‘ಆರ್ನಬ್ ಗೋಸ್ವಾಮಿ- ಪಾರ್ಥೊದಾಸ್​ಗುಪ್ತ ವಾಟ್ಸಾಪ್​ ಚಾಟ್​ಗೂ ಟಿಆರ್​ಪಿ ಹಗರಣಕ್ಕೂ ಸಂಬಂಧವಿಲ್ಲ’

| Updated By: ರಾಜೇಶ್ ದುಗ್ಗುಮನೆ

Updated on: Mar 22, 2021 | 11:30 PM

ಆರ್ನಬ್ ಮತ್ತು ದಾಸ್​ಗುಪ್ತ ನಡುವಣ ಚಾಟ್​ನ ಕೆಲ ಭಾಗವನ್ನು ಓದಿದ ಅವರು, ಇವರು ಕೇವಲ ಮಾರ್ಕೆಟ್ ಟ್ರೆಂಡ್​ ಬಗ್ಗೆ ಮಾತನಾಡುತ್ತಿದ್ದಾರೆ. ಇಬ್ಬರು ಹತ್ತಿರದ ಗೆಳೆಯರ ನಡುವಣ ಸಂವಾದವಿದು ಎಂದು ಆರ್ನಬ್ ಪರ ವಕೀಲರು ವಾದಿಸಿದರು.

‘ಆರ್ನಬ್ ಗೋಸ್ವಾಮಿ- ಪಾರ್ಥೊದಾಸ್​ಗುಪ್ತ ವಾಟ್ಸಾಪ್​ ಚಾಟ್​ಗೂ ಟಿಆರ್​ಪಿ ಹಗರಣಕ್ಕೂ ಸಂಬಂಧವಿಲ್ಲ’
ಅರ್ನಬ್​ ಗೋಸ್ವಾಮಿ
Follow us on

ಮುಂಬೈ: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಆರ್ನಬ್ ಗೋಸ್ವಾಮಿ ಮತ್ತು ಬಾರ್ಕ್​ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪಾರ್ಥೊ ದಾಸ್​ಗುಪ್ತ ನಡುವಣ ವಾಟ್ಸ್ಯಾಪ್​ ಚಾಟ್​ ಕೇವಲ ಇಬ್ಬರು ಗೆಳೆಯರ ನಡುವಣ ಸಂವಾದ. ಅದಕ್ಕೂ ಟಿಆರ್​ಪಿ ತಿರುಚಿದ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರ್ನಬ್ ಗೋಸ್ವಾಮಿ ವಕೀಲರು ಬಾಂಬೆ ಹೈಕೋರ್ಟ್​ಗೆ ಸೋಮವಾರ ಹೇಳಿದರು.

ನ್ಯಾಯಾಲಯದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಆರ್ನಬ್ ಪರ ವಕೀಲ ಅಶೋಕ್ ಮುಂಡರಗಿ, ‘ಟಿಆರ್​ಪಿ ಹಗರಣಕ್ಕೆ ಸಂಬಂಧಿಸಿದಂತೆ ಈ ವಾಟ್ಸ್ಯಾಪ್​ ಚಾಟ್​ ಅತಿದೊಡ್ಡ ಆಧಾರ ಎಂದು ಮುಂಬೈ ಪೊಲೀಸರು ಹೇಳುತ್ತಿದ್ದಾರೆ. ನೀವು ದಯವಿಟ್ಟು ಈ ಚಾಟ್​ಗಳನ್ನು ಇಡಿಯಾಗಿ ಪರಿಶೀಲಿಸಿ ನೋಡಿ. ಪೊಲೀಸರು ಈ ಚಾಟ್​ಗಳನ್ನು ಸಂದರ್ಭದಿಂದ ಆಚೆಗೆ ವಿಶ್ಲೇಷಿಸುತ್ತಿದ್ದಾರೆ’ ಎಂದು ಹೇಳಿದರು.

ಆರ್ನಬ್ ಮತ್ತು ದಾಸ್​ಗುಪ್ತ ನಡುವಣ ಚಾಟ್​ನ ಕೆಲ ಭಾಗವನ್ನು ಓದಿದ ಅವರು, ಇವರು ಕೇವಲ ಮಾರ್ಕೆಟ್ ಟ್ರೆಂಡ್​ ಬಗ್ಗೆ ಮಾತನಾಡುತ್ತಿದ್ದಾರೆ. ಇಬ್ಬರು ಹತ್ತಿರದ ಗೆಳೆಯರ ನಡುವಣ ಸಂವಾದವಿದು. ಇವರಿಬ್ಬರ ನಡುವೆ ಟಿಆರ್​ಪಿ ತಿರುಚುವುದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಎಸ್​ಎಂಎಸ್ ಅಥವಾ ಮೆಸೇಜ್ ವಿನಿಮಯವಾಗಿಲ್ಲ ಎಂದರು.

ಆರ್ನಬ್ ಗೋಸ್ವಾಮಿಗೆ ತೊಂದರೆ ಕೊಡುವ ಒಂದೇ ಉದ್ದೇಶದಿಂದ ಪೊಲೀಸರು ಈ ಪ್ರಕರಣದಲ್ಲಿ ಆರ್ನಬ್ ಹೆಸರು ಸೇರಿಸಿದ್ದಾರೆ. ಇದರಿಂದಾಗಿ ಬಹುಕಾಲದಿಂದ ಅವರಿಗೆ ತೊಂದರೆಯಾಗುತ್ತಿದೆ ಎಂದು ವಕೀಲರು ವಾದಿಸಿದರು.

‘ಕೇಂದ್ರ ಅಥವಾ ರಾಜ್ಯ ತನಿಖಾ ದಳದಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದರೂ ಸಂಸ್ಥೆಯು ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶಿಸಲು ಆಗುವುದಿಲ್ಲ. ಪೊಲೀಸರು ಇವರನ್ನು ಶಂಕಿತರು ಎನ್ನುತ್ತಿದ್ದಾರೆಯೇ ಹೊರತು, ಆರೋಪಿಗಳು ಎನ್ನುತ್ತಿಲ್ಲ. ಇದೊಂದು ವ್ಯರ್ಥ ಕಾಲಹರಣ’ ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸಂಪಾದಕ ಆರ್ನಬ್ ಗೋಸ್ವಾಮಿಗೆ ಸಿಕ್ತು ಸುಪ್ರೀಂ ಜಾಮೀನು!

ಇದನ್ನೂ ಓದಿ: TRP ಹಗರಣದಲ್ಲಿ ಅರ್ನಬ್​ ಗೋಸ್ವಾಮಿ ಶಾಮೀಲು.. ಮೊಟ್ಟಮೊದಲ ಬಾರಿಗೆ ಅರ್ನಬ್​ ಹೆಸರು ಪ್ರಸ್ತಾಪಿಸಿದ ಮುಂಬೈ ಪೊಲೀಸರು

Published On - 11:29 pm, Mon, 22 March 21