Video: ಅಲಂಕರಿಸಿದ ಎತ್ತಿನಗಾಡಿಯಲ್ಲಿ ಹುಟ್ಟೂರು ಪ್ರವೇಶಿಸಿದ ಸಿಜೆಐ ಎನ್.ವಿ.ರಮಣ; ಹೂಮಳೆ ಸುರಿದ ಗ್ರಾಮಸ್ಥರು
ಸಿಜೆಐ ಎನ್.ವಿ.ರಮಣ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಹಳ್ಳಿಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಅವರ ಬೆಂಗಾವಲು ವಾಹನಗಳು ಗ್ರಾಮದ ಗಡಿ ಭಾಗ ತಲುಪುವ ಮೊದಲೇ, ಹಳ್ಳಿಯ ಜನರು, ಸ್ಥಳೀಯ ಅಧಿಕಾರಿಗಳು, ಜಿಲ್ಲಾಧಿಕಾರಿ ಎಲ್ಲರೂ ಅಲ್ಲಿ ಒಟ್ಟುಗೂಡಿದ್ದರು.
ಏಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಹುದ್ದೆಗೆ ಏರಿದ ಬಳಿಕ ಎನ್.ವಿ.ರಮಣ (Supreme Court CJI NV Ramana) ನಿನ್ನೆ ಮೊದಲ ಬಾರಿಗೆ ತಮ್ಮ ಹುಟ್ಟೂರಾದ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿರುವ ಪೊನ್ನಾವರಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ಭೇಟಿ ನೀಡಿದ ಸಿಜೆಐ ಎನ್.ವಿ.ರಮಣ (CJI Ramana) ಮತ್ತು ಅವರ ಅವರಿಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಹೊರವಲಯದಿಂದ ಗ್ರಾಮದೊಳಗೆ ಹೋಗಲು ಅವರು ಎತ್ತಿನಗಾಡಿಯನ್ನು ಬಳಸಿದ್ದು ವಿಶೇಷ. ಗ್ರಾಮದ ಹೊರವಲಯಕ್ಕೆ ಸಿಜೆಐ ದಂಪತಿ ತಲುಪುತ್ತಿದ್ದಂತೆ ಅಲ್ಲಿ, ಗ್ರಾಮಸ್ಥರು ಮತ್ತು ಕೃಷ್ಣಾ ಜಿಲ್ಲೆಯ ಜಿಲ್ಲಾಧಿಕಾರಿ ಅವರನ್ನು ಸ್ವಾಗತಿಸಿದರು. ಬಳಿಕ ಸಿಜೆಐ ಮತ್ತು ಅವರ ಪತ್ನಿ ಸ್ಥಳೀಯ ದೇಗುಲವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹೂವುಗಳಿಂದ ಶೃಂಗರಿಸಲಾದ ಎತ್ತಿನಗಾಡಿ(Bullock Cart)ಯಲ್ಲಿ ಅವರನ್ನು ಹಳ್ಳಿಯೊಳಕ್ಕೆ ಕರೆದೊಯ್ಯಲಾಯಿತು. ಅದರ ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗುತ್ತಿವೆ.
Chief Justice of India NV Ramana takes bullock cart ride during a visit to native village Ponnavaram in Krishna district of Andhra Pradesh#NVRamana #CJIRamana pic.twitter.com/PDN4RZyyQ2
— Priya Jaiswal (@jaiswalpriyaa) December 24, 2021
ಸಿಜೆಐ ಎನ್.ವಿ.ರಮಣ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಹಳ್ಳಿಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಅವರ ಬೆಂಗಾವಲು ವಾಹನಗಳು ಗ್ರಾಮದ ಗಡಿ ಭಾಗ ತಲುಪುವ ಮೊದಲೇ, ಹಳ್ಳಿಯ ಜನರು, ಸ್ಥಳೀಯ ಅಧಿಕಾರಿಗಳು, ಜಿಲ್ಲಾಧಿಕಾರಿ ಎಲ್ಲರೂ ಅಲ್ಲಿ ಒಟ್ಟುಗೂಡಿದ್ದರು. ಜಾನಪದ ಕಲಾವಿದರು ಸಾಂಪ್ರದಾಯಿಕ ಸಂಗೀತ ಉಪಕರಣಗಳನ್ನು ನುಡಿಸುತ್ತಿದ್ದರು ಹಾಗೇ, ಅಲ್ಲಿ ಕಲಾವಿದರಿಂದ ಜಾನಪದ ನೃತ್ಯವೂ ನಡೆಯುತ್ತಿತ್ತು. ನ್ಯಾಯಾಂಗದಲ್ಲಿ ಉನ್ನತ ಹುದ್ದೆಗೆ ಏರಿರುವ ತಮ್ಮ ಮಣ್ಣಿನ ಮಗನನ್ನು ಅತ್ಯಂತ ಗೌರವ ಪೂರ್ವಕವಾಗಿ ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಅದಕ್ಕೂ ಮೊದಲು ಗರಿಕ್ಪಾಡು ಚೆಕ್ಪೋಸ್ಟ್ ಬಳಿ ಸಿಜೆಐ ರಮಣ ಅವರಿಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ರಾಜಕೀಯ ಪ್ರತಿನಿಧಿಗಳು, ಮುಖಂಡರು ಆತ್ಮೀಯ ಸ್ವಾಗತ ಕೋರಿದ್ದರು.
ಸಿಜೆಐ ಎನ್.ವಿ.ರಮಣ ಸುಮಾರು 4 ತಾಸುಗಳ ಕಾಲ ತಮ್ಮ ಹುಟ್ಟೂರಲ್ಲಿ ಕಾಲ ಕಳೆದು ನಂತರ ವಿಜಯವಾಡಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆ ವಿಜಯವಾಡದ ಕನಕದುರ್ಗಾ ದೇವಾಲಯಕ್ಕೆ ಅವರು ಭೇಟಿ ನೀಡಲಿದ್ದಾರೆ. ಹಾಗೇ, ಇಂದು ಸಂಜೆ ರಾಜ್ಯ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವರು. ವಿಜಯವಾಡಾದ ರೋಟರಿ ಕ್ಲಬ್ ಸಿಜೆಐ ರಮಣ ಅವರನ್ನು ಸನ್ಮಾನಿಸಲಿದ್ದು, ಜೀವಮಾನ ಸಾಧನೆ ಪುರಸ್ಕಾರ ನೀಡಲಿದೆ. ಡಿ.18ರಂದು ದೇಶದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಇಂದು ಹೈದರಾಬಾದ್ನಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮುರ್ತಿ ಎನ್.ವಿ.ರಮಣ ಉದ್ಘಾಟಿಸಿದ್ದಾರೆ. ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್, ನ್ಯಾಯಮೂರ್ತಿ ಎಲ್.ನಾಗೇಶ್ವರ್ರಾವ್ ಕೂಡ ಇದ್ದರು.
ಇದನ್ನೂ ಓದಿ: Rajeev Taranath : ಅಭಿಜ್ಞಾನ ‘ಇಪ್ಪತ್ತೆರಡರ ವಯಸ್ಸಿನಲ್ಲಿ ಸಂಗೀತ? ನೀ ಅಧಿಕಾರಿಯೋ, ಪ್ರೊಫೆಸರೋ ಆಗಬಹುದು
Published On - 11:21 am, Sat, 25 December 21