ರಾಯ್‌ಪುರ: ಛತ್ತೀಸ್‌ಗಢದ ಜಂಜಗಿರ್ ಚಂಪಾ ಜಿಲ್ಲೆಯ ಹಳ್ಳಿಯೊಂದರಲ್ಲಿ 80 ಅಡಿ ಆಳದ ಕೊಳವೆಬಾವಿಯಲ್ಲಿ (Borewell) ಬಿದ್ದ 11 ವರ್ಷದ ಬಾಲಕನನ್ನು ರಕ್ಷಿಸಲು ಶುಕ್ರವಾರ ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸಲಾಗುತ್ತಿದೆ, ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಬಾಲಕನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಜಂಜಗೀರ್ ಚಂಪಾ ಜಿಲ್ಲೆಯ ಮಲ್ಖರೋಡಾ ಡೆವಲಪ್‌ಮೆಂಟ್ ಬ್ಲಾಕ್‌ನ ಪಿಹ್ರಿದ್ ಗ್ರಾಮದಲ್ಲಿನ ರಾಹುಲ್ ಸಾಹು ಎಂಬ ಬಾಲಕ ತನ್ನ ಮನೆಯ ಹಿತ್ತಲಿನಲ್ಲಿದ್ದ ಬೋರ್‌ವೆಲ್‌ಗೆ ಬಿದ್ದಿದ್ದಾನೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಗುವನ್ನು ಹೊರತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಸ್ಥಳದಲ್ಲಿಯೇ ಇವೆ ಎಂದು ಜಾಂಜ್‌ಗೀರ್ ಚಂಪಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ. ಭಾರತೀಯ ಸೇನೆಯ ತಜ್ಞರು ಕೂಡ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ.
ಸುಮಾರು 18 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 50 ಅಡಿ ಆಳದವರೆಗೆ ನೆಲವನ್ನು ಅಗೆಯಲಾಗಿದೆ. ಆದರೂ ಬಾಲಕನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಮೇಲಿನ 60ರಿಂದ 65 ಅಡಿಗಳ ನಂತರ ಸುರಂಗವನ್ನು ಅಗೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
Chhattisgarh | Rescue operation underway to extricate a 10-year-old boy who fell into a borewell in Pihrid village of Janjgir-Champa district. District Collector and SP present at the spot. pic.twitter.com/TBBpVUaxDt
— ANI MP/CG/Rajasthan (@ANI_MP_CG_RJ) June 10, 2022
ಜಿಲ್ಲಾಧಿಕಾರಿ, ಎಸ್ಪಿ, ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ತಂಡಗಳು ಪಿಹ್ರಿದ್ ಗ್ರಾಮದಲ್ಲಿ ಉಪಸ್ಥಿತರಿದ್ದು, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮಗುವನ್ನು ರಕ್ಷಿಸಲು ಪಕ್ಕದಲ್ಲಿ ಸಮಾನಾಂತರ ಹೊಂಡವನ್ನು ಅಗೆಯಲು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದೆ.
ಇದನ್ನೂ ಓದಿ: Viral Video: ಬಾಯಾರಿದ ನಾಯಿಮರಿಗೆ ಬೋರ್‌ವೆಲ್ ಪಂಪ್ ಹೊಡೆದು ನೀರು ಕುಡಿಸಿದ ಬಾಲಕ; ವಿಡಿಯೋ ವೈರಲ್
ಸದ್ಯಕ್ಕೆ ಬೋರ್‌ವೆಲ್‌ಗೆ ಬಿದ್ದಿರುವ ಬಾಲಕ ಜೀವಂತವಾಗಿದ್ದು, ಆತನನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪೈಪ್ ಮೂಲಕ ಬಾಲಕನಿಗೆ ಬೋರ್‌ವೆಲ್ ಒಳಗೆ ಆಮ್ಲಜನಕವನ್ನು ಒದಗಿಸಲಾಗುತ್ತಿದೆ. ರಾಹುಲ್ ಜೋರಾಗಿ ಅಳುತ್ತಿರುವ ಶಬ್ದ ಕೇಳಿದ ಕುಟುಂಬಸ್ಥರು ಬೋರ್‌ವೆಲ್‌ನಲ್ಲಿ ಆತ ಬಿದ್ದಿರುವ ಬಗ್ಗೆ ಸುತ್ತಮುತ್ತಲಿನ ಮನೆಯವರಿಗೆ ಮಾಹಿತಿ ನೀಡಿ, ಆತನನ್ನು ಮೇಲೆತ್ತಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗದಿದ್ದಾಗ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯ ಆರಂಭಿಸಲಾಗಿದೆ.
कल शाम से लगातार रेस्क्यू ऑपरेशन जारी है।
जानकारी के मुताबिक अभी 5-6 घंटे का वक्त हमें राहुल तक पहुँचने में लग सकता है।
बच्चे को केला और जूस पहुंचाया गया है और परिजन से भी आवाज के माध्यम से बात कराई जा रही है, ताकि उसका मनोबल बना रहे।
हम सब उसकी कुशलता की प्रार्थना करते हैं। pic.twitter.com/xUD2o93XJH
— Bhupesh Baghel (@bhupeshbaghel) June 11, 2022
ನಿನ್ನೆ ಸಂಜೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಾಹಿತಿ ಪ್ರಕಾರ ನಾವು ರಾಹುಲ್ ಅನ್ನು ತಲುಪಲು 5-6 ಗಂಟೆ ಬೇಕಾಗಬಹುದು. ಬಾಳೆಹಣ್ಣು ಮತ್ತು ಜ್ಯೂಸ್ ಅನ್ನು ಮಗುವಿಗೆ ತಲುಪಿಸಲಾಗಿದ್ದು, ಆತನ ಯೋಗಕ್ಷೇಮಕ್ಕಾಗಿ ನಾವೆಲ್ಲರೂ ಪ್ರಾರ್ಥಿಸುತ್ತೇವೆ ಎಂದು ಸಿಎಂ ಬಘೇಲ್ ಇಂದು ಟ್ವೀಟ್ ಮಾಡಿದ್ದಾರೆ.
“ನಾನು ರಾಹುಲ್ ಅವರ ಪೋಷಕರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದೇನೆ. ಅವರ ಮನಸ್ಥಿತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಮಗು ಬೋರ್‌ವೆಲ್‌ಗೆ ಬಿದ್ದಿರುವುದರಿಂದ ನಮಗೂ ದುಃಖವಾಗಿದೆ. ಅವನನ್ನು ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಸಿಎಂ ಬಘೇಲ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Sat, 11 June 22