Statue of Equality: ಇಂದಿನಿಂದಲೇ ಚಾತುರ್ಮಾಸ ಕಾರ್ಯಕ್ರಮ ಆರಂಭವಾಗಲಿದೆ -ತ್ರಿದಂಡಿ ಚಿನ್ನಜೀಯರ್ ಶ್ರೀ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಇಂದಿನಿಂದಲೇ ಚಾತುರ್ಮಾಸ ಕಾರ್ಯಕ್ರಮ ಆರಂಭವಾಗಲಿದೆ. ಫೆಬ್ರವರಿಯಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತೆ. ಇಂದಿನಿಂದ ಮಚ್ಚಿಂತಲ್ ಆಶ್ರಮದಲ್ಲಿ ಚಾತುರ್ಮಾಸ ದೀಕ್ಷೆ ನೀಡಲಾಗುತ್ತೆ ಎಂದರು.

Statue of Equality: ಇಂದಿನಿಂದಲೇ ಚಾತುರ್ಮಾಸ ಕಾರ್ಯಕ್ರಮ ಆರಂಭವಾಗಲಿದೆ -ತ್ರಿದಂಡಿ ಚಿನ್ನಜೀಯರ್ ಶ್ರೀ
ತ್ರಿದಂಡಿ ಚಿನ್ನಜೀಯರ್ ಶ್ರೀ
Edited By:

Updated on: Sep 20, 2021 | 1:38 PM

ಹೈದರಾಬಾದ್: ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮುಚ್ಚಿಂತಲ್ ಸಮೀಪದ ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ಚಿನ್ನಜೀಯರ್‌ ಸ್ವಾಮೀಜಿ ಜೊತೆಗೆ ‘ಮೈ ಹೋಮ್ ಗ್ರೂಪ್’ ಚೇರ್ಮನ್ J.ರಾಮೇಶ್ವರ್ ರಾವ್ ಮಹೋತ್ಸವಕ್ಕೆ ನಡೆದಿರುವ ಸಿದ್ಧತೆ ಬಗ್ಗೆ ವಿವರಣೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಇಂದಿನಿಂದಲೇ ಚಾತುರ್ಮಾಸ ಕಾರ್ಯಕ್ರಮ ಆರಂಭವಾಗಲಿದೆ. ಫೆಬ್ರವರಿಯಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತೆ. ಇಂದಿನಿಂದ ಮಚ್ಚಿಂತಲ್ ಆಶ್ರಮದಲ್ಲಿ ಚಾತುರ್ಮಾಸ ದೀಕ್ಷೆ ನೀಡಲಾಗುತ್ತೆ. ವಿಶ್ವದಲ್ಲಿರುವ ಎಲ್ಲರ ಶ್ರೇಯಸ್ಸಿಗಾಗಿ ಮಹತ್ವದ ಕಾರ್ಯ ಮಾಡುತ್ತಿದ್ದೇವೆ. ರಾಮಾನುಜಾಚಾರ್ಯರು ಅವತರಿಸಿದ 1 ಸಾವಿರ ವರ್ಷವಾಗಿದೆ. ಈ ಸಮಯದಲ್ಲಿ ರಾಮಾನುಜರ ಸಮಾನತೆ ಸಿದ್ಧಾಂತ ತಿಳಿಹೇಳಬೇಕು. ಹೀಗಾಗಿ ಈ ಸಮಯದಲ್ಲಿ ಮಹತ್ತರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ದೇಶದಲ್ಲಿ ಎರಡು ಅಲೆ ಈಗಾಗಲೇ ಬಂದಿದೆ. ಮೂರನೇ ಅಲೆ ಬರುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಮೂರನೇ ಅಲೆ ಬರುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಫೆಬ್ರವರಿಯಲ್ಲಿ 12 ದಿನಗಳ ಕಾಲ ಹೋಮ ಮಾಡಲಾಗುತ್ತೆ. ದೇಶಿ ತಳಿ ಹಸುಗಳ ತುಪ್ಪದಿಂದ ಹೋಮ ಮಾಡಲಾಗುತ್ತದೆ. 5 ಸಾವಿರ ಋಷಿಗಳು ಈ ಹೋಮದಲ್ಲಿ ಭಾಗಿಯಾಗುತ್ತಾರೆ ಎಂದರು.

ಇದನ್ನೂ ಓದಿ: Statue of Equality: ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಬರಲು ಒಪ್ಪಿಗೆ ನೀಡಿದ ಮೋದಿ