Char Dham Yatra 2024: ಕಳೆದ 10 ದಿನಗಳಲ್ಲಿ ಚಾರ್ ಧಾಮ ಯಾತ್ರೆಗೆ 6 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ
ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳು ಉತ್ತರಾಖಂಡದ ಉತ್ತರಕಾಶಿಯಲ್ಲಿವೆ. ಈ ವರ್ಷ ಮೇ 10ರಂದು ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಹಿಂದೂ ತೀರ್ಥಯಾತ್ರೆ ಕ್ಷೇತ್ರಗಳಾದ ಚಾರ್ ಧಾಮ 4 ತಾಣಗಳನ್ನು ಒಳಗೊಂಡಿವೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್ ಆ ಕ್ಷೇತ್ರಗಳಾಗಿವೆ.
ಚಾರ್ ಧಾಮ್ ಯಾತ್ರೆ 2024: ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ದೇವರ ದರ್ಶನಕ್ಕೆ ಭಕ್ತರ ದಂಡೇ ನೆರೆದಿದೆ. ಚಾರ್ ಧಾಮ್ ಯಾತ್ರೆಯು (Char Dham Yatra) ಹಿಂದೂ ಧರ್ಮದಲ್ಲಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಪ್ರಯಾಣವು ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಿಂದ ಅಕ್ಟೋಬರ್-ನವೆಂಬರ್ ತಿಂಗಳವರೆಗೆ ನಡೆಯುತ್ತದೆ. ಚಾರ್ ಧಾಮ್ ಯಾತ್ರೆಯನ್ನು ಪ್ರದಕ್ಷಿಣಾಕಾರವಾಗಿ ಪೂರ್ಣಗೊಳಿಸಬೇಕು ಎಂದು ನಂಬಿಕೆಯಿದೆ.
ಉತ್ತರಾಖಂಡದಲ್ಲಿರುವ ಗಂಗೋತ್ರಿ ಮತ್ತು ಯಮುನೋತ್ರಿ ಬಹಳ ಪ್ರಸಿದ್ಧ ತೀರ್ಥಯಾತ್ರಾ ಸ್ಥಳಗಳಾಗಿವೆ. ಭಾನುವಾರ ಒಂದೇ ದಿನ ಸುಮಾರು 12,000 ಭಕ್ತರು ಗಂಗೋತ್ರಿ ಧಾಮದಲ್ಲಿ ದರ್ಶನ ಪಡೆದರು. ಯಮುನೋತ್ರಿ ಧಾಮದಲ್ಲಿ 10 ಸಾವಿರ ಜನರು ದರ್ಶನ ಪಡೆದಿದ್ದಾರೆ. ಯಮುನಾ ನದಿಯು ಉತ್ತರಾಖಂಡದ ಯಮುನೋತ್ರಿ ಹಿಮನದಿಯಿಂದ ಹುಟ್ಟುತ್ತದೆ. ಬೇಸಿಗೆಯಲ್ಲಿ ವಾರ್ಷಿಕವಾಗಿ ಚಾರ್ ಧಾಮ್ ಯಾತ್ರೆಗಾಗಿ ಉತ್ತರಾಖಂಡದಲ್ಲಿ ತೀರ್ಥಯಾತ್ರೆಯ ಅವಧಿಯು ಉತ್ತುಂಗಕ್ಕೇರುತ್ತದೆ.
ಚಾರ್ ಧಾಮ್ ಯಾತ್ರೆಯಲ್ಲಿ ಕೇವಲ 10 ದಿನಗಳಲ್ಲಿ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ 6 ಲಕ್ಷಕ್ಕೂ ಹೆಚ್ಚು (6,40,000) ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೇದಾರನಾಥ ಧಾಮವೊಂದಕ್ಕೇ 2.50 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳನ್ನು ಒಳಗೊಂಡಿರುವ ತೀರ್ಥಯಾತ್ರೆಗೆ ಪ್ರತಿದಿನ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಾರ್ಥಿಗಳ ನಿರಂತರ ಹರಿವು ಕಂಡುಬಂದಿದೆ.
ಇದನ್ನೂ ಓದಿ: Uttarakhand: ಗಂಗೋತ್ರಿ ಹೆದ್ದಾರಿಯಲ್ಲಿ ಗುಡ್ಡದಿಂದ ವಾಹನಗಳ ಮೇಲೆ ಉರುಳಿದ ಬಂಡೆಗಳು, ನಾಲ್ವರು ಸಾವು
ಗರ್ವಾಲ್ ಹಿಮಾಲಯದಲ್ಲಿರುವ ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳ ಬಾಗಿಲುಗಳನ್ನು ಚಳಿಗಾಲದಲ್ಲಿ ಮುಚ್ಚಿದ ನಂತರ ಅಕ್ಷಯ ತೃತೀಯ ಸಂದರ್ಭದಲ್ಲಿ ಭಕ್ತರಿಗೆ ತೆರೆಯಲಾಗಿರುವುದರಿಂದ ಚಾರ್ ಧಾಮ್ ಯಾತ್ರೆಯು ಮೇ 10ರಂದು ಪ್ರಾರಂಭವಾಯಿತು. ಕೇದಾರನಾಥ ಮತ್ತು ಯಮುನೋತ್ರಿಯ ಬಾಗಿಲುಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು. ಗಂಗೋತ್ರಿಯ ದ್ವಾರಗಳನ್ನು 12 ಗಂಟೆಗೆ ತೆರೆಯಲಾಯಿತು.
ಚಾರ್ ಧಾಮ್ ಯಾತ್ರೆಯ ನೋಂದಣಿ ಸಂಖ್ಯೆಯು ಈಗ 29.52 ಲಕ್ಷದಷ್ಟಿದೆ. ರಾಜ್ಯ ಸರ್ಕಾರ ಮತ್ತು ಆಡಳಿತವು ನೋಂದಣಿ ಮಾಡಿಕೊಳ್ಳದೆ ಆಗಮಿಸಿರುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಚಾರ್ ಧಾಮ್ ಯಾತ್ರೆಗೆ ಭೇಟಿ ನೀಡಿದ ಯಾತ್ರಿಕರ ಸಂಖ್ಯೆ:
ಕೇದಾರನಾಥ: 2,46,820 ಬದರಿನಾಥ್: 1,20,757 ಯಮುನೋತ್ರಿ: 1,25,608 ಗಂಗೋತ್ರಿ: 1,12,508
ಚಾರ್ ಧಾಮ್ ಯಾತ್ರೆಗೆ ಆಗಿರುವ ನೋಂದಣಿಗಳು:
ಕೇದಾರನಾಥ: 9,87,533 ಬದರಿನಾಥ್: 9,04,009 ಗಂಗೋತ್ರಿ: 5,26,273 ಯಮುನೋತ್ರಿ: 4,62,632
ಉತ್ತರಾಖಂಡದ ಗರ್ವಾಲ್ ಹಿಮಾಲಯದಲ್ಲಿರುವ ಬದರಿನಾಥ ದೇವಾಲಯದ ಬಾಗಿಲುಗಳನ್ನು ಭಕ್ತರಿಗಾಗಿ ಮೇ 12ರಂದು ತೆರೆಯಲಾಯಿತು. 2 ಗಂಟೆಗಳ ಧಾರ್ಮಿಕ ಕ್ರಿಯೆಗಳ ನಂತರ ಬೆಳಿಗ್ಗೆ 6 ಗಂಟೆಗೆ ಬಾಗಿಲು ತೆರೆಯಲಾಯಿತು. ವೈದಿಕ ಮಂತ್ರಗಳ ಪಠಣ, ಪೂಜೆ ಮತ್ತು ಡೊಳ್ಳು ಮತ್ತು ನಾಗದಾಸರಗಳ ನಡುವೆ 6 ತಿಂಗಳ ನಂತರ ಬದರಿನಾಥ ದೇವಾಲಯದ ಬಾಗಿಲು ತೆರೆಯಲಾಯಿತು.
ಇದನ್ನೂ ಓದಿ: Chardham Yatra 2024: ಇಂದಿನಿಂದ ಚಾರ್ಧಾಮ್ ಯಾತ್ರೆ ಇಂದಿನಿಂದ ಶುರು
ಚಾರ್ ಧಾಮ್ ಯಾತ್ರೆಗೆ ನೋಂದಣಿ:
ಏಪ್ರಿಲ್ 30ರಂದು ಇತರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದ ಪ್ರಕಾರ, ಮೇ 25ರವರೆಗೆ ದೇವಾಲಯಗಳಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು. ಈ ಯಾತ್ರೆಗೆ ಪೂರ್ವ ನೋಂದಣಿ ಕಡ್ಡಾಯವಾಗಿದೆ. ಭಕ್ತರು ಧಾಮಗಳಲ್ಲಿ ಮಾತ್ರ ದರ್ಶನ ಪಡೆಯಬಹುದು. ವೈದ್ಯಕೀಯ ಇತಿಹಾಸ ಹೊಂದಿರುವ ಹಿರಿಯ ಭಕ್ತರು ಯಾತ್ರೆಯನ್ನು ಪ್ರಾರಂಭಿಸುವ ಮೊದಲು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕು ಮತ್ತು ಉತ್ತರಾಖಂಡದ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಚಾರ್ ಧಾಮ ಯಾತ್ರೆ:
ಚಾರ್ ಧಾಮ್ ಯಾತ್ರೆಯು ಹಿಂದೂ ಧರ್ಮದಲ್ಲಿ ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಪ್ರಯಾಣವು ಸಾಮಾನ್ಯವಾಗಿ ಏಪ್ರಿಲ್-ಮೇನಿಂದ ಅಕ್ಟೋಬರ್-ನವೆಂಬರ್ವರೆಗೆ ಸಂಭವಿಸುತ್ತದೆ. ಚಾರ್ ಧಾಮ್ ಯಾತ್ರೆಯನ್ನು ಪ್ರದಕ್ಷಿಣಾಕಾರವಾಗಿ ಪೂರ್ಣಗೊಳಿಸಬೇಕು ಎಂದು ನಂಬಲಾಗಿದೆ. ಆದ್ದರಿಂದ, ಈ ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಗಂಗೋತ್ರಿ- ಕೇದಾರನಾಥದ ಕಡೆಗೆ ಸಾಗುತ್ತದೆ. ಅದು ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.
ಈ ಪ್ರಯಾಣವನ್ನು ರಸ್ತೆ ಅಥವಾ ವಿಮಾನದ ಮೂಲಕ ಪೂರ್ಣಗೊಳಿಸಬಹುದು. ಹೆಲಿಕಾಪ್ಟರ್ ಸೇವೆಗಳು ಕೂಡ ಲಭ್ಯವಿದೆ. ಚಾರ್ ಧಾಮ್ ಯಾತ್ರೆ ಅಥವಾ ತೀರ್ಥಯಾತ್ರೆಯು 4 ಪವಿತ್ರ ಸ್ಥಳಗಳ ಪ್ರವಾಸವಾಗಿದೆ. ಅವುಗಳೆಂದರೆ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ