AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Gandhi: ಮಾನನಷ್ಟ ಪ್ರಕರಣದ ತೀರ್ಪಿನಲ್ಲಿ ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಲು ರಾಹುಲ್ ಗಾಂಧಿ ಸಿದ್ಧತೆ

ಮಾನನಷ್ಟ ಮೊಕದ್ದಮೆಯೊಂದರಲ್ಲಿ ದೋಷಿ ಎಂದು ಸಾಬೀತಾದ ಕಾರಣ ಲೋಕಸಭಾ ಸದಸ್ಯತ್ವ ಹಾಗೂ ಸರ್ಕಾರಿ ಬಂಗಲೆಯನ್ನು ಕಳೆದುಕೊಂಡಿರುವ ರಾಹುಲ್ ಗಾಂಧಿ ಇದೀಗ ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

Rahul Gandhi: ಮಾನನಷ್ಟ ಪ್ರಕರಣದ ತೀರ್ಪಿನಲ್ಲಿ ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಲು ರಾಹುಲ್ ಗಾಂಧಿ ಸಿದ್ಧತೆ
ರಾಹುಲ್ ಗಾಂಧಿ
ನಯನಾ ರಾಜೀವ್
|

Updated on:Apr 02, 2023 | 12:04 PM

Share

ಮಾನನಷ್ಟ ಮೊಕದ್ದಮೆಯೊಂದರಲ್ಲಿ ದೋಷಿ ಎಂದು ಸಾಬೀತಾದ ಕಾರಣ ಲೋಕಸಭಾ ಸದಸ್ಯತ್ವ ಹಾಗೂ ಸರ್ಕಾರಿ ಬಂಗಲೆಯನ್ನು ಕಳೆದುಕೊಂಡಿರುವ ರಾಹುಲ್ ಗಾಂಧಿ(Rahul Gandhi) ಇದೀಗ ಗುಜರಾತ್ ಹೈಕೋರ್ಟ್​ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಈ ಪ್ರಕರಣದ ಸಂಬಂಧ ರಾಹುಲ್ ಗಾಂಧಿ ಇದೀಗ  ಮೇಲ್ಮನವಿ ಸಲ್ಲಿಸಲಿದ್ದಾರೆ. ಮಾರ್ಚ್​ 24 ರಂದು ಸೂರತ್ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಇದಾದ ಬಳಿಕ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲಾಗಿತ್ತು.

ಅದೇ ಸಮಯದಲ್ಲಿ 11 ದಿನಗಳ ನಂತರ ರಾಹುಲ್ ಗಾಂಧಿ ಸೂರತ್ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿಯವರ ಕಾನೂನು ತಂಡ ಏಪ್ರಿಲ್​ 3 ರಂದು ಅಂದರೆ ಸೋಮವಾರ ನ್ಯಾಯಾಲಯದ ಮೊರೆ ಹೋಗಲಿದೆ.

ಮತ್ತಷ್ಟು ಓದಿ: ಆರ್‌ಎಸ್‌ಎಸ್ 21ನೇ ಶತಮಾನದ ಕೌರವರು ಎಂಬ ಹೇಳಿಕೆಗಾಗಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ

ಇದೆಲ್ಲದರ ನಡುವೆ ಗುಜರಾತ್ ಕಾಂಗ್ರೆಸ್ ಈ ತಿಂಗಳು ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಸಮಾವೇಶಗಳನ್ನು ಆಯೋಜಿಸುತ್ತಿದೆ ಮತ್ತು ಬಿಜೆಪಿ ವೈಫಲ್ಯಗಳನ್ನು ಎತ್ತಿ ತೋರಿಸಲು ಮುಂದಾಗಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.

ಎರಡು ಹಂತಗಳಲ್ಲಿ ಏಪ್ರಿಲ್ 6 ರಿಂದ 12 ಹಾಗೂ ಏಪ್ರಿಲ್ 15 ರಿಂದ 25ರವರೆಗೆ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ. ರಾಹುಲ್ ಗಾಂಧಿ ಕೊನೆಯದಾಗಿ ಮಾರ್ಚ್​ 23 ರಂದು ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:59 am, Sun, 2 April 23