ಚೌಕಾಬಾರಾ (chowka bara game) ಎಂಬುದು ಅತ್ಯಂತ ಪುರಾತನ ಆಟ, ಅದು ಯಾವಾಗ ಶುರುವಾಯಿತು ಎಂಬುದು ನಿಖರವಾಗಿ ತಿಳಿಯದು. ಆದರೆ ಈ ಆಟ ಇಂದಿಗೂ ಆಟ ಆಡುವುವವರಿಂದ ಹಿಡಿದು, ಆಟ ನೋಡುವವರಲ್ಲೂ ಒಂದು ರೀತಿಯ ಹವಾ ಎಬ್ಬಿಸುತ್ತದೆ. ಆದರೆ ಅದು ಘರ್ಷಣೆಯ (Clash) ಮಟ್ಟಕ್ಕೆ ಹೋಗುತ್ತದೆ, ಅದರಲ್ಲೂ ಸಹ ಆಟಗಾರನನ್ನೇ ಕೊಲ್ಲುವ ಮಟ್ಟಕ್ಕೆ (Murder) ಹೋಗುತ್ತದೆ ಎಂಬುದು ವಿಪರ್ಯಾಸವೇ ಸರಿ. ವಿಶಾಖಪಟ್ಟಣದಲ್ಲಿ (Visakhapatnam, Andhra Pradesh) ಚೌಕಾಬಾರಾ ಆಡುವ ಸಂದರ್ಭದಲ್ಲಿ ನಾಲ್ವರು ಸ್ನೇಹಿತರ ನಡುವೆ ಆರಂಭವಾದ ಜಗಳ ಒಬ್ಬರನ್ನು ಉಸಿರುಗಟ್ಟಿಸಿ, ಸಾಯಿಸುವಂತೆ ಮಾಡಿದೆ. ಆಟ ಆರಂಭವಾಗುತ್ತಿದ್ದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಗುಡುಗು ಸಿಡಿಲುಳಂತೆ ಪರಸ್ಪರ ಘರ್ಜಿಸಿದ್ದಾರೆ, ಗುದ್ದಾಡಿಕೊಂಡಿದ್ದಾರೆ. ಗುದ್ದಾಡುವಾಗ ಹಿಂದಕ್ಕೆ ಬಿದ್ದ ವ್ಯಕ್ತಿ ಸಿಮೆಂಟ್ ಗೋಡೆಗೆ ತಲೆ ತಾಕಿಸಿಕೊಂಡಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮದ್ದಿಲಪಾಲೆಂ ಪೀಠಾಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿವರ ಹೀಗಿದೆ. ಪೀಠಾಪುರ ಕಾಲೋನಿ ಗವರಿವೀದಿಯ ಪೇಂಟರ್ ನಾರಾಯಣ ರಾವ್.. ಮದ್ದಿಲಪಾಲೆನಿಯ ರಾಮಬಾಬು ಮತ್ತು ರಮಣ ದಾಸು ಒಳ್ಳೆಯ ಸ್ನೇಹಿತರು. ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾಲ್ವರೂ ಸೇರಿ ಮದ್ದಿಲಪಾಲೆಂ ಬಜಾರ್ ಬಳಿಯ ಸುಲಭ್ ಕಾಂಪ್ಲೆಕ್ಸ್ ತಲುಪಿದ್ದಾರೆ. ಅಲ್ಲಿ ಚೌಕಾಬಾರಾ ಆಟ ಆಡತೊಡಗಿದ್ದಾರೆ.
ಸ್ವಲ್ಪ ಸಮಯದ ನಂತರ ನಾರಾಯಣ ರಾವ್ ರಾಂಬಾಬು ಎಂಬ ನಾಲ್ವರ ನಡುವೆ ಜಗಳ ಶುರುವಾಯಿತು. ಇದರೊಂದಿಗೆ ನಾರಾಯಣರಾವ್ ಚೌಕಾಬಾರಾದಲ್ಲಿ ಉಪಯೋಗಿಸುವ ಕಾಯಿಗಳನ್ನು ಆ ಕಡೆ ಈ ಕಡೆಗೆ ತಳ್ಳಿದ್ದಾನೆ. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಮಬಾಬು, ನಾರಾಯಣ ರಾವ್ ಮೇಲೆ ಹಲ್ಲೆ ನಡೆಸಿದ್ದಾರೆ. ಜತೆಗೆ ಬಲವಾಗಿ ಹಿಂದಕ್ಕೆ ತಳ್ಳಿದ್ದರಿಂದ ನಾರಾಯಣ ರಾವ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆತನ ತಲೆ ಅಲ್ಲಿನ ಸಿಮೆಂಟ್ ಕಟ್ಟೆಗೆ ಬಡಿದಿದೆ. ಕುಸಿದು ಬಿದ್ದು ನಾರಾಯಣ ರಾವ್ ಪ್ರಾಣ ಕಳೆದುಕೊಂಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಎಂವಿಪಿ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ, ಈ ನಾಲ್ವರು ಮದ್ಯದ ಅಮಲಿನಲ್ಲಿದ್ದರು. ಪೀಠಾಪುರ ಕಾಲೋನಿ ಬಜಾರ್‌ನಲ್ಲಿರುವ ಸುಲಭ್ ಕಾಂಪ್ಲೆಕ್ಸ್‌ಗೆ ಆಗಮಿಸಿದರು. ಅಲ್ಲಿ ಆಟ ಶುರುವಾಯಿತು. ಅಲ್ಲಿದ್ದ ಕೇರ್ ಟೇಕರ್ ರಾಮಕೃಷ್ಣ ನಾಲ್ವರನ್ನೂ ಹೊರಡಲು ಹೇಳಿದರು. ಆದರೆ ಅಲ್ಲಿಗೆ ಮತ್ತೆ ಬಂದಿದ್ದಾರೆ. ಆಗಲೂ ರಾಮಕೃಷ್ಣನ ಮೇಲೆ ತಿರುಗಿಬಿದ್ದಿದ್ದಾರೆ. ಒಂದು ಹಂತದಲ್ಲಿ ಆ ನಾಲ್ವರು ರಾಮಕೃಷ್ಣ ಮೇಲೆ ಹಲ್ಲೆಗೆ ಯತ್ನಿಸಿದರು.
ಚೌಕಾಬಾರಾ ಆಟವಾಡಲು ಶುರು ಮಾಡಿದಾಗ ಅಲ್ಲೇ ಇದ್ದ ಸುಲಭ್ ಕಾಂಪ್ಲೆಕ್ಸ್ ನ ಕೇರ್ ಟೇಕರ್ ರಾಮಕೃಷ್ಣ ಅವರನ್ನು ಪ್ರಶ್ನಿಸಿದರು. ಅದಕ್ಕೆ ಕಿವಿಗೊಡದೆ ಆಟ ಆರಂಭಿಸಿ ಜಗಳಕ್ಕಿಳಿದರು. ಆದರೆ.. ಅಲ್ಲಿಗೆ ಬರುವ ಮುನ್ನವೇ ಅವರ ನಡುವೆ ಜಗಳವಾಗಿತ್ತು ಎಂದು ಪ್ರತ್ಯಕ್ಷದರ್ಶಿ ರಾಮಕೃಷ್ಣ ಹೇಳುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ