AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Char Dham Yatra 2024: ಚಾರ್ ಧಾಮ್ ಯಾತ್ರೆ; ಯಮುನೋತ್ರಿ ಮಾರ್ಗದಲ್ಲಿ ಸೆಕ್ಷನ್ 144 ಹೇರಿಕೆ, ಕುದುರೆಗಳ ಬಳಕೆಗೆ ಮಿತಿ

ಚಾರ್ ಧಾಮ್ ಯಾತ್ರೆ 2024: ಹಿಂದೂ ತೀರ್ಥಯಾತ್ರೆ ಕ್ಷೇತ್ರವಾದ ಚಾರ್ ಧಾಮ್ ಸರ್ಕ್ಯೂಟ್ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್ ಈ 4 ತಾಣಗಳನ್ನು ಒಳಗೊಂಡಿದೆ. ಯಮುನಾ ನದಿಯು ಉತ್ತರಾಖಂಡದ ಯಮುನೋತ್ರಿ ಹಿಮನದಿಯಿಂದ ಹುಟ್ಟುತ್ತದೆ. ಬೇಸಿಗೆಯಲ್ಲಿ ವಾರ್ಷಿಕವಾಗಿ ಚಾರ್ ಧಾಮ್ ಯಾತ್ರೆಗಾಗಿ ಉತ್ತರಾಖಂಡದಲ್ಲಿ ತೀರ್ಥಯಾತ್ರೆಗೆ ಹೆಚ್ಚು ಜನ ಬರುತ್ತಾರೆ.

Char Dham Yatra 2024: ಚಾರ್ ಧಾಮ್ ಯಾತ್ರೆ; ಯಮುನೋತ್ರಿ ಮಾರ್ಗದಲ್ಲಿ ಸೆಕ್ಷನ್ 144 ಹೇರಿಕೆ, ಕುದುರೆಗಳ ಬಳಕೆಗೆ ಮಿತಿ
ಯಮುನೋತ್ರಿ
ಸುಷ್ಮಾ ಚಕ್ರೆ
|

Updated on: May 22, 2024 | 10:42 PM

Share

ಉತ್ತರಾಖಂಡ: ಈ ವರ್ಷದ ಚಾರ್ ಧಾಮ್ ಯಾತ್ರೆ (Char Dham Yatra) ಈಗಾಗಲೇ ಆರಂಭವಾಗಿದೆ. ಯಮುನೋತ್ರಿ (Yamunotri) ಪಾದಯಾತ್ರೆ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುಗಮ, ಸುರಕ್ಷಿತ ಮತ್ತು ಶಾಂತಿಯುತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಉತ್ತರಕಾಶಿಯ ಜಿಲ್ಲಾ ಅಧಿಕಾರಿಗಳು ಕುದುರೆಗಳು ಮತ್ತು ಹೇಸರಗತ್ತೆಗಳ ಚಲನೆಯನ್ನು ನಿಗ್ರಹಿಸಲು ಆದೇಶಗಳನ್ನು ಹೊರಡಿಸಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಡಾ. ಮೆಹರ್ಬನ್ ಸಿಂಗ್ ಬಿಷ್ಟ್ ಹೊರಡಿಸಿದ ಆದೇಶದ ಪ್ರಕಾರ, ಜಾಂಕಿ ಚಟ್ಟಿಯಿಂದ ಯಮುನೋತ್ರಿಗೆ ಹೋಗುವ ಗರಿಷ್ಠ ಸಂಖ್ಯೆಯ ಕುದುರೆಗಳು ಮತ್ತು ಹೇಸರಗತ್ತೆಗಳ ಸಂಖ್ಯೆಯನ್ನು 800ಕ್ಕೆ ಸೀಮಿತಗೊಳಿಸಲಾಗಿದೆ. ಕುದುರೆಗಳು ಮತ್ತು ಹೇಸರಗತ್ತೆಗಳ ಚಲನೆಯು ಬೆಳಿಗ್ಗೆ 4ರಿಂದ ಸಂಜೆ 5ರವರೆಗೆ ಇರುತ್ತದೆ.

ಇದಲ್ಲದೆ, ಆದೇಶವು ಯಮುನೋತ್ರಿ ಧಾಮದ ಘೋಡಾ ಪಾದವ್‌ನ ಆಚೆಗೆ ಕುದುರೆಗಳು, ಹೇಸರಗತ್ತೆಗಳ ಚಲನೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಈ ಆದೇಶವನ್ನು ಉಲ್ಲಂಘಿಸಿದರೆ ಆರೋಪಿಗಳು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 188ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ. ಯಾತ್ರಿಕರು, ಜೀವನ ಮತ್ತು ಆಸ್ತಿಯ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.

“ಯಮುನೋತ್ರಿ ಧಾಮದ ಕಿರಿದಾಗುವಿಕೆ ಮತ್ತು ಸಲ್ಲಿಸಿದ ವರದಿಯನ್ನು ಗಮನದಲ್ಲಿಟ್ಟುಕೊಂಡು ಯಮುನೋತ್ರಿ ಧಾಮ ಪಾದಯಾತ್ರೆ ಮಾರ್ಗದಲ್ಲಿ ಸುಗಮ ಮತ್ತು ಅನುಕೂಲಕರ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ” ಎಂದು ಉತ್ತರಕಾಶಿ ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: Char Dham Yatra: ಚಾರ್ ಧಾಮ್ ಯಾತ್ರೆ ವೇಳೆ ಹೃದಯಾಘಾತದಿಂದ ಇಬ್ಬರು ಯಾತ್ರಾರ್ಥಿಗಳು ಸಾವು

“ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಮೆಹರ್ಬಾನ್ ಸಿಂಗ್ ಬಿಶ್ತ್ ಅವರು ಯಮುನೋತ್ರಿ ಧಾಮ್ ಪಾದಯಾತ್ರೆಯ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುಗಮ, ಸುರಕ್ಷಿತ ಮತ್ತು ಶಾಂತಿಯುತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರ ಅಡಿಯಲ್ಲಿ ಆದೇಶವನ್ನು ಹೊರಡಿಸಿದ್ದಾರೆ. ಸಂಚಾರಕ್ಕೆ ಗರಿಷ್ಠ ಸಂಖ್ಯೆ ಮತ್ತು ಸಮಯವನ್ನು ನಿರ್ಧರಿಸಿದ್ದಾರೆ” ಎಂದು ಉತ್ತರಕಾಶಿ ಜಿಲ್ಲಾಡಳಿತ ತಿಳಿಸಿದೆ.

ಇದಕ್ಕೂ ಮೊದಲು ಮೇ 19ರಂದು ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಲ್ಲಿ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು ಎಂದು ವರದಿಯಾಗಿದೆ. ದೊರೆತ ಮಾಹಿತಿಯ ಪ್ರಕಾರ, ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಸುಮಾರು 10,000 ಭಕ್ತರು ಗಂಗೋತ್ರಿ ಧಾಮದಲ್ಲಿ ಪೂಜೆ ಸಲ್ಲಿಸಿದ್ದಾರೆ. ವಿವಿಧ ಸ್ಥಳಗಳಿಂದ ಸುಮಾರು 28,000 ಯಾತ್ರಿಕರು ಗಂಗೋತ್ರಿ ಧಾಮದ ಕಡೆಗೆ ತೆರಳುತ್ತಿದ್ದಾರೆ.

ಇದನ್ನೂ ಓದಿ: Char Dham Yatra 2024: ಕಳೆದ 10 ದಿನಗಳಲ್ಲಿ ಚಾರ್ ಧಾಮ ಯಾತ್ರೆಗೆ 6 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ

ಯಮುನೋತ್ರಿ ಧಾಮದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ 8,500 ಜನರು ಪೂಜೆ ಸಲ್ಲಿಸಿದ್ದಾರೆ ಮತ್ತು ಸುಮಾರು 20,000 ಜನರು ವಿವಿಧ ನಿಲ್ದಾಣಗಳಿಂದ ಯಮುನೋತ್ರಿ ಮಾರ್ಗದಲ್ಲಿ ಮುಂದೆ ಸಾಗುತ್ತಿದ್ದಾರೆ. ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳು ಉತ್ತರಾಖಂಡದ ಉತ್ತರಕಾಶಿಯಲ್ಲಿವೆ.

ಈ ವರ್ಷ ಮೇ 10ರಂದು ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಹಿಂದೂ ತೀರ್ಥಯಾತ್ರೆ ಚಾರ್ ಧಾಮ್ ಸರ್ಕ್ಯೂಟ್ 4 ತಾಣಗಳನ್ನು ಒಳಗೊಂಡಿದೆ. ಅವುಗಳೆಂದರೆ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್. ಯಮುನಾ ನದಿಯು ಉತ್ತರಾಖಂಡದ ಯಮುನೋತ್ರಿ ಹಿಮನದಿಯಿಂದ ಹುಟ್ಟುತ್ತದೆ. ಬೇಸಿಗೆಯಲ್ಲಿ ವಾರ್ಷಿಕವಾಗಿ ಚಾರ್ ಧಾಮ್ ಯಾತ್ರೆಗಾಗಿ ಉತ್ತರಾಖಂಡದಲ್ಲಿ ತೀರ್ಥಯಾತ್ರೆಯ ಅವಧಿಯು ಉತ್ತುಂಗಕ್ಕೇರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ