ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಇಂದು ಗುರುವಾರ ಬೆಳಗಿನ ಜಾವ ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ಈ ದಾಳಿ ನಡೆದಿದೆ. ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ಕಮಲಾಲಯಂ (Kamalalayam) ಮೇಲೆ ಈ ದಾಳಿ ನಡೆದಿದೆ. ಟಿ. ನಗರ್ ಏರಿಯಾದಲ್ಲಿ (T Nagar) ಈ ಬಿಜೆಪಿ ಕಚೇರಿಯಿದ್ದು, ಘಟನೆಯು ಮುಖ್ಯಮಂತ್ರಿ ಸ್ಟ್ಯಾಲಿನ್ ಅಧಿಕೃತ ಕಚೇರಿಯಿಂದ 2 ಕಿಮೀ ದೂರದಲ್ಲಿದೆ. ANI ಸುದ್ದಿ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ.
15 ವರ್ಷಗಳ ಹಿಂದೆಯೂ ಡಿಎಂಕೆ ಆಡಳಿತದಲ್ಲಿದ್ದಾಗ ಇಂತಹುದೇ ಘಟನೆ ನಡೆದಿತ್ತು:
ಮಧ್ಯರಾತ್ರಿ 1.30 ರ ವೇಳೆ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. 15 ವರ್ಷಗಳ ಹಿಂದೆ ಇದೇ ಡಿಎಂಕೆ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಇದೇ ಕಮಲಾಲಯಂ ಕಚೇರಿ ಮೇಲೆ ಇಂತಹುದೇ ದಾಳಿ ನಡೆದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಕಾರ್ಯಕರ್ತರು ಇಂತಹ ಘಟನೆಗಳಿಂದ ಎದೆಗುಂದುವುದಿಲ್ಲ. ಪೊಲೀಸರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕ ಕರಾಟೆ ತ್ಯಾಗರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
தடயவியல் நிபுணர்கள் வருவதற்கு முன்னர் என்ன அவசரம் @tnpoliceoffl ?@annamalai_k @AmitShah @narendramodi pic.twitter.com/uRkscRddDk
— CTR.Nirmal kumar (@CTR_Nirmalkumar) February 9, 2022
ಮುಂಬೈ ಗೊರೆಗಾವ್ನಲ್ಲಿ ಕಾರಿನಲ್ಲಿ ಯುವತಿಯ ಶವ ಪತ್ತೆ:
ಮುಂಬೈ: ಗೊರೆಗಾವ್ನ ನಿರ್ಜನ ಪ್ರದೇಶದಲ್ಲಿ ಕಾರೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಪೊಲೀಸರು (Mumbai Goregaon Police Station) ಸ್ಥಳಕ್ಕೆ ಹಾಜರಾಗಿದ್ದು, ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಗೊರೆಗಾವ್ನಲ್ಲಿರುವ ರಾಮ ಮಂದಿರ ಸಮೀಪ ರಸ್ತೆಯಲ್ಲಿ ಕಾರು ಪತ್ತೆಯಾಗಿದ್ದು, ಅದರಲ್ಲಿ ಗುರುತು ಸಿಗಲಾರದಷ್ಟು ಕೊಳೆತುಹೋಗಿರುವ ಸ್ಥಿತಿಯಲ್ಲಿ ಈ ಯುವತಿಯ ಶವ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ:
ಅಪ್ಪನ ಜೋತೆ ಪತಿ ಸೇರಿ ಪತ್ನಿಯ ಕೊಲೆ: ಹತ್ಯೆಗೂ ಮುನ್ನ ಬೇಗ ಬನ್ನಿ ಎಂದು ತಾಯಿಗೆ ಕರೆ ಮಾಡಿದ್ದ ಮೃತ ರೇಖಾ
ಇದನ್ನೂ ಓದಿ:
Human Age: ಅರವತ್ತಕ್ಕೆ ಅರಳು ಮರಳು ಎನ್ನುವುದು ಏಕೆ? ಏನಿದು 60ರ ಲೆಕ್ಕಾಚಾರ?
Published On - 6:43 am, Thu, 10 February 22