AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟ್ ಬಗ್ಗೆ ಮೋದಿ ಶ್ಲಾಘನೆ; ಅತಿಥಿಗಳು ಚಪ್ಪಾಳೆ ತಟ್ಟುತ್ತಿರುವಾಗ ವಿನೀತರಾಗಿ ಕೈ ಮುಗಿದ ಸಿಜೆಐ ಚಂದ್ರಚೂಡ್

ನಾನು ಸುಪ್ರೀಂಕೋರ್ಟ್‌ಗೂ ಧನ್ಯವಾದ ಹೇಳುತ್ತೇನೆ. ತೀರ್ಪುಗಳ ಕಾರ್ಯಕಾರಿ ಭಾಗವು ಮಾತೃಭಾಷೆಯಲ್ಲಿ ಇರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಾತೃಭಾಷೆಯ ಮಹತ್ವ ಹೆಚ್ಚುತ್ತಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದಾರೆ. ಹೀಗೆ ಹೇಳುವಾಗ ಇತರ ಅತಿಥಿಗಳು ಚಪ್ಪಾಳೆ ತಟ್ಟಿದರೆ, ಅತಿಥಿಗಳ ನಡುವೆ ಇದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ವಿನೀತರಾಗಿ ಕೈಮುಗಿದುಕೊಂಡಿದ್ದು ಕಂಡು ಬಂತು.

ಸುಪ್ರೀಂಕೋರ್ಟ್ ಬಗ್ಗೆ ಮೋದಿ ಶ್ಲಾಘನೆ; ಅತಿಥಿಗಳು ಚಪ್ಪಾಳೆ ತಟ್ಟುತ್ತಿರುವಾಗ ವಿನೀತರಾಗಿ ಕೈ ಮುಗಿದ ಸಿಜೆಐ ಚಂದ್ರಚೂಡ್
ಡಿವೈ ಚಂದ್ರಚೂಡ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Aug 15, 2023 | 2:30 PM

Share

ದೆಹಲಿ ಆಗಸ್ಟ್ 15:  ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಐತಿಹಾಸಿಕ ಕೆಂಪು ಕೋಟೆಯಲ್ಲಿ ಮಾಡಿದ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ (Independence Day speech) ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ನೀಡಲು ಸುಪ್ರೀಂಕೋರ್ಟ್‌ನ(Supreme Court) ಇತ್ತೀಚಿನ ನಡೆಯನ್ನು ಉಲ್ಲೇಖಿಸಿದ ಪ್ರಧಾನಿ, ಮಾತೃಭಾಷೆಯ ಮಹತ್ವ ಹೆಚ್ಚುತ್ತಿದೆ ಎಂದು ಹೇಳಿದರು.

ನಾನು ಸುಪ್ರೀಂಕೋರ್ಟ್‌ಗೂ ಧನ್ಯವಾದ ಹೇಳುತ್ತೇನೆ. ತೀರ್ಪುಗಳ ಕಾರ್ಯಕಾರಿ ಭಾಗವು ಮಾತೃಭಾಷೆಯಲ್ಲಿ ಇರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಾತೃಭಾಷೆಯ ಮಹತ್ವ ಹೆಚ್ಚುತ್ತಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದಾರೆ. ಹೀಗೆ ಹೇಳುವಾಗ ಇತರ ಅತಿಥಿಗಳು ಚಪ್ಪಾಳೆ ತಟ್ಟಿದರೆ, ಅತಿಥಿಗಳ ನಡುವೆ ಇದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ವಿನೀತರಾಗಿ ಕೈಮುಗಿದುಕೊಂಡಿದ್ದು ಕಂಡು ಬಂತು.

ನ್ಯಾಯಾಲಯಗಳು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ನೀಡುವ ಅಗತ್ಯವನ್ನು ಸಿಜೆಐ ಚಂದ್ರಚೂಡ್ ಒತ್ತಿ ಹೇಳಿದರು. ಜನವರಿಯಲ್ಲಿ, ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳನ್ನು ಹಿಂದಿ, ತಮಿಳು, ಗುಜರಾತಿ ಮತ್ತು ಒಡಿಯಾ ಎಂಬ ನಾಲ್ಕು ಭಾಷೆಗಳಿಗೆ ಅನುವಾದಿಸಲಾಗುವುದು ಎಂದು ಸಿಜೆಐ ಘೋಷಿಸಿದರು, ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪುಗಳ ಅನುವಾದವು ನಾಗರಿಕರಿಗೆ ನ್ಯಾಯದ ಪ್ರವೇಶಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದರು.

ನಾವು ಇತ್ತೀಚೆಗೆ ಅಳವಡಿಸಿಕೊಂಡಿರುವ ಒಂದು ಪ್ರಮುಖ ಉಪಕ್ರಮವೆಂದರೆ ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸುವುದು. ಏಕೆಂದರೆ ನಾವು ಬಳಸುವ ಇಂಗ್ಲಿಷ್ ಭಾಷೆಯು 99.9% ನಷ್ಟು ನಾಗರಿಕರಿಗೆ ಗ್ರಹಿಸಲಾಗದ ಭಾಷೆಯಾಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದರು ಸಿಜೆಐ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಚಂದ್ರಚೂಡ್ ಅವರು “ಮುಂದಿನ ಹೆಜ್ಜೆ… ಸುಪ್ರೀಂ ಕೋರ್ಟ್‌ನ ತೀರ್ಪುಗಳ ಅನುವಾದಿತ ಪ್ರತಿಗಳನ್ನು ಪ್ರತಿ ಭಾರತೀಯ ಭಾಷೆಯಲ್ಲಿ ಒದಗಿಸುವುದು” ಎಂದು ಹೇಳಿದ್ದು, ನ್ಯಾಯಾಲಯಗಳು ಭಾರತದಾದ್ಯಂತ ನಾಗರಿಕರನ್ನು ತಲುಪಲು ಸಹಾಯ ಮಾಡಲು ತಂತ್ರಜ್ಞಾನದ ಬಳಕೆಯನ್ನು ಒತ್ತಿ ಹೇಳಿದ್ದರು.

ಇದನ್ನೂ ಓದಿ: Independence Day 2023: ಕೆಂಪುಕೋಟೆಯಲ್ಲಿ ಭಾಯಿಯೋ ಔರ್ ಬೆಹೆನೋ ಬಿಟ್ಟು ಬೇರೆ ಪದ ಬಳಸಿ ಭಾಷಣ ಆರಂಭಿಸಿದ ಮೋದಿ

ಈ”ಶ್ಲಾಘನೀಯ” ಸಲಹೆಗಾಗಿ ಪ್ರಧಾನಿ ಮೋದಿ ಅವರು ಸಿಜೆಐ ಅವರನ್ನು ಹೊಗಳಿದ್ದರು. ಇತ್ತೀಚಿನ ಸಮಾರಂಭವೊಂದರಲ್ಲಿ, ಗೌರವಾನ್ವಿತ ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪುಗಳು ಲಭ್ಯವಾಗುವಂತೆ ಕೆಲಸ ಮಾಡುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಅದಕ್ಕೆ ತಂತ್ರಜ್ಞಾನವನ್ನೂ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಇದು ಶ್ಲಾಘನೀಯ ಚಿಂತನೆಯಾಗಿದೆ, ಇದು ಅನೇಕ ಜನರಿಗೆ, ವಿಶೇಷವಾಗಿ ಯುವಕರಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಸಿಜೆಐ ಭಾಷಣದ ವಿಡಿಯೊದ ತುಣಕನ್ನು ಟ್ವೀಟ್ ಮಾಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:26 pm, Tue, 15 August 23

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ