Video: ತನ್ನ ಶಾಲೆಯ ಶಿಕ್ಷಕಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸ್​ ಅಧಿಕಾರಿ ಬಳಿ ಹಠ ಮಾಡಿದ 2ನೇ ಕ್ಲಾಸ್​ ಹುಡುಗ !

| Updated By: Lakshmi Hegde

Updated on: Mar 06, 2022 | 6:18 PM

ಮಹಾಬುಬಾಬಾದ್​ನ ಬಯ್ಯಾರಾಮ್​ ಎಂಬಲ್ಲಿರುವ ಒಂದು ಶಾಲೆಯಲ್ಲಿ ಓದುತ್ತಿದ್ದ ಈ ಬಾಲಕ. ಕೋಪಗೊಂಡು ಪೊಲೀಸ್ ಠಾಣೆಗೆ ಹೋದ. ಅಲ್ಲಿ ರಮಾ ದೇವಿ ಎಂಬ ಮಹಿಳಾ ಪೊಲೀಸ್ ಅಧಿಕಾರಿ ಇದ್ದವರು, ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಕೇಳಿದ್ದಾರೆ.

Video: ತನ್ನ ಶಾಲೆಯ ಶಿಕ್ಷಕಿಯನ್ನು ಕೂಡಲೇ ಬಂಧಿಸುವಂತೆ ಪೊಲೀಸ್​ ಅಧಿಕಾರಿ ಬಳಿ ಹಠ ಮಾಡಿದ 2ನೇ ಕ್ಲಾಸ್​ ಹುಡುಗ !
ಶಿಕ್ಷಕಿಯನ್ನು ಬಂಧಿಸುವಂತೆ ಪೊಲೀಸರಿಗೆ ಹೇಳಿದ ಬಾಲಕ
Follow us on

ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ತನ್ನ ಶಿಕ್ಷಕಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ಹಾಗಂತ ಇದು ತುಂಬ ಗಂಭೀರ ಪ್ರಕರಣ ಎಂದು ಭಾವಿಸಬೇಕಿಲ್ಲ. ತನಗೆ ಶಿಕ್ಷಕಿ ದೈಹಿಕ ದಂಡನೆ ನೀಡಿದ್ದಕ್ಕೆ ಕೋಪಗೊಂಡ ಪುಟ್ಟ ಬಾಲಕ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಲ್ಲದೆ, ಶಿಕ್ಷಕಿಯನ್ನು ಬಂಧಿಸುವಂತೆ ಕೇಳಿಕೊಂಡಿದ್ದಾನೆ. ಈ ವಿಡಿಯೋ ಕೂಡ ವೈರಲ್​ ಆಗಿದೆ. ಅಂದಹಾಗೇ, ಪುಟ್ಟ ಹುಡುಗನ ಹೆಸರು ಅನಿಲ್​ ನಾಯ್ಕ್​ ಎಂದಾಗಿದ್ದು, ಘಟನೆ ನಡೆದದ್ದು, ತೆಲಂಗಾಣದ ಮಹಾಬುಬಾಬಾದ್​ನಲ್ಲಿ.

ಮಹಾಬುಬಾಬಾದ್​ನ ಬಯ್ಯಾರಾಮ್​ ಎಂಬಲ್ಲಿರುವ ಒಂದು ಶಾಲೆಯಲ್ಲಿ ಓದುತ್ತಿದ್ದ ಈ ಬಾಲಕ. ಕೋಪಗೊಂಡು ಪೊಲೀಸ್ ಠಾಣೆಗೆ ಹೋದ. ಅಲ್ಲಿ ರಮಾ ದೇವಿ ಎಂಬ ಮಹಿಳಾ ಪೊಲೀಸ್ ಅಧಿಕಾರಿ ಇದ್ದವರು, ನೀನ್ಯಾಕೆ ಇಲ್ಲಿಗೆ ಬಂದೆ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅನಿಲ್​, ನನ್ನಗೆ ಶಾಲೆಯಲ್ಲಿ ಟೀಚರ್​ ಹೊಡೆದಿದ್ದಾರೆ. ಅವರನ್ನು ಬಂಧಿಸಿ ಎಂದಿದ್ದಾನೆ. ಆಗ ಪೊಲೀಸ್ ಅಧಿಕಾರಿ, ಶಿಕ್ಷಕಿ ನಿನಗೆ ಯಾಕೆ ಹೊಡೆದರು ಎಂದು ಪ್ರಶ್ನಿಸಿದ್ದಕ್ಕೆ ಮುಗ್ಧವಾಗಿ ನಾನು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲ ಎಂದು ಹೊಡೆದಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಅಷ್ಟಕ್ಕೇ ಬಿಡದ ಮಹಿಳಾ ಪೊಲೀಸ್ ಅಧಿಕಾರಿ, ಶಿಕ್ಷಕಿ ಬೇರೆಯವರಿಗೂ ಹೊಡೆಯುತ್ತಾರಾ? ನಿನಗೊಬ್ಬನಿಗೇ ಹೊಡೆಯುತ್ತಾರಾ ಎಂದು ಕೇಳಿದ್ದಾರೆ. ಆಗ ಉತ್ತರಿಸಿದ ಅನಿಲ್​, ಇಲ್ಲ ಅವರು ನನಗೆ ಮಾತ್ರ ಹೊಡೆಯುತ್ತಾರೆ ಎಂದಿದ್ದಾನೆ.  ಬಳಿಕ ರಮಾದೇವಿಯವರೇ ಆತನನ್ನು ಕರೆದುಕೊಂಡು ಶಾಲೆಗೆ ಹೋಗಲು ಮುಂದಾಗಿದ್ದಾರೆ. ಆದರೆ ಅನಿಲ್​ ಮಾತ್ರ ತಾನು ಶಿಕ್ಷಕಿಯೊಂದಿಗೆ ರಾಜಿಯಾಗುವುದಿಲ್ಲ. ಶಾಲೆಗೆ ಬರುವುದೂ ಇಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ. ಬಳಿಕ ಅವನಿಗೆ ಕೌನ್ಸಿಲಿಂಗ್ ಮಾಡಿ, ಶಾಲೆಗೆ ಕರೆದುಕೊಂಡು ಹೋಗಲಾಯಿತು ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಜೆಪಿ ಯಾವುದೇ ಮುಸಲ್ಮಾನನಿಗೆ ಬೇಕಾದರೂ ದಾವೂದ್ ಇಬ್ರಾಹಿಂ ನಂಟು ಕಲ್ಪಿಸುತ್ತದೆ: ಶರದ್​ ಪವಾರ್​ ಆರೋಪ

Published On - 6:17 pm, Sun, 6 March 22