ಪಶ್ಚಿಮ ಬಂಗಾಳದಲ್ಲಿ ರಾಮನವಮಿಯಂದು ಘರ್ಷಣೆ: ಪರಸ್ಪರ ಆರೋಪ ಮಾಡಿ ವಿಡಿಯೊ ಹಂಚಿಕೊಂಡ ಟಿಎಂಸಿ, ಬಿಜೆಪಿ
ರಾಮನವಮಿ ಮೆರವಣಿಗೆ ಕಾಜಿಪಾರಾ ಪ್ರದೇಶವನ್ನು ದಾಟುತ್ತಿದ್ದಾಗ ಹೌರಾದಲ್ಲಿ ಕೋಮು ಘರ್ಷಣೆ ಸಂಭವಿಸಿದೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವ ಮುನ್ನ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ರಾಮನವಮಿ ರ್ಯಾಲಿ ಸಂದರ್ಭದಲ್ಲಿ ಹಿಂಸಾತ್ಮಕ ಘರ್ಷಣೆಗಳು (Ram Navami Clash) ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ (BJP) ನಡುವೆ ರಾಜಕೀಯ ಜಗಳವನ್ನು ಹುಟ್ಟುಹಾಕಿದೆ. ಘಟನೆಗಳಿಗೆ ಎರಡೂ ಕಡೆಯವರು ಪರಸ್ಪರ ಆರೋಪಿದ್ದು,ತಮ್ಮ ವಾದಗಳನ್ನು ಬೆಂಬಲಿಸಲು ವಿಡಿಯೊ ಹಂಚಿಕೊಂಡಿದ್ದಾರೆ.ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಕೋಲ್ಕತ್ತಾದ ಪಕ್ಕದ ಪ್ರದೇಶಗಳಾದ ಹೌರಾ ಮತ್ತು ಹೂಗ್ಲಿಯಲ್ಲಿ ನಡೆದ ಕೋಮು ಘರ್ಷಣೆ ನಡೆದಿತ್ತು. ಹಿಂಸಾಚಾರದಲ್ಲಿ ಗಾಯಗೊಂಡವರಲ್ಲಿ ಬಿಜೆಪಿ ಶಾಸಕರೂ ಸೇರಿದ್ದಾರೆ. ಪ್ರಸ್ತುತ, ಪ್ರದೇಶಗಳಲ್ಲಿ ಅಹಿತಕರ ಘಟನೆಯನ್ನು ತಪ್ಪಿಸಲು ನಿಷೇಧಾಜ್ಞೆ ಜಾರಿಯಲ್ಲಿದೆ. ಹೌರಾದಲ್ಲಿ ಕೋಮು ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿ, ಅಭಿಷೇಕ್ ಬ್ಯಾನರ್ಜಿ ಶುಕ್ರವಾರ ಧಾರ್ಮಿಕ ಮೆರವಣಿಗೆಯ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯುವಕನೊಬ್ಬ ಬಂದೂಕು ಹಿಡಿದಿದ್ದಾನೆ. ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವಾಗಲಿದೆ ಎಂದು ಉದ್ಘೋಷಕರು ಹೇಳುವ ಮುನ್ನವೇ ಜೈ ಶ್ರೀ ರಾಮ್ ಘೋಷಣೆಗಳು ಹಿನ್ನಲೆಯಲ್ಲಿ ಕೇಳಿ ಬರುತ್ತಿವೆ.
ಸಮುದಾಯಗಳನ್ನು ಪರಸ್ಪರ ಕೆರಳಿಸಿ ಮತ್ತು ಪ್ರಚೋದಿಸಿ, ಹಿಂಸೆಯನ್ನು ಪ್ರಚೋದಿಸಲು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿ, ಉದ್ದೇಶಪೂರ್ವಕವಾಗಿ ಕೋಮುಗಲಭೆ ಸೃಷ್ಟಿಸಿ ರಾಜಕೀಯ ಲಾಭಪಡೆಯುವ ಬಿಜೆಪಿಯ ದಾಂಗಾಬಾಜಿ (ದಂಗೆ ಮಾಡುವುದು) ಸೂತ್ರ ಮತ್ತೆ ಕೆಲಸ ಮಾಡಿದೆ. ಬಿಜೆಪಿಯ ಪ್ಲೇಬುಕ್‌ನಿಂದಲೇ ಕ್ಲಾಸಿಕ್ ಅಪವಿತ್ರ ನೀಲನಕ್ಷೆ! ಎಂದು ಬ್ಯಾನರ್ಜಿ ವಿಡಿಯೊ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
BJP’s DANGABAJI FORMULA at work again:
? Provoke & instigate communities against each other.
? Supply weapons to incite violence.
⚔️Create communal tension deliberately.
??? Reap political benefits.
A classic unholy blueprint right out of the @BJP4India playbook!?? pic.twitter.com/HKZ0BmIlCm
— Abhishek Banerjee (@abhishekaitc) March 31, 2023
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಪೋಸ್ಟ್ ಮಾಡಿದ ವಿಡಿಯೊ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಹೌರಾ ರ್ಯಾಲಿಯದ್ದಲ್ಲ ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: Rahul Gandhi: ಮಾನನಷ್ಟ ಪ್ರಕರಣದ ತೀರ್ಪಿನಲ್ಲಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಲು ರಾಹುಲ್ ಗಾಂಧಿ ಸಿದ್ಧತೆ
ಹೌರಾದಲ್ಲಿ ರಾಮನವಮಿ ಶೋಭಾ ಯಾತ್ರೆಯ ಆಯೋಜಕರಾದ ವಿಎಚ್‌ಪಿ ವಿಡಿಯೊ ಬಿಡುಗಡೆ ಮಾಡಿದ್ದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಪೋಸ್ಟ್ ಮಾಡಿದ ವಿಡಿಯೊ ತಮ್ಮ ಯಾತ್ರೆಯದ್ದಲ್ಲ ಎಂದು ಹೇಳಿದ್ದಾರೆ. ಅವರು ಹಿಂದೂಗಳನ್ನು ನಿಂದಿಸುತ್ತಿದ್ದಾರೆ. ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಬಗ್ಗೆ ತನಿಖೆಯಾಗಬೇಕು. ಇದು ಕ್ರಿಮಿನಲ್ ಅಪರಾಧ ಎಂದು ಬಿಜೆಪಿಯ ಬಂಗಾಳ ಘಟಕ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.
VHP, the organisers of the Ramnavami Shobha Yatra in Howrah, release footage and allege that the video posted by TMC MP Abhishek Banerjee is not from their Yatra. He is maligning Hindus and should be investigated for dividing people on religious lines. It is a criminal offence. https://t.co/sNfWxZF9oE pic.twitter.com/v8YCNzi7QU
— BJP Bengal (@BJP4Bengal) April 3, 2023
ರಾಮನವಮಿ ಮೆರವಣಿಗೆ ಕಾಜಿಪಾರಾ ಪ್ರದೇಶವನ್ನು ದಾಟುತ್ತಿದ್ದಾಗ ಹೌರಾದಲ್ಲಿ ಕೋಮು ಘರ್ಷಣೆ ಸಂಭವಿಸಿದೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವ ಮುನ್ನ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು. ಹಿಂಸಾಚಾರದ ಹಿಂದಿರುವವರನ್ನು ಸುಮ್ಮನೆಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆಡಳಿತಾರೂಢ ತೃಣಮೂಲ ಪಕ್ಷದ ವಿರುದ್ಧ ಬಿಜೆಪಿ ಸಂಪೂರ್ಣ ವಾಗ್ದಾಳಿ ನಡೆಸಿದ್ದು, ರಾಜ್ಯ ಸರ್ಕಾರವು ಹಿಂಸಾಚಾರವನ್ನು ಸಂಘಟಿಸುತ್ತಿದೆ ಮತ್ತು ಮುಸ್ಲಿಮರನ್ನು ಸಮಾಧಾನಪಡಿಸುತ್ತಿದೆ ಎಂದು ಆರೋಪಿಸಿದೆ.
ಸೋಮವಾರ ಮಧ್ಯಾಹ್ನ ದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ, ಬಂಗಾಳದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ. ಮಮತಾ ಬ್ಯಾನರ್ಜಿ ಸರ್ಕಾರವು ಕಲ್ಲು ತೂರಾಟ ನಡೆಸಿದವರನ್ನು ರಕ್ಷಿಸುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ ಒಂದು ದಿನದ ನಂತರ ಇದು ಬಂದಿದೆ. ಹಿಂದೂ ಸಮುದಾಯದ ಮೇಲೆ ಮಮತಾ ಎಷ್ಟು ದಿನ ದಾಳಿ ನಡೆಸುತ್ತಾರೆ ಎಂದು ಸ್ಮೃತಿ ಪ್ರಶ್ನಿಸಿದ್ದಾರೆ.
ಏತನ್ಮಧ್ಯೆ ಹಿಂಸಾಚಾರ ನಡೆದ ಪ್ರದೇಶಕ್ಕೆ ಭೇಟಿ ನೀಡದಂತೆ ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಅವರನ್ನು ತಡೆದಿದ್ದು, ಶಾಂತಿ ಕಾಪಾಡಲು ನಿಷೇಧಾಜ್ಞೆಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ರಾಮನವಮಿ ರ್ಯಾಲಿಯಲ್ಲಿ ನೋಡಿದ ಅನೇಕರು ತೃಣಮೂಲ ಸಂಸದ ಮತ್ತು ಸ್ಥಳೀಯ ನಾಯಕ ಕಲ್ಯಾಣ್ ಬ್ಯಾನರ್ಜಿಯವರಿಗೆ ಹತ್ತಿರದವರು ಎಂದು ತೋರಿಸಲು ಮಜುಂದಾರ್ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದೇ ಮುಖಗಳ ಉಪಸ್ಥಿತಿಯು ಪಿತೂರಿಯ ಪ್ರಶ್ನೆಗಳನ್ನು ಪ್ರೇರೇಪಿಸುತ್ತದೆ ಎಂದು ಅವರು ಬಂಗಾಳಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ