Mumbai: ರೈಲಿಗೆ ಮೈಯೊಡ್ಡಿ ಮುಖ್ಯ ಲೋಕೋ ಪೈಲಟ್ ಸಾವು

Chief Loco Pilot Jumps Before Train: ಮುಂಬೈನ ವಿಲೆ ಪಾರ್ಲೆ ಸ್ಟೇಷನ್ ಬಳಿ ಈ ಘಟನೆ ಜನವರಿ 26ರಂದು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಸ್ಟೇಷನ್ ಬಳಿ ಲೋಕನ್ ಟ್ರೈನ್ ಬರುತ್ತಿದ್ದಾಗ ರಾಕೇಶ್ ಕುಮಾರ್ ರೈಲು ಹಳಿಯ ಮೇಲೆ ಮಲಗಿ ಸಾವನ್ನಪ್ಪಿದ್ದಾರೆ. ಈ ದೃಶ್ಯವು ರೈಲ್ವೆ ಸ್ಟೇಷನ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Mumbai: ರೈಲಿಗೆ ಮೈಯೊಡ್ಡಿ ಮುಖ್ಯ ಲೋಕೋ ಪೈಲಟ್ ಸಾವು
ರೈಲು
Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 01, 2023 | 7:50 AM

ಮುಂಬೈ: ವೆಸ್ಟರ್ನ್ ರೈಲ್ವೇಸ್​ನ ಮುಖ್ಯ ಲೋಕೋ ಇನ್ಸ್​ಪೆಕ್ಟರ್ (Chief Loco Inspector) ಆಗಿದ್ದ 57 ವರ್ಷದ ವ್ಯಕ್ತಿಯೊಬ್ಬರು ರೈಲಿಗೆ ಮೈಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಕೇಶ್ ಕುಮಾರ್ ಗೌಡ್ ಸಾವನಪ್ಪಿದ ಲೋಕೋ ಪೈಲಟ್.

ಮುಂಬೈನ ವಿಲೆ ಪಾರ್ಲೆ ಸ್ಟೇಷನ್ ಬಳಿ ಈ ಘಟನೆ ಜನವರಿ 26ರಂದು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಸ್ಟೇಷನ್ ಬಳಿ ಲೋಕನ್ ಟ್ರೈನ್ ಬರುತ್ತಿದ್ದಾಗ ರಾಕೇಶ್ ಕುಮಾರ್ ರೈಲು ಹಳಿಯ ಮೇಲೆ ಜಿಗಿದು ರೈಲಿಗೆ ಅಡ್ಡವಾಗಿ ಸಾವನ್ನಪ್ಪಿದ್ದಾರೆ. ಈ ದೃಶ್ಯವು ರೈಲ್ವೆ ಸ್ಟೇಷನ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ವಿಮಾನ ಪ್ರಯಾಣದ ನಡುವೆ ಸಿಗರೇಟ್ ಸೇದಿದ್ದ ಕೇರಳದ ವ್ಯಕ್ತಿಯ ಬಂಧನ

ರಾಕೇಶ್ ಕುಮಾರ್ ಗೌಡ್ ಅವರ ಈ ಆತ್ಮಹತ್ಯೆಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಅವರಿಗೆ ಕೌಟುಂಬಿಕ ಸಮಸ್ಯೆಗಳಿರಲಿಲ್ಲ, ಕೆಲಸದ ಸ್ಥಳದಲ್ಲೂ ಒತ್ತಡಗಳಿರಲಿಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ರಾಕೇಶ್ ಕುಮಾರ್ ಅವರು ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಲೆ ಪಾರ್ಲೆ ಸ್ಟೇಷನ್ ಸೇರಿದಂತೆ ವಿವಿಧೆಡೆಯಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ.