AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲಾಕ್​ಮೇಲಿಂಗ್ ಮತ್ತು ಸುಲಿಗೆ ಆರೋಪ: ಮೊಹಾಲಿಯ ಇನ್‌ಸ್ಟಾಗ್ರಾಮ್ ಇನ್ಫ್ಲ್ಯೂಯೆನ್ಸರ್ ಬಂಧನ

ಲುಧಿಯಾನ ಮೂಲದ ಉದ್ಯಮಿ ತನ್ನ ದೂರಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ದರೋಡೆಕೋರರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಜನರನ್ನು ಬ್ಲಾಕ್​ಮೇಲಿಂಗ್ ಮಾಡಲು ಅವರ ಸಹಾಯವನ್ನು ಪಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ

ಬ್ಲಾಕ್​ಮೇಲಿಂಗ್ ಮತ್ತು ಸುಲಿಗೆ ಆರೋಪ: ಮೊಹಾಲಿಯ ಇನ್‌ಸ್ಟಾಗ್ರಾಮ್ ಇನ್ಫ್ಲ್ಯೂಯೆನ್ಸರ್ ಬಂಧನ
ಜಸ್ನೀತ್ ಕೌರ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 06, 2023 | 1:01 PM

ಮೊಹಾಲಿ: ಬ್ಲಾಕ್​ಮೇಲಿಂಗ್ ಮತ್ತು ಸುಲಿಗೆ ಆರೋಪದ ಮೇಲೆ ಇನ್‌ಸ್ಟಾಗ್ರಾಮ್ ಇನ್ಫ್ಲ್ಯೂಯೆನ್ಸರ್​​ನ್ನು (Instagram influencer) ಮಂಗಳವಾರ ಪಂಜಾಬ್‌ನ (Punjab) ಮೊಹಾಲಿಯಿಂದ(Mohali) ಬಂಧಿಸಲಾಗಿದೆ. ಜಸ್ನೀತ್ ಕೌರ್ ಅಲಿಯಾಸ್ ರಾಜ್ಬೀರ್ ಕೌರ್ ಅವರನ್ನು ಲೂಧಿಯಾನ ಪೊಲೀಸರು ಬಂಧಿಸಿದ್ದು, ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಬ್ಲಾಕ್​ಮೇಲಿಂಗ್ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಆಕೆಯ ಬಳಿಯಿದ್ದ ಬಿಎಂಡಬ್ಲ್ಯು ಕಾರು ಹಾಗೂ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಫೋಟೊ ಮತ್ತು ವಿಡಿಯೊ ಶೇರಿಂಗ್ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್​​ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೌರ್, ತನ್ನ ನಗ್ನ ಫೋಟೋಗಳನ್ನು ಕಳುಹಿಸುವ ಮೂಲಕ ಸುಲಿಗೆಗಾಗಿ ಬ್ಲಾಕ್​ಮೇಲ್ ಮಾಡುತ್ತಿದ್ದಳು.

ಲುಧಿಯಾನ ಮೂಲದ ಉದ್ಯಮಿ ತನ್ನ ದೂರಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ದರೋಡೆಕೋರರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಜನರನ್ನು ಬ್ಲಾಕ್​ಮೇಲಿಂಗ್ ಮಾಡಲು ಅವರ ಸಹಾಯವನ್ನು ಪಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ. 33 ವರ್ಷದ ವ್ಯಕ್ತಿ ಕಳೆದ ವರ್ಷ ನವೆಂಬರ್‌ನಲ್ಲಿ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಹಣಕ್ಕೆ ಬೇಡಿಕೆಯಿಡುವ ಕರೆಯನ್ನು ಸ್ವೀಕರಿಸಿದ್ದನು. ಹೀಗೆ ಹಣ ನೀಡದಿದ್ದರೆ ಕುಟುಂಬಕ್ಕೆ ಹಾನಿ ಮಾಡುವುದಾಗಿ ಅಪರಿಚಿತ ಸಂಖ್ಯೆಯಿಂದ ಬೆದರಿಕೆಯೂ ಬಂದಿತ್ತು.

ಏಪ್ರಿಲ್ 1 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384 (ಸುಲಿಗೆ), 506 (ಅಪರಾಧ ಬೆದರಿಕೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಜಸ್ನೀತ್ ಕೌರ್ ವಿರುದ್ಧ ಲೂಧಿಯಾನಾದ ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: Haryana Crime: ಪ್ರಿಯಕರನೊಂದಿಗೆ ಮದುವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದಿದ್ದ ಯುವತಿಯ ಬರ್ಬರ ಹತ್ಯೆ

ಯುವ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲು

ಸ್ಥಳೀಯ ಯೂತ್ ಕಾಂಗ್ರೆಸ್ ನಾಯಕ ಸಾಹ್ನೆವಾಲ್‌ನ ಲಕ್ಕಿ ಸಂಧು ಅವರು ಕೌರ್‌ನ ಆಜ್ಞೆಯ ಮೇರೆಗೆ ನಗರದ ಶ್ರೀಮಂತರಿಗೆ ಹಣ ವಸೂಲಿ ಮಾಡಲು ಬ್ಲಾಕ್​ಮೇಲಿಂಗ್ ಕರೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಆತ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಾಲಿ ಮೂಲದ ಇನ್ಫ್ಲ್ಯೂಯೆನ್ಸರ್ ತನ್ನ ಅರೆ-ನಗ್ನ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸಿ, ಆರ್ಥಿಕವಾಗಿ ಉತ್ತಮವಾಗಿರುವ ಪುರುಷರೊಂದಿಗೆ ಸ್ನೇಹ ಬೆಳೆಸುತ್ತಿದ್ದಳು, ಅವರಿಂದ ಭಾರಿ ಮೊತ್ತವನ್ನು ಕೇಳುತ್ತಿದ್ದಳು. ಪಾವತಿಸದಿದ್ದರೆ, ದರೋಡೆಕೋರರ ಸಹಾಯದಿಂದ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Thu, 6 April 23