ಜಮ್ಮು ಕಾಶ್ಮೀರದ ಮೇಘಸ್ಫೋಟದಲ್ಲಿ ಕೊಚ್ಚಿಹೋದ ಮಕ್ಕಳು; ಭಯಾನಕ ವಿಡಿಯೋ ವೈರಲ್
ಜಮ್ಮು ಕಾಶ್ಮೀರದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಮೇಘಸ್ಪೋಟದಿಂದ ಇದುವರೆಗೂ 3 ಜನ ಸಾವನ್ನಪ್ಪಿದ್ದಾರೆ. ಈ ನಡುವೆ ಮೇಘಸ್ಪೋಟ ಉಂಟಾಗಿ, ಪ್ರವಾಹದ ನೀರು ನುಗ್ಗುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ರಾಂಬನ್: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಈ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಮೇಘಸ್ಫೋಟದ ಶಾಕಿಂಗ್ ದೃಶ್ಯಗಳು ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿವೆ. ಅಧಿಕಾರಿಗಳ ಪ್ರಕಾರ, ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ ಕಾಣೆಯಾದ ಜನರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ರಾಂಬನ್ ಜಿಲ್ಲೆಯ ರಾಜ್‌ಗಢ ತಹಶೀಲ್‌ನಲ್ಲಿರುವ ಕುಮಟೆ, ಧ್ರಮನ್ ಮತ್ತು ಹಲ್ಲಾ ಪಂಚಾಯತ್‌ಗಳಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಘಟನೆಯ ದೃಶ್ಯಗಳು ಇಂದು ವೈರಲ್ ಆಗಿವೆ.
Heartbreaking incident in Rajgarh, Jammu and Kashmir, where a cloudburst has caused devastation. Sadly, at least 7 people are reported missing & one body has been recovered so far. Rescue efforts are ongoing. #Rajgarh #Cloudburst #JammuAndKashmir pic.twitter.com/PqKoX4fOIj
— Suresh Singh (@Mr_SureshSingh) August 27, 2024
ಇದನ್ನೂ ಓದಿ: Gujarat Floods: ಗುಜರಾತ್ನಲ್ಲಿ ಭಾರೀ ಮಳೆ; ಪ್ರವಾಹದ ಡ್ರೋನ್ ವಿಡಿಯೋ ಇಲ್ಲಿದೆ
ಟ್ಯಾಂಗರ್ ಮತ್ತು ದಾಡಿ ಹೊಳೆಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಮೂವರ ಸಾವನ್ನು ಅಧಿಕಾರಿಗಳು ಖಚಿತಪಡಿಸಿದ್ದು, ನಾಲ್ವರಿಗೆ ಗಾಯಗಳಾಗಿವೆ. ನಾಪತ್ತೆಯಾದವರಲ್ಲಿ ಅಹ್ಮದ್ ಅವರ ತಾಯಿ ನಸೀಮಾ ಬೇಗಂ ಮತ್ತು 6 ವರ್ಷದ ಸಹೋದರಿ ಶಾಜಿಯಾ ಬಾನೂ ಸೇರಿದ್ದಾರೆ. ಕಾಣೆಯಾದ ಇತರ ಮೂವರು ವ್ಯಕ್ತಿಗಳು ಪರಿಹಾರ್‌ನ ತಾಯಿ ಗುಲ್ಶನ್ ಬೇಗಂ, 8 ವರ್ಷದ ಸಹೋದರಿ ಸೀರತ್ ಬಾನೂ ಮತ್ತು 6 ವರ್ಷದ ಕಾಜಿಯಾ ಬಾನೂ.
#WATCH | J&K: A cloudburst in Rajgarh, Ramban claimed 3 lives while leaving 4 others missing. District Administration has mobilised NDRF and all available resources for search, rescue and relief operations. pic.twitter.com/0FkIe6kwle
— ANI (@ANI) August 28, 2024
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 30ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಆಗಸ್ಟ್ 30 ಮತ್ತು ಸೆಪ್ಟೆಂಬರ್ 1ರಂದು ಜಮ್ಮು ಮತ್ತು ಕಾಶ್ಮೀರದ ಹಲವು ಸ್ಥಳಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ