ್ತದೆ. 50 ವರ್ಷ ಮೇಲ್ಪಟ್ಟ ಭಕ್ತರಿಗೆ ವೈದ್ಯಕೀಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಹಿಮಾಲಯದ ದೇವಾಲಯಗಳಿಗೆ ಹೋಗುವ ಮಾರ್ಗದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.

Char Dham Yatra: ಚಾರ್​ ಧಾಮ ಯಾತ್ರೆಯಲ್ಲಿ 15 ದಿನದಲ್ಲಿ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವು
ಚಾರ್‌ ಧಾಮ ಯಾತ್ರೆ
ಸುಷ್ಮಾ ಚಕ್ರೆ
|

Updated on: May 24, 2024 | 7:58 PM

Share

ಡೆಹ್ರಾಡೂನ್: ಸುಮಾರು 15 ದಿನಗಳ ಹಿಂದೆ ಮೇ 10ರಂದು ಉತ್ತರಾಖಂಡದಲ್ಲಿ ಚಾರ್​ ಧಾಮ ಯಾತ್ರೆ (Char Dham Yatra 2024) ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಬದರಿನಾಥ್ (Badrinath), ಕೇದಾರನಾಥ (Kedarnath), ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳನ್ನು ಒಳಗೊಂಡಿರುವ ತೀರ್ಥಯಾತ್ರೆಗೆ ಪ್ರತಿದಿನ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಿರಂತರವಾಗಿ ಬರುತ್ತಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗರ್ವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ, “ಇದುವರೆಗೆ 52 ಚಾರ್​ ಧಾಮ ಯಾತ್ರಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಾಗಿ ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು” ಎಂದು ಹೇಳಿದ್ದಾರೆ. ಗಂಗೋತ್ರಿಯಲ್ಲಿ ಮೂವರು, ಯಮುನೋತ್ರಿಯಲ್ಲಿ 12, ಬದರಿನಾಥದಲ್ಲಿ 14 ಮತ್ತು ಕೇದಾರನಾಥದಲ್ಲಿ 23 ಭಕ್ತರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Char Dham Yatra 2024: ಕಳೆದ 10 ದಿನಗಳಲ್ಲಿ ಚಾರ್ ಧಾಮ ಯಾತ್ರೆಗೆ 6 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ

50 ವರ್ಷ ಮೇಲ್ಪಟ್ಟ ಭಕ್ತರಿಗೆ ವೈದ್ಯಕೀಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಹಿಮಾಲಯದ ದೇವಾಲಯಗಳಿಗೆ ಹೋಗುವ ಮಾರ್ಗದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಯಾತ್ರಾರ್ಥಿಗಳು ವೈದ್ಯಕೀಯವಾಗಿ ಸಾಕಷ್ಟು ಫಿಟ್ ಆಗಿಲ್ಲದಿದ್ದರೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಚಾರ್‌ ಧಾಮ ಯಾತ್ರೆಯ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದುವರೆಗೆ 9.67 ಲಕ್ಷ ಭಕ್ತರು ಚಾರ್‌ಧಾಮ್‌ಗೆ ಭೇಟಿ ನೀಡಿದ್ದಾರೆ.

ಗಂಗೋತ್ರಿ ಮತ್ತು ಯಮುನೋತ್ರಿ ಧಾಮ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕಳೆದ 14 ದಿನಗಳಲ್ಲಿ 15 ಮಂದಿ ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಪೈಕಿ 12 ಸಾವುಗಳು ಯಮುನೋತ್ರಿ ಧಾಮದಲ್ಲಿ ಮತ್ತು 3 ಸಾವುಗಳು ಗಂಗೋತ್ರಿ ಧಾಮದಲ್ಲಿ ಸಂಭವಿಸಿವೆ. ಇದನ್ನು ಕಂಡ ಉತ್ತರಾಖಂಡದ ಆರೋಗ್ಯ ಇಲಾಖೆ ಎಚ್ಚೆತ್ತಿದ್ದು, ಹೃದ್ರೋಗದಿಂದ ಬಳಲುತ್ತಿರುವ ಭಕ್ತರ ಮೇಲೆ ವಿಶೇಷ ನಿಗಾ ಇರಿಸಿದೆ. ಅಂತಹ ಭಕ್ತರು ಚಾರ್​ ಧಾಮ ಯಾತ್ರೆಗೆ ಬರದಂತೆ ಇಲಾಖೆ ಸೂಚಿಸುತ್ತಿದೆ.

ಇದನ್ನೂ ಓದಿ: Char Dham Yatra 2024: ಚಾರ್ ಧಾಮ್ ಯಾತ್ರೆ; ಯಮುನೋತ್ರಿ ಮಾರ್ಗದಲ್ಲಿ ಸೆಕ್ಷನ್ 144 ಹೇರಿಕೆ, ಕುದುರೆಗಳ ಬಳಕೆಗೆ ಮಿತಿ

ಹೃದಯ ಸಂಬಂಧಿ ಕಾಯಿಲೆ ಇರುವ ಭಕ್ತರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಬಾರದು ಎಂದು ಮುಖ್ಯ ಕಾರ್ಯದರ್ಶಿ ಆರ್ ಮೀನಾಕ್ಷಿ ಸುಂದರಂ ಹೇಳಿದ್ದಾರೆ. ಅಂತಹ ಭಕ್ತರಿಗೆ ಮತ್ತು ನೋಂದಣಿ ಇಲ್ಲದವರಿಗೆ ರಾಜ್ಯ ಸರ್ಕಾರವು ಇತರ ರಾಜ್ಯಗಳಲ್ಲಿ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ