ಅರುಣಾಚಲ ಪ್ರದೇಶದ ಸ್ಥಳಗಳಿಗಾಗಿ 30 ಹೆಸರುಗಳನ್ನು ಬಿಡುಗಡೆ ಮಾಡಿದ ಚೀನಾ

|

Updated on: Apr 01, 2024 | 1:56 PM

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿನ ಆರು ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಪಟ್ಟಿಯನ್ನು 2017 ರಲ್ಲಿ ಬಿಡುಗಡೆ ಮಾಡಿತು. ಆಮೇಲೆ 15 ಸ್ಥಳಗಳ ಎರಡನೇ ಪಟ್ಟಿಯನ್ನು 2021 ರಲ್ಲಿ ನೀಡಲಾಯಿತು. ನಂತರ 2023 ರಲ್ಲಿ 11 ಸ್ಥಳಗಳಿಗೆ ಹೆಸರುಗಳೊಂದಿಗೆ ಮತ್ತೊಂದು ಪಟ್ಟಿಯನ್ನು ನೀಡಿತ್ತು. ಆದಾಗ್ಯೂ ಚೀನಾದ ಈ ಕ್ರಮಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ.

ಅರುಣಾಚಲ ಪ್ರದೇಶದ ಸ್ಥಳಗಳಿಗಾಗಿ 30 ಹೆಸರುಗಳನ್ನು ಬಿಡುಗಡೆ ಮಾಡಿದ ಚೀನಾ
ಅರುಣಾಚಲ ಪ್ರದೇಶ
Image Credit source: The Wire
Follow us on

ದೆಹಲಿ ಏಪ್ರಿಲ್ 01: ಭಾರತದ ರಾಜ್ಯದ ಮೇಲಿನ ತನ್ನ ಹಕ್ಕನ್ನು ಮತ್ತೊಮ್ಮೆ ಒತ್ತಿಹೇಳಲು ಬೀಜಿಂಗ್ (Beijing) ಇತ್ತೀಚಿನ ವಾರಗಳಲ್ಲಿ ಹೆಚ್ಚಿದ ಸಮರ್ಥನೆಗಳ ಮಧ್ಯೆ ಅರುಣಾಚಲ ಪ್ರದೇಶದ (Arunachal Pradesh) ವಿವಿಧ ಸ್ಥಳಗಳ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳಿಗೆ ಚೀನಾ (China)  ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸಿದ್ದು, ಪ್ರಸ್ತುತ ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸುತ್ತದೆ. ಹೀಗೆ ಹೊಸ ಹೆಸರುಗಳನ್ನಿಡುವುದರಿಂದಈ ವಾಸ್ತವತೆಯನ್ನು ಬದಲಾಗುವುದಿಲ್ಲ ಎಂದು ಭಾರತ ಹೇಳಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಟಿಬೆಟ್‌ನ ಭಾಗವೆಂದು ಬೀಜಿಂಗ್ ಹೇಳಿಕೊಳ್ಳುವ ಅರುಣಾಚಲ ಪ್ರದೇಶದ ಚೀನೀ ಹೆಸರು ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಭಾನುವಾರ ವರದಿ ಮಾಡಿದೆ.

ಸಚಿವಾಲಯದ ಅಧಿಕೃತ ವೆಬ್‌ಸೈಟ್ ಈ ಪ್ರದೇಶಕ್ಕೆ 30 ಹೆಚ್ಚುವರಿ ಹೆಸರುಗಳನ್ನು ಪೋಸ್ಟ್ ಮಾಡಿದೆ.  ಮೇ 1 ರಿಂದ ಜಾರಿಗೆ ಬರಲಿರುವ ಅನುಷ್ಠಾನ ಕ್ರಮಗಳು ಅನುಚ್ಛೇದ 13 ರಲ್ಲಿ “ಚೀನಾದ ಪ್ರಾದೇಶಿಕ ಹಕ್ಕುಗಳು ಮತ್ತು ಸಾರ್ವಭೌಮತ್ವದ ಹಕ್ಕುಗಳಿಗೆ ಹಾನಿಯುಂಟುಮಾಡುವ ವಿದೇಶಿ ಭಾಷೆಗಳಲ್ಲಿ ಸ್ಥಳನಾಮಗಳನ್ನು ನೇರವಾಗಿ ಉಲ್ಲೇಖಿಸಬಾರದು ಅಥವಾ ಅನುಮತಿಯಿಲ್ಲದೆ ಅನುವಾದಿಸಬಾರದು” ಎಂದು ವರದಿ ಹೇಳಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿನ ಆರು ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಪಟ್ಟಿಯನ್ನು 2017 ರಲ್ಲಿ ಬಿಡುಗಡೆ ಮಾಡಿತು. ಆಮೇಲೆ 15 ಸ್ಥಳಗಳ ಎರಡನೇ ಪಟ್ಟಿಯನ್ನು 2021 ರಲ್ಲಿ ನೀಡಲಾಯಿತು. ನಂತರ 2023 ರಲ್ಲಿ 11 ಸ್ಥಳಗಳಿಗೆ ಹೆಸರುಗಳೊಂದಿಗೆ ಮತ್ತೊಂದು ಪಟ್ಟಿಯನ್ನು ನೀಡಿತ್ತು.

ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೇಲಾ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಬೀಜಿಂಗ್ ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ಮಾಡಿತ್ತು.  ಈ ಸುರಂಗವು ಆಯಕಟ್ಟಿನ ಸ್ಥಳದಲ್ಲಿರುವ ತವಾಂಗ್‌ಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಗಡಿ ಪ್ರದೇಶದ ಉದ್ದಕ್ಕೂ ಸೈನ್ಯದ ಉತ್ತಮ ಚಲನೆಯನ್ನು ಖಚಿತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು ಈ ಪ್ರದೇಶದ ಮೇಲೆ ಚೀನಾದ ಹಕ್ಕುಗಳನ್ನು ಎತ್ತಿ ತೋರಿಸಲು ಹಲವು ಹೇಳಿಕೆಗಳನ್ನು ನೀಡಿವೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾರ್ಚ್ 23 ರಂದು ಅರುಣಾಚಲ ಪ್ರದೇಶದ ಮೇಲೆ ಚೀನಾದ ಪುನರಾವರ್ತಿತ ಹಕ್ಕುಗಳನ್ನು “ಹಾಸ್ಯಾಸ್ಪದ” ಎಂದು ತಳ್ಳಿಹಾಕಿದ್ದು ಗಡಿರಾಜ್ಯವು “ಭಾರತದ ನೈಸರ್ಗಿಕ ಭಾಗವಾಗಿದೆ” ಎಂದಿದ್ದಾರೆ.

“ಇದು ಹೊಸ ವಿಚಾರವಲ್ಲ. ಅಂದರೆ, ಚೀನಾ ಹಕ್ಕು ಸಾಧಿಸಿದೆ, ಅದು ತನ್ನ ಹಕ್ಕನ್ನು ವಿಸ್ತರಿಸಿದೆ. ಈ ಹೇಳಿಕೆಗಳು ಇಂದು ಹಾಸ್ಯಾಸ್ಪದ. ನಾವು ಈ ಬಗ್ಗೆ ಬಹಳ ಸ್ಪಷ್ಟವಾಗಿ, ಸ್ಥಿರವಾಗಿರುತ್ತೇವೆ ಎಂದು ನಾನು ಭಾವಿಸುತ್ತೇನೆ.ಇದು ನಡೆಯುತ್ತಿರುವ ಗಡಿ ಚರ್ಚೆಗಳ ಭಾಗವಾಗಿದೆ ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಎಂದು ಜೈಶಂಕರ್ ಹೇಳಿದ್ದಾರೆ.

ಇದನ್ನೂ ಓದಿ: RBI: 90ನೇ ಸಂಸ್ಥಾಪನಾ ದಿನ: ಐತಿಹಾಸಕ್ಕೆ ಹಂತಕ್ಕೆ ಆರ್​ಬಿಐ ಪ್ರವೇಶ ಎಂದ ಪ್ರಧಾನಿ ಮೋದಿ

ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿ ಗುರುತಿಸುವ ಅಮೆರಿಕದ ಹೇಳಿಕೆಯ ಬಗ್ಗೆ ಬೀಜಿಂಗ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.
“ಅರುಣಾಚಲ ಪ್ರದೇಶವನ್ನು ಯುಎಸ್ ಭಾರತೀಯ ಭೂಪ್ರದೇಶವೆಂದು ಗುರುತಿಸುತ್ತದೆ. ಆಕ್ರಮಣಗಳು ಅಥವಾ ಅತಿಕ್ರಮಣಗಳು, ಮಿಲಿಟರಿ ಅಥವಾ ನಾಗರಿಕರ ಮೂಲಕ ನಿಜವಾದ ನಿಯಂತ್ರಣ ರೇಖೆಯಾದ್ಯಂತ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಮಾರ್ಚ್ 9 ರಂದು ಹೇಳಿದ್ದಾರೆ.  ಚೀನಾ-ಭಾರತ ಗಡಿ ಸಮಸ್ಯೆ ಉಭಯ ದೇಶಗಳ ನಡುವಿನ ವಿಷಯವಾಗಿದೆ. ಇದರಲ್ಲಿ ಅಮೆರಿಕಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಚೀನಾದ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳು ಯುಎಸ್ ಹೇಳಿಕೆಯನ್ನು ಟೀಕಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ