ಜೈಪುರ: ರಾಜಸ್ಥಾನದ (Rajasthan) ಭಿಲ್ವಾರಾ ಜಿಲ್ಲೆಯಲ್ಲಿ ಸ್ಟಾಂಪ್ ಪೇಪರ್‌ಗಳಲ್ಲಿ ಸಹಿ ಹಾಕಿಸಿಕೊಂಡು ಹುಡುಗಿಯರನ್ನು ಮಾರಾಟ ಮಾಡಲಾಗಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot), ಈ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ನಿಯೋಜಿಸಲಾಗಿದೆ. ತಪ್ಪು ಮಾಡಿದವರು ಯಾರೇ ಆಗಲಿ ಅವರನ್ನು ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಇದೊಂದು ಆಘಾತಕಾರಿ ಘಟನೆಯಾಗಿದ್ದು, ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸುವುದಾಗಿ ನಮ್ಮ ಸರ್ಕಾರ ಭರವಸೆ ನೀಡುತ್ತದೆ ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ರಾಷ್ಟ್ರೀಯ ಮಹಿಳಾ ಆಯೋಗ (NCW), ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಮತ್ತು ರಾಜಸ್ಥಾನದ ಮಹಿಳಾ ಆಯೋಗ (RSCW) ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
Rajasthan | We have received this information. Teams have been deployed to investigate everything. We will make sure a proper probe is done. No one will be spared: Rajasthan CM Ashok Gehlot on reports of Bhilwara girls’ trade pic.twitter.com/MLkAQg2idC
— ANI MP/CG/Rajasthan (@ANI_MP_CG_RJ) October 28, 2022
ಏನಿದು ಘಟನೆ?:
ರಾಜಸ್ಥಾನದಲ್ಲಿ ಸ್ಟಾಂಪ್ ಪೇಪರ್‌ಗಳ ಮೇಲೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು 8 ವರ್ಷದ ಹುಡುಗಿಯರನ್ನು ಮಾರಾಟ ಮಾಡಲಾಗಿತ್ತು. ನಂತರ ಈ ಪ್ರಕರಣದ ಬಗ್ಗೆ ಎದ್ದ ವಿವಾದಗಳನ್ನು ಇತ್ಯರ್ಥಗೊಳಿಸಲು ಗ್ರಾಮ ಜಾತಿ ಮಂಡಳಿಗಳ ಆದೇಶದ ಮೇರೆಗೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ರಾಜಸ್ಥಾನದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಈ ಬಗ್ಗೆ ಬುಧವಾರ ವರದಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ನೋಟಿಸ್ ನೀಡಿತ್ತು.
ಇದನ್ನೂ ಓದಿ: ನಿರಂತರ ಅತ್ಯಾಚಾರ, 5 ಬಾರಿ ಗರ್ಭಪಾತ: ಚಳ್ಳಕೆರೆ CPI ವಿರುದ್ಧ ರೇಪ್ ಕೇಸ್ ದಾಖಲಿಸಿ ಈಗ ಉಲ್ಟಾ ಹೊಡೆದ ಯುವತಿ
ಜಾತಿ ಮಂಡಳಿಯು ವ್ಯಕ್ತಿಯೊಬ್ಬನಿಗೆ ಮೊದಲು ತನ್ನ ಸಹೋದರಿಯನ್ನು ಮಾರಾಟ ಮಾಡಿ, ನಂತರ ಅವನ 12 ವರ್ಷದ ಮಗಳನ್ನು 15 ಲಕ್ಷ ರೂ. ಸಾಲಕ್ಕೆ ಬದಲಾಗಿ ಮಾರಾಟ ಮಾಡಬೇಕೆಂದು ಸೂಚಿಸಿತ್ತು. ಮತ್ತೊಬ್ಬ ಬಾಲಕಿಯನ್ನು 6 ಲಕ್ಷ ರೂ.ಗೆ ಮಾರಾಟ ಮಾಡಿ ಆಗ್ರಾಕ್ಕೆ ಕರೆದೊಯ್ಯಲಾಗಿತ್ತು. ಅವಳನ್ನು ಮತ್ತೆ 3 ಬಾರಿ ಮಾರಲಾಗಿತ್ತು. ಆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದರಿಂದ ಆಕೆ 4 ಬಾರಿ ಗರ್ಭಿಣಿಯಾಗಿದ್ದಳು. ಆಕೆಯ ತಂದೆ ತನ್ನ ಹೆಂಡತಿಯ ಚಿಕಿತ್ಸೆಗಾಗಿ ತೆಗೆದುಕೊಂಡ 6 ಲಕ್ಷ ರೂ. ಹಣ ವಾಪಾಸ್ ನೀಡಲು ಮತ್ತೆ ಆ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು. ಆಕೆಯ ಮೇಲಾದ ನಿರಂತರ ದೌರ್ಜನ್ಯದಿಂದ ಆಕೆ ಸಾವನ್ನಪ್ಪಿದ್ದಳು.
ಹಣಕಾಸಿನ ವಹಿವಾಟು ಮತ್ತು ಸಾಲದ ವಿವಾದಗಳ ಸಂದರ್ಭದಲ್ಲಿ ಹಣವನ್ನು ವಸೂಲಿ ಮಾಡಲು ಹುಡುಗಿಯರನ್ನು ಹರಾಜು ಮಾಡಲಾಗಿತ್ತು. ಆ ಬಾಲಕಿಯರನ್ನು ವಿದೇಶಕ್ಕೆ ಸಾಗಿಸಲಾಗುತ್ತಿತ್ತು. ಅಲ್ಲಿ ಅವರಿಗೆ ದೈಹಿಕ ಕಿರುಕುಳ, ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ ನೀಡಲಾಗುತ್ತಿತ್ತು.